ಹಗರಿಬೊಮ್ಮನಹಳ್ಳಿ

ಪ.ಜಾ, ಪ.ಪಂ ಮೀಸಲಾತಿ ಹೆಚ್ಚಳಕ್ಕೆ ಶಾಸಕರು ಅಧಿವೇಶನದಲ್ಲಿ ಧ್ವನಿಯಾಗುವಂತೆ ಮನವಿ

ಪ.ಜಾ, ಪ.ಪಂ ಮೀಸಲಾತಿ ಹೆಚ್ಚಳಕ್ಕೆ ಶಾಸಕರು ಅಧಿವೇಶನದಲ್ಲಿ ಧ್ವನಿಯಾಗುವಂತೆ ಮನವಿ

ಹಗರಿಬೊಮ್ಮನಹಳ್ಳಿ 11: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮೀಸಲಾತಿಯಲ್ಲಿ ಏರಿಕೆ ಮಾಡುವಂತೆ ಸ್ಥಳೀಯ ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ತಾಲೂಕು ಎಸ್‌ಟಿ ಮಹಾಸಭಾವು ಶಾಸಕರಿಗೆ ಮನವಿ ನೀಡಿದರು. 

ಈ ವೇಳೆ ಅಧ್ಯಕ್ಷ ಟಿ.ವೆಂಕೋಬಪ್ಪ ಮಾತನಾಡಿ ಶೈಕ್ಷಣಿಕವಾಗಿ ಹಾಗೂ ಹುದ್ದೆಗಳ ಮೀಸಲಾತಿ ಹೆಚ್ಚಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಪ. ಜಾ.ಗೆ ಹದಿನೈದರಿಂದ 17ರಷ್ಟು ಮೀಸಲಾತಿ, ಎಸ್‌ಟಿ ಸಮುದಾಯಕ್ಕೆ 3ರಿಂದ 7.5ರಷ್ಟು ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಬೇಕು. ಎಸ್‌ಟಿ ಸಮುದಾಯದ ಪ್ರಸನ್ನಾನಂದ ಮಹಾಸ್ವಾಮಿಗಳು ಪ್ರೀಡಂಪಾರ್ಕ್‌ನಲ್ಲಿ 212ದಿನಗಳ ಕಾಲ ಧರಣಿ ನಡೆಸಿದ್ದರೂ ಸರಕಾರ ಮಾತ್ರ ಬೇಡಿಕೆ ಈಡೇರಿಸದಿರುವುದು ಶೋಚನೀಯ, ಎಸ್‌ಸಿ ಎಸ್‌ಟಿ ಸಮುದಾಯ ಎಲ್ಲಾ ಹಂತಗಳಲ್ಲಿ ಹೋರಾಟಗಳನ್ನು ಮಾಡಿದರು ಸರಕಾರ ಗಮನಿಸುತ್ತಿಲ್ಲ, ಹಾಗಾಗಿ ಮುಂಬರುವ ಅಧಿವೇಶನದಲ್ಲಿ ಶಾಸಕರು ಸಮುದಾಯಗಳ ಪರ ದ್ವನಿಯಾಗಬೇಕಿದೆ ಎಂದರು. 

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ, ಸೆರೆಗಾರ ಹುಚ್ಚಪ್ಪ, ಕಾಳಿ ಬಸವರಾಜ, ಡಿಶ್ ಮಂಜುನಾಥ, ಬೆಲ್ಲದ ರಾಮಣ್ಣ, ಆನಂದೇವನಹಳ್ಳಿ ಪ್ರಭಾಕರ, ಹಂಚಿನಮನಿ ರಮೇಶ್, ಗೆದ್ಲಗಟ್ಟಿ ತಿಮ್ಮಣ್ಣ, ಮಹೇಶ್ ಮಾದೂರು, ಉಡುಚಪ್ಪ, ಕನ್ನಿಹಳ್ಳಿ ಜಗದೀಶ್, ಕುಬೇರ​‍್ಪ, ಮರಿಯಪ್ಪ ಯಡ್ರಾಮ್ಮನಹಳ್ಳಿ, ಮಹೇಶ್, ಬಿಜಿಹಳ್ಳಿ ಮಹೇಶ್ವರ, ಉಮೇಶ, ಸಿ.ಹುಲುಗಪ್ಪ, ದಾದಮ್ಮನವರ ಬಸವರಾಜ, ವೀರೇಶ್ ಇತರರಿದ್ದರು. 


ಸುದ್ದಿ ಓದಿ