ಮಹಲಿಂಗಪುರ

ಪ್ರವಾಹ ಪೀಡಿತ ಗ್ರಾಮಕ್ಕೆ ಶಾಸಕರ ಸಹಿತ ತಾಲೂಕಾಢಳಿತದ ಭೇಟಿ

ಪ್ರವಾಹ ಪೀಡಿತ  ಗ್ರಾಮಕ್ಕೆ ಶಾಸಕರ ಸಹಿತ ತಾಲೂಕಾಢಳಿತದ ಭೇಟಿ
ಮಹಾಲಿಂಗಪುರ, ತೇರದಾಳ ಶಾಸಕ ಸಿದ್ದು ಸವದಿ ಅವರು ತಾಲೂಕಾಢಳಿತ ಜೊತೆಗೆ ಪ್ರವಾಹ ಪೀಡಿತ ಢವಳೇಶ್ವರ ಗ್ರಾಮಕ್ಕೆ ಭೇಟಿ ನೀಡಿ

ಮಹಾಲಿಂಗಪೂರ 19: ಮುಂಗಾರು ಮಳೆಯಿಂದ ಹಠಾತ್ ಪ್ರವಾಹ ತಲೆದೋರಿದ ಘಟಪ್ರಭಾ ನದಿ ಪ್ರದೇಶದ ಢವಳೇಶ್ವರ ಗ್ರಾಮಕ್ಕೆ ಶನಿವಾರ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು. 

ಶಾಸಕ ಸಿದ್ದು ಸವದಿ ಮಾತನಾಡುತ್ತಾ ಢವಳೇಶ್ವರ ಭಾಗದ ಘಟಪ್ರಭಾ ನದಿಗೆ 35ಸಾವಿರ ಹಾಗೂ ಕ್ರಿಷ್ಣಾ ನದಿಗೆ 1ಲಕ್ಷ 32ಸಾವಿರ ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದ್ದು, ಜೂನ್ ತಿಂಗಳಲ್ಲಿ ಈ ರೀತಿಯ ಪ್ರವಾಹ ಬಂದಿರುವುದು ಇದೇ ಮೊದಲು. ಇನ್ನೆರಡು ದಿವಸಗಳಲ್ಲಿ ಮಳೆ ಕಡಿಮೆಯಾಗಿ ಪ್ರವಾಹವೂ ತಗ್ಗುವ ಆಶಾಭಾವನೆ ಇದೆ. ಎಂತಹ ಪರಿಸ್ಥಿತಿ ಬಂದರೂ ಜನಸಾಮಾನ್ಯರ, ದನಕರುಗಳ ರಕ್ಷಣೆ ಮಾಡಲಿಕ್ಕೆ ಜಿಲ್ಲಾ ಹಾಗೂ ತಾಲೂಕಾಢಳಿತದ ರಕ್ಷಣಾ ತಂಡಗಳು ಸಿದ್ಧತೆಯಲ್ಲಿವೆ. ಕ್ಷೇತ್ರದ ಪ್ರವಾಹ ಪ್ರದೇಶಗಳಲ್ಲಿ ಗ್ರಾಮಪಂಚಾಯಿತಿಗಳಿಗೆ ನೋಡಲ್ ಅಧಿಕಾರಿಗಳನ್ನು ಸಹ ಈಗಾಗಲೇ ನಮ್ಮ ಭಾಗದ ತಹಶೀಲ್ದಾರರು ನೇಮಕ ಮಾಡಿ ಪರಿಸ್ಥಿತಿಯನ್ನು ಅವಲೋಕಿಸುತಿದ್ದಾರೆ ಎಂದರು. 

ಇಂತಹ ಪ್ರವಾಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾವನ್ನು ಹೇಗೆ ನಿಭಾಯಿಸುತ್ತೀರಿ ಹಾಗೂ ಹೊಲಗದ್ದೆಗಳಿಗೆ ನುಗ್ಗಿದ ನೀರು ಫಸಲುಗಳಿಗೆ ಹಾನಿಮಾಡುವುದರಿಂದ ಇದರ ಪರಿಹಾರ ಹೇಗೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಕೊರೋನಾ ಮಹಾಮಾರಿಯಾಗಲಿ, ಪ್ರವಾಹವಾಗಲಿ ದೈವದತ್ತವಾಗಿ ಬಂದಿರುವಂತಹದ್ದು ಅದನ್ನೂ ಸಹಿತ ಎದುರಿಸಲು ನಮ್ಮ ಸರ್ಕಾರ ಸಿದ್ಧವಿದೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ ಅಷ್ಟೇನೂ ಹಾನಿ ಕಂಡುಬರುತ್ತಿಲ್ಲ ಆದರೂ ಕೂಡ ಪ್ರವಾಹ ಇಳಿಮುಖವಾದ ನಂತರ ಅದರ ಲೆಕ್ಕಾಚಾರ ಎಂದು ಶಾಸಕರು ವರದಿಗಾರರಿಗೆ ಸಮಾಜಯಿಸಿ ನೀಡಿದರು.  

ಈ ಭೇಟಿ ಸಮಯದಲ್ಲಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂತೇಶ್ ಹಿಟ್ಟಿನಮಠ,ಢವಳೇಶ್ವರ ಗ್ರಾಂ.ಪ ಅಧ್ಯಕ್ಷ ಗೋಪಾಲ ಮಾಂಗ, ಉಪಾಧ್ಯಕ್ಷ ಲಕ್ಷ್ಮಣ ಪಟ್ಟಣಶೆಟ್ಟಿ, ಸದಸ್ಯರಾದ ಎಸ್ ಎಂ ಪಾಟೀಲ, ಮೌನೇಶ ಬಡಿಗೇರ, ಮಹಾದೇವ ಪಟ್ಟಣಶೆಟ್ಟಿ, ಪುರಸಭಾ ಸದಸ್ಯ ರವಿ ಜವಳಗಿ, ಗ್ರಾಮದ ಪಿಕೆಪಿಎಸ್ ಸದಸ್ಯ ಚಂದ್ರಕಾಂತ ಕೌಜಲಗಿ, ಪ್ರಗತಿಪರ ರೈತರಾದ ಮಹಾಲಿಂಗಪ್ಪ ಪಟ್ಟಣಶೆಟ್ಟಿ, ಕೃಷ್ಣಾಜಿ ದೇಶಪಾಂಡೆ, ಬಸಪ್ಪ ಕಮತಗಿ, ತಹಶೀಲ್ದಾರ್ ಸಂಜಯ್ ಇಂಗಳೆ, ಸರ್ಕಲ್ ಬಸವರಾಜ್ ತಾಳಿಕೋಟಿ, ನೋಡಲ್ ಅಧಿಕಾರಿ ಎಚ್ ಎಸ್ ಚಿತ್ತರಗಿ, ಗ್ರಾಮಲೆಕ್ಕಾಧಿಕಾರಿ ಟಿ.ಎಂ.ದೇವರಮನಿ, ಪಿಡಿಓ ಜಿ.ಜಿ ಕುಲಗೋಡ, ಆರ್‌.ಓ. ನಾಮದೇವ ಲಮಾಣಿ, ಸಿಪಿಐ ಕರುಣೇಶಗೌಡ ಹಾಗೂ ಮಹಾಲಿಂಗಪುರ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 



ಸುದ್ದಿ ಓದಿ