ಮುದ್ದೆಬಿಹಾಲ್

ಶಾಸಕರು ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿ: ಶಾಂತಗೌಡ

ಶಾಸಕರು ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿ: ಶಾಂತಗೌಡ

ಮುದ್ದೇಬಿಹಾಳ: ಪಟ್ಟಣಗಳಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಸಿಸಿ ರಸ್ತೆ ಮಾಡಿ ಅವುಗಳಿಗೆ ವಿದ್ಯುತದೀಪ ಹಾಕಿದರೇ ಬಹುದೊಡ್ಡ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ತಿಳಿದಿರುವ ಶಾಸಕರು ಕೃಷ್ಣಾ ನದಿ ತೀರದ ಗ್ರಾಮಗಳ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಅಂದಾಗ ಮಾತ್ರ ಶಾಸಕರನ್ನಾಗಿ ಗೆಲ್ಲಿಸಿದ ಜನರಿಗೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ)ಯವರು ವಾಗ್ದಾಳಿ ನಡೆಸಿದರು. 

ಪಟ್ಟಣದ ವಿಜಯಪುರ ರಸ್ತೆ ಮಾರ್ಗದಲ್ಲಿರುವ ರಾಯಲ್ ಆರ್ಕೇಡ್ ಬಿಲ್ಡಿಂಗ್ ನಲ್ಲಿರುವ ಕಚೇರಿಯಲ್ಲಿ ಶುಕ್ರವಾರ ನಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು  

ಸ್ಥಳಿಯ  ಶಾಸಕರ ಹಾಗೂ ಮದ್ಯೆ ಯಾವೂದೇ ಕೌಟುಂಭಿಕವಾಗಿರಲಿ, ಹಣಕಾಸಿನಿಂದಾಗಲಿ ಅಥವಾ ಇತರೇ ವ್ಯವಹಾರದಿಂದಾಗಿ ಭಿನ್ನಾಭಿಪ್ರಾಯಗಳಿಲ್ಲ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೇ ಅವರ ಅನೈತಿಕ ರಾಜಕಾರಣ, ಬ್ರಷ್ಟರಾಜಕಾರಣ, ಗುಂಡಾವರ್ತನೆ ರಾಜಕಾರಣ ಬಗ್ಗೆ ನನ್ನ ವಿರೋಧವಿದೆ ಈ ಕಾರಣದಿಂದ ನಾನು ಅವರಿಂದ ದೂರ ಉಳಿದಿದ್ದೇನೆ. ಪ್ರತಿ ಬಾರಿ ಮಳಿಗಾಲ ಸಂದರ್ಭದಲ್ಲಿ ಕೃಷ್ಣಾ ನದೀತೀರದ ಗ್ರಾಮಗಳಾದ ತಂಗಡಗಿ, ಗಂಗೂರು, ಕುಂಚಗನೂರು, ಕಲಮದಿನ್ನಿ, ದೇವೂರು, ಕಾಳಗಿ ಸೇರಿದಂತೆ ಬಹುತೇಕ ಗ್ರಾಮಗಳು ಆಲಮಟ್ಟಿ ಜಲಾಶಯದಿಂದ ಬಿಡುಗಡೆಗೊಂಡ ಕೃಷ್ಣಾ ನದಿ ಪ್ರವಾಹದಿಂದಾಗಿ ರಸ್ತೆಗಳು ಬಂದಾಗಿ ತೀವೃ ಸಂಕಷ್ಟವನ್ನು ಅನುಭವಿಸುವಂತಾಗುತ್ತಲೇ ಇರುವುದನ್ನು ಗಮನಿಸುತ್ತಿದ್ದೇವೆ.  

ಆದರೇ ಕಳೇದ ವರ್ಷ 2021 ರಲ್ಲಿ ಸುರಿದ ಮಳೆಯಿಂದಾಗಿ ನೆರೆಬಂದು ತೀವೃ ಸಂಕಷ್ಟವನ್ನು ಎದುರಿಸುತ್ತರುವುದನ್ನು ಗಮನಿಸಿದ ಈ ಹಿಂದಿನ ವಿಜಯಪುರ ಜಿಲ್ಲಾ ಉಸ್ತುವಾರಿಗಳಾಗಿದ್ದ ಶಶಿಕಲಾ ಜೊಲ್ಲೆಯವರು  ಹಾಗೂ ಕೇಂದ್ರದಿಂದ ಆಗಮಿಸಿದ್ದ ವಿಶೇಷ ತನಿಖಾ ತಂಡ ಅಧಿಕಾರಿಗಳು ನೆರೆ ಪೀಡಿತ ಗ್ರಾಮಗಳಿಗೆ ತೆರಳಿ ಪರಿಶಿಲನೆ ನಡೆಸಿ ಈ ಭಾಗದ ರಸ್ತೆ ಅಭಿವೃದ್ಧಿಕರಣಕ್ಕಾಗಿ ಸುಮಾರು 19 ಕೋಟಿಗಳ ವೆಚ್ಚದೆಲ್ಲಿ ಕಾಮಗಾರಿ ನಡೆಸಲು ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಆದೇಶದ ಮೇರಗೆ ಎಷ್ಟೀಮೇಟ್ ತಯಾರಿಸಿ ನಡೆಸಲು ಸರಕಾರ ಆದೇಶ ಮಾಡಿತು. ಆದರೇ ಶಾಸಕರು ಗುತ್ತಿಗೆದಾರರ ಅನುಕೂಲಕ್ಕಾಗಿ ಮತ್ತು ಅವರಿಂದ ತಮಗೆ ಬರುವ ಕಮಿಶನ್ ಆಸೆಗಾಗಿ ಈ ಎಷ್ಟೀಮೇಟ್‌ನ್ನೇ ಸರಕಾರದಿಂದ ಬದಲಿ ಮಾಡಿಸಿ ಬೇರೆ ರಸ್ತೆ ಮಾಡಲು ವರ್ಗಾವಣೆ ಮಾಡಿದರು. ಸಧ್ಯ ಈ ಬಗ್ಗೆ ಕನ್ನಡ ಪ್ರಭ ದಿನಪತ್ರಿಕೆ ನೈಜ ವರದಿ ಮಾಡುವ ಮೂಲಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನ ಸೇಳೆಯುವ ಕಾರ್ಯ ಮಾಡಿದ್ದೇ ದೊಡ್ಡ ತಪ್ಪು ಎನ್ನುವ ರೀತಿಯಲ್ಲಿ ಬಂಬಿಸಿ ವರದಿ ಮಾಡಿದವರ ಮೇಲೆ ಬೆದರಿಸುವ ಕಾರ್ಯ ಮಾಡಿದ್ದು ಸರಿಯಲ್ಲ ಇದು ತಮ್ಮ ರಾಜಕೀಯ ಭವಿಷ್ಯಕ್ಕೆ ತಮ್ಮ ಘನತೆಗೆ ಒಳ್ಳೆಯದಲ್ಲ ಎಂದು ವಿವರಿಸಿದರು. 

ಸಧ್ಯ ಮತಕ್ಷೇತ್ರದ ಶಾಸಕರಾಗುವುದಕ್ಕಿಂತ ಪೂರ್ವದಲ್ಲಿ ಎ ಎಸ್ ಪಾಟೀಲ(ನಡಹಳ್ಳಿ)ಯವರು ಜೆಡಿಎಸ್ ನಲ್ಲಿದ್ದರು ಆಗ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಬೇಟಿ ಮಾಡಿ ಅವರಿಂದ ಮೂರುವರೆಕೋಟಿ ಹಣದಲ್ಲಿ ಸೀರೆ ತಂದು ಮತಕ್ಷೇತ್ರದ ಜನರಿಗೆ ಹಂಚಿ  ಅವರ ಹಣದಲ್ಲಿಯೇ ಪ್ರಚಾರ ಮಾಡಿ ಕೊನೆಗೆ ಅವರಿಗೇ ಟೋಪಿ ಹಾಕಿದರು ಇದರಿಂದಾಗಿ ನನ್ನ ಮನಸಿಗೆ ಬೇಸರವೇನಿಸಿತು. ಹಾಗಾಗಿ ಇವರ ಇಂತಹ ಅನೈತಿಕ ರಾಜಕಾರಣದಿಂದ ಬೇಸತ್ತು ಇವರೊಂದಿಗೆ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದು ನನ್ನಷ್ಟಕ್ಕೆ ನಾನೇ ಅಥೈಸಿಕೊಂಡು ಕೆಂಬಾವಿಯಲ್ಲಿನ ನನ್ನ ಕೃಷರ್ ಪ್ಲ್ಯಾಂಟ್ ಉದ್ಯಮದಲ್ಲಿ ನಾನು ತೊಡಗಿಸಿಕೊಂಡೆ. ಮುಂದೆ ಕೆಲವೇ ದಿನಗಳಲ್ಲಿ ಇವರು ಜೆಡಿಎಸ್ ನಿಂದ ಬಿಜೆಪಿ ಸೇರೆ​‍್ಡಗೊಂಡರು ಬಳಿಕ ಚುನಾವಣೆ ಘೋಷಣೆಯಾಯಿತು ಈ ವೇಳೆ ನನ್ನ ಸಹೋದರ ಇದ್ದರೇ ಮಾತ್ರ ನಾನು ಗೆಲ್ಲಲು ಸಾಧ್ಯ ಎಂದು ತಾಲೂಕಿನ ಕೆಲ ಹಿರಿಯ ಮುಖಂಡರನ್ನು ಮುಂದೆ ಮಾಡಿ ನನ್ನ ಬಳಿ ಕಳಿಸಿದ್ದರು ಅವರು ನನ್ನ ಮನೋಲಿಸಿ ಕರೆಯಿಸಿಕೊಂಡರು. ಆಗ ನಾನು ಅವರ ಮಾತಿಗೆ ಮನ್ನಣೆ ನೀಡಿ  ಶಾಸಕರೊಂದಿಗೆ ಬೆರೆತು ನದಿ ತೀರದ ಗ್ರಾಮಗಳಲ್ಲಿ ಮತ್ತು, ಬಸರಕೋಡ, ಯರಝರಿ,ಮೂರಾಳ, ರಕ್ಕಸಗಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಂಚರಿಸಿ ಅಲ್ಲಿರು ನನ್ನೊಂದಿಗೆ ಗುರ್ತಿಸಿಕೊಂಡಿದ್ದ ಜಾತ್ಯಾತೀತ ಹಾಗೂ ಪಕ್ಷಾತೀತ ನೂರಾರು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದರಿಂದ ಎಲ್ಲರೂ ಒಗ್ಗಟ್ಟಾಗಿ ನಿಂತು ಇಂದು ಅವರನ್ನು  ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. 

ಈ ನಿಟ್ಟಿನಲ್ಲಿ ನದಿ ತೀರದ ಗ್ರಾಮಗಳ ರಸ್ತೆಯನ್ನು ಶಾಶ್ವತ ರಸ್ತೆ ನಿರ್ಮಿಸಬೇಕು ಸಧ್ಯ ಅದು ಸಾಧ್ಯವಾಗಲಿಲ್ಲವೆಂದರೇ ತಾತ್ಕಾಲಿಕವಾಗಿ ಗಟ್ಟಿ ಮಣ್ಣು ಬಳಸಿ ರಸ್ತೆ ನಿರ್ಮಿಸಿದರೇ ಆಭಾಗದ ಜನರಿಗೆ ಮತ್ತು ರೈತರು ಬೆಳೆದ ಕಬ್ಬು ಸೇರಿದಂತೆ ಇತರೇ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡುವಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಮುಂದಾಗಬೇಕು ಇಲ್ಲದಿದ್ದರೇ ಆ ಎಲ್ಲ ಗ್ರಾಮಗಳ ರೈತರ ಹಾಗೂ ಜನರ ನೇತೃತ್ವದಲ್ಲಿ ಸಂದಂಭಪಟ್ಟ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದರು. 

 ಯಾರೋ ನನ್ನ ಕುಟುಂಭದಲ್ಲಿ ಬೆಂಕಿ ಹಚ್ಚುವ ಕಾರ್ಯಮಾಡುತ್ತಿದ್ದಾರೆ. ನಾನು ಮತ್ತು ನನ್ನ ಸಹೋದರ ಶಾಂತಗೌಡ ಪಾಟೀಲ ಅವರು ನನ್ನ ಜೊತೆಗೆ ಇರುತ್ತಾರೆ ಎಂದು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಮಾತ್ರವಲ್ಲದೇ ನನ್ನ ಜೊತೆಗೆ ಗುರ್ತಿಸಿಕೊಂಡಿದ್ದ ಸ್ನೇಹಿತರಿಗೆ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ ಜೊತೆಗೆ ಕೆಲವರ ಮೇಲೆ ಪೋಲಿಸ್ ಇಲಾಖೆಯನ್ನು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಗೂಂಡಾ ಪ್ರಕರಣ ದಾಖಲಿಸುವ ಹುನ್ನಾರ ನಡೆಸುತ್ತಿದ್ದಾರೆ. ಹಾಗೆ ನನ್ನ ಮೊಬೈಲ್ ನಂಬರ್ ಕೂಡ ಕದ್ದಾಲಿಕೆ ಮೂಲಕ ನನ್ನ ವಯಕ್ತಿಕ ವ್ಯವಹಾರಗಳನ್ನು ಸಂಪರ್ಕಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಇದರ ನನ್ನ ಮನಸಿಗೆ ಬೇಸರವಾಗಿದೆ ಹಾಗಾಗಿ ಈ ಬಗ್ಗೆ ಹಿರಿಯ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ದೂರು ಕೂಡ ಸಲ್ಲಿದ್ದೇನೆ. 

ಯಾವೂದೇ ಕಾರಣಕ್ಕೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಜೊತೆ ಸೇರುವ ಪ್ರಶ್ನೇಯೇ ಇಲ್ಲ ಆದರೇ ಅವರ ಅನೈತಿಕ ರಾಜಕಾರಣ, ಬ್ರಷ್ಟರಾಜಕಾರಣ, ಗುಂಡಾವರ್ತನೆ ರಾಜಕಾರಣಕ್ಕೆ ಬೆಂಬಲಿಸಲು ತಯಾರಿಲ್ಲ ಮುಂದಿನ ದಿನಗಳಲ್ಲಿ ನಾನು ನನ್ನ ರಾಜಕೀಯದ ನಿರ್ದಾರವನ್ನು ತಿಳಿಸುತ್ತೇನೆ ಎಂದರು.ಈ ವೇಳೆ ಪುರಸಭೆ ನಾಮನಿರ್ದೇಶಿತ ಸದಸ್ಯ ಹುಲಗಪ್ಪ ನಾಯಕಮಕ್ಕಳ ಇದ್ದರು. 

ತಾಲೂಕಿನಲ್ಲಿ ಕೆಲ ಪತ್ರಕರ್ತರು ಶಾಸಕರ ಕೈಗೊಂಬೆಯಂತೆ ವರ್ತಿಸಿ ಅವರನ್ನು ಅವರ ಪುತ್ರನನ್ನು ಇಂದ್ರ, ಚಂದ್ರ, ದಾನಶೂರ ಕರ್ಣ ಎಂಬಿತ್ಯಾದಿ ಓಲೈಕೆ ಶಬ್ಧಗಳಿಂದ ವರ್ಣಸುತ್ತಿದ್ದಾರೆ ಮಾತ್ರವಲ್ಲದೇ ಅವರ ಜೊತೆಯಲ್ಲಿ ಸೀರೆ ಹಂಚುವುದು, ಕಾರ್ಯಕ್ರಮಗಳ ಮದ್ಯದಲ್ಲಿ ಎದ್ದು ನಿಂತು ಹೊಗಳುವುದು ಮಾಡುತ್ತಾರೆ ಕೆಲ ಪತ್ರಕರ್ತರು ನೈಜ ವರದಿಗಳನ್ನು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ ಇದರೀಂದ ಯಾರೋ ಪತ್ರಕರ್ತ ಮಾಡೋ ಇಂತಹ ಕೆಲಸಕ್ಕೆ ಇಡೀ ಪತ್ರಿಕಾ ರಂಗಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಇಂಗು ತಿಂದ ಮಂಗನಂತೆ ವರ್ತಿಸಿದ್ದಾರೆ ಅಭಿವೃದ್ಧಿ ಪೂರಕವಾದ ನೈಜ ವರದಿ ಮಾಡಿದ ವರದಿಗಾರರಿಗೆ ದೂರವಾಣಿ ಮೂಲಕ ಕರೆ ಮಾಡಿ ಅವಾಚ್ಛ ಶಬ್ಧಗಳಿಂದ ನಿಂದಿಸಿದ್ದನ್ನು ಬಲವಾಗಿ ಖಂಡಿಸುತ್ತೇನೆ ಈ ಕೂಡಲೇ ಶಾಸಕರು ಕ್ಷಮೆಯಾಚಿಸಬೇಕು.  

-ಶಾಂತಗೌಡ ಪಾಟೀಲ(ನಡಹಳ್ಳಿ) 


ಸುದ್ದಿ ಓದಿ