ಮಹಲಿಂಗಪುರ

ಕರ್ನಾಟಕ ಏಕೀಕರಣ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಅಪಾರ: ಮಾರುತಿ ಶರಣರು

ಕರ್ನಾಟಕ ಏಕೀಕರಣ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಅಪಾರ: ಮಾರುತಿ ಶರಣರು

ಮಹಾಲಿಂಗಪುರ 03:  ಪುಣ್ಯ ಪುರುಷರ ನಾಡು ಅನೇಕ ಮಹಾತ್ಮರ ತಪೋ,ಭೂಮಿ ಈ ನಮ್ಮ ಕರ್ನಾಟಕ ಅದರಲ್ಲಿ ಇಂಚಗೇರಿ ಮಠದ ಮಹಾಪ್ರಭು ಮಾಧವಾನಂದರು ಒಬ್ಬರು ಬ್ರಿಟಿಷರು ವಿರುದ್ದ ಹೋರಾಟ ಮಾಡಿ ಭಾರತದ ಸ್ವಾತಂತ್ರ ಹೋರಾಟಕ್ಕೆ ತಮ್ಮದೇ ಕೊಡುಗೆ ನೀಡಿದರು. ಕರ್ನಾಟಕವನ್ನು ಏಕೀಕರಣ ಮಾಡುವಲ್ಲಿ ಇವರ ಕೊಡುಗೆ ಅಪಾರವಾದುದು ಎಂದು ಕಂಕನವಾಡಿಯ ಪ್ರವಚನಕಾರ ಮಾರುತಿ ಶರಣರು ಹೇಳಿದರು. 

 ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಗಿರಿಮಲ್ಲೇಶ್ವರ ಆಶ್ರಮದಲ್ಲಿ ನಡೆದ ಮಾಧವಾನಂದರ 108 ನೇ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕ್ಷೇತ್ರ ಇಂಚಗೇರಿ ಮಠದ ಮಾಧವಾನಂದ ಪ್ರಭೂಜಿ ಸ್ವಾತಂತ್ಯ್ರ ಹೋರಾಟಗಾರ, ಸಾಮಾಜಿಕ ಚಿಂತಕ, ಕ್ರಾಂತಿಯೋಗಿ ಸಮರ್ಥ ಮಾಧವಾನಂದ ಪ್ರಭೂಜಿಯವರು ಸಮಾಜದಲ್ಲಿ ಸಮಾನತೆ ತರಲು ಸಾಕಷ್ಟು ಹೋರಾಟ ಮಾಡಿ ಸುಮಾರು 26000 ಸಾವಿರಕ್ಕೂ ಹೆಚ್ಚು ಅಂತರಜಾತಿ ವಿವಾಹ ನೆರವೇರಿಸಿ ಪ್ರಭುದ್ದತೆ ಮೆರೆದರು ಎಂದರು. 

ಪ್ರಾಸ್ತವಿಕವಾಗಿ ಮಾತನಾಡಿದ ಸ್ಥಳೀಯ ಗಿರಿಮಲ್ಲೇಶ್ವರ ಟ್ರಸ್ಟ್‌ ಅಧ್ಯಕ್ಷ ಡಾ ಸಂಗಮೇಶ ಹಿಡಕಲ್ ಮಾಧವಾನಂದ ಪ್ರಭೂಜಿಯವರ ಆದರ್ಶಗಳು ಇಂದಿನ ಯುವಕರಿಗೆ ಸ್ಫೂರ್ತಿ ಆಗಿವೆ .ಕರ್ನಾಟಕ ಮಹಾರಾಷ್ಟ್ರದ ಇಂಚಗೇರಿಮಠದ ವಿವಿಧ ಶಾಖಾ ಮಠ, ಆಶ್ರಮ, ಭಜನಾ ಮಂದಿರಗಳಲ್ಲಿ ಅವರ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ ಎಂದರು. 

ಮಾರಾಪುರದ ಶ್ರೀಮಂತ ಮಹಾರಾಜರು ಮಾತನಾಡಿ ಇಂಚಗೇರಿ ಮಠವು ಅಧ್ಯಾತ್ಮ ಸಾಂಪ್ರದಾಯಕ್ಕೆ ಸಾಮಾಜಿಕ ತಿರುವು ಕೊಟ್ಟ ಕೀರ್ತಿ ಮಾಧವಾನಂದ ಪ್ರಭೂಜಿಯವರಿಗೆ ಸಲ್ಲುತ್ತದೆ. ಅವರದು ಬಹುಮುಖ ವ್ಯಕ್ತಿತ್ವ ಮಾಧವಾನಂದ ಪ್ರಭೂಜಿ ಮಾನವೀಯತೆ ಮಹಾಪೋಷಕತ್ವ, ಕರ್ನಾಟಕ ಎಕೀಕರಣದ ರೂವಾರಿ, ಗೋವಾ ವಿಮೋಚನಾ ಹೋರಾಟಗಾರ, ಪರಿಸರವಾದಿ, ಕೃಷಿಕ, ಆತ್ಮಜ್ಞಾನಿ ಮತ್ತು ದಾರ್ಶನಿಕ ಎಲ್ಲ ಒಟ್ಟಿಗೆ ಆಗಿದ್ದವರು. ಅವರ ಜೀವನದ ಸುತ್ತ ಹಲವಾರು ಪವಾಡ ಕತೆಗಳು ಹೆಣೆದುಕೊಂಡಿವೆ. ಅವರು ಸಾಕ್ಷಾತ್ ದೇವರ ಸ್ವರೂಪಿಗಳಾಗಿದ್ದರು. ಇಂಚಗೇರಿ ಸಾಂಪ್ರದಾಯಕ ಭಕ್ತರನ್ನೂ 'ದೇಶ ಸೇವೆ ಈಶ ಸೇವೆ' ಎಂಬ ದೃಢ ನಂಬುಗೆ ಹುಟ್ಟಿಸಿ ಸ್ವಾತಂತ್ರ್ಯ ಸಂಗ್ರಾಮದತ್ತ ತಿರುಗಿಸಿದ ಶ್ರೇಯಸ್ಸು ಮಾಧವಾನಂದ (ಮಹಾದೇವಪ್ಪ ಮುರಗೋಡರವಗೆ)ರಿಗೆ ಸಲ್ಲುತ್ತದೆ ಎಂದರು. 

ಕಣದಾಳದ ಈರಯ್ಯ ಸ್ವಾಮಿಗಳು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟ, ವಿಜಯಪೂರ ಜಿಲ್ಲೆಗಳಲ್ಲದೇ ಮಹಾರಾಷ್ಟ್ರದ ಗಡಿಗುಂಟ ಮಹಾದೇವರು ಮುರಗೋಡ ಮಿಂಚಿನಂತೆ  ಸಂಚರಿಸಿ ಬ್ರಿಟಿಷರ ಸಾಮ್ರಾಜ್ಯ ಶಾಹಿಯ ಆಡಳಿತ ಯಂತ್ರ ಕಂಗೆಡೆಸಿದರೂ. 1942 ರಲ್ಲಿ ಧಾರವಾಡ ಜಿಲ್ಲೆಯ ಹುಲಕೋಟಿ, ಸಾವಳಗಿ ಪೊಲೀಸ ಠಾಣೆ, ತೇಗೂರ ಪ್ರವಾಸಿ ಮಂದಿರ, ಸಂಪಗಾಂವ ಚಾವಡಿ ನಿಷ್ಕ್ರೀಯಗೊಳಿಸಿದರು. ವಿಜಯಪೂರ-ಸೋಲ್ಲಾಪೂರ ಮಧ್ಯದರೇಲ್ವೆ ಹಳಿಗಳನ್ನೂ ಕಿತ್ತೆಸೆದರು. ಉಗ್ರ ಹೋರಾಟ ನಡೆಸುವ ಮೂಲಕ ಚಲೇಜಾವ ಚಳವಳಿಯಲ್ಲಿ ತಮ್ಮ ಭಕ್ತವೃಂದವನ್ನು ಸೆಳೆದರು. ಹಿಪ್ಪರಗಿ ಕ್ಷೇತ್ರದಲ್ಲಿ ವೈಯಕ್ತಿಕ ಸತ್ಯಾಗ್ರಹದಲ್ಲಿಯೂ ಕೂಡಾ ಮಹದೇವರು ಪಾಲ್ಗೊಂಡರು ಇಂಥ ಮಹಾತ್ಮರ ಜಯಂತಿ ಕಾರ್ಯಕ್ರಮದಿಂದಾದರು ಎಲ್ಲರೂ ಅವರ ತತ್ವಗಳನ್ನು ಪಾಲಿಸುವಂತಾಗಲಿ ಎಂದರು. 

ಬನಹಟ್ಟಿಯ ಕೋಪರ್ಡೇ ಮಾತನಾಡಿ ಇಂಚಗೇರಿ ಮಠಕ್ಕೆ ಭರತ ಖಂಡದಲ್ಲಿಯೇ ತನ್ನದೇ ಆದ ವೈಶಿಷ್ಠ್ಯತೆಯನ್ನು ತಂದುಕೊಟ್ಟಿದ್ದಾರೆ. ಈಗಲೂ ವಿವಿಧ ಜಾತಿಯ ಜನ ಸಾಮರಸ್ಯದಿಂದ ಸಾಮೂಹಿಕ ಕೃಷಿ ಮತ್ತು ಒಂದಿಲ್ಲಾ ಒಂದು ಕಾಯಕದೊಂದಿಗೆ ನಿರತರಾಗಿ ಸಾಮೂಹಿಕವಾಗಿ ವಾಸಿಸುತ್ತಿದ್ದಾರೆ ಎಂದರು.  

ಇದಕ್ಕೂ ಮುನ್ನ ಮಾಧವಾನಂದರ ಭಾವಚಿತ್ರದೊಂದಿಗೆ ವಿವಿಧ ವಾದ್ಯಗಳೊಂದಿಗೆ ಗಿರಿಮಲ್ಲೇಶ್ವರ ಆಶ್ರಮದಿಂದ ಗಾಂಧಿ ವೃತ್ತ, ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತ, ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ, ರಾಣಿ ಚನ್ನಮ್ಮ ವೃತ್ತದ ಮೂಲಕ ಅದ್ದೂರಿ ಮೇರವಣಿಗೆ ಯೊಂದಿಗೆ ಗಿರಿಮಲ್ಲೇಶ್ವರ ಆಶ್ರಮವನ್ನು ತಲುಪಿತು.  

 ಬಾಬು ಜಾಡರ, ದುಂಡಪ್ಪ ಜಾಧವ, ಭೀಮಶಿ ಸಸಾಲಟ್ಟಿ, ಗೌಡಪ್ಪಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಕಲ್ಲಪ್ಪ ಚಿಂಚಲಿ, ಮನು ಅಂಬಿ, ಗಜಾನನ ಶಿರೋಳ,ಮಲ್ಲು ಮಗದುಮ್,ಸಂಜು ಶಿರೋಳ, ಷಣ್ಮುಖ ಕದ್ದಿಮನಿ, ಗುರ​‍್ಪ ಪಂಕಿ, ಮಹಾಲಿಂಗಪ್ಪ ಹೊಸೂರ್, ಮೆಹಬೂಬ ಸನದಿ, ಶಂಕರ ನಿಲಾರಿ, ಶ್ರೀಶೈಲ ಪಟ್ಟಣಶೆಟ್ಟಿ, ಗೀರೀಶಜಾಧವ, ಶಿವು ಜಮಖಂಡಿ, ಚಂದ್ರ​‍್ಪ ದೋಣಿ, ಮಹಾಂತೇಶ ಮಗದುಮ್,ಗುರುಸಿದ್ದಪ್ಪ ಅಂಬಿ, ಡಾ ರಾಚಪ್ಪ ಚುಮ್ಮಡ, ನಾಗಪ್ಪ ದೋಣಿ,ರಮೇಶ ಸಬಕಾಳೆ,ಬಿ ಎಸ್ ಮಟಗಾರ, ಪ್ರಕಾಶ ಗೋಕಾವಿ, ಗುರುಪಾದ ಉರಭಿನ್ನವರ, ಸಿದ್ದರಾಮ ಜಗದಾಳ, ಭೀಮಪ್ಪ ಗಜಾಗೋಳ, ಚೇತನ ಹುಲ್ಲುರ,ಗಂಗಾಧರ ಮಗದುಮ್,ಶ್ರೀಮತಿ ಮೈತ್ರಾದೇವಿ ಕದ್ದಿಮನಿ, ಸುಹಾಸಿನಿ ಕದ್ದಿಮನಿ, ಅನ್ನಪೂರ್ಣ ಕೆಂಪಶೆಟ್ಟಿ,ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಡಾ ಮಹಾದೇವ ಕದ್ದಿಮನಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ