ಬಿಜೆಪಿ ಕಡೆಗೆ ಕೈ ಶಾಸಕರ ಒಲವು : ಮರೆ ಮಾಚಲು ಮಹಾ ನಾಯಕನಿಂದ ಆಪರೇಷನ್ ಹಸ್ತದ ಕುತಂತ್ರ : ಡಿಕೆಶಿ ವಿರುದ್ಧ ಮತ್ತೆ ರಮೇಶ ಜಾರಕಿಹೊಳಿ ವಾಗ್ದಾಳಿ
ಬೆಳಗಾವಿ : ಕಾಂಗ್ರೆಸ್ ಪಕ್ಷದ ೨೫ರಿಂದ ೩೦ ಹಿರಿಯ ಶಾಸಕರು ಕಾಂಗ್ರೆಸ್ ಸರಕಾರ ವಿರುದ್ದ ಮುನಿಸಿಕೊಂಡು ತಮ್ಮ ಮುಂದಿನ ನಿರ್ಣಯ ಮಾಡಲು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಸೇರುವವರಿದ್ದರು. ಈ ವಿಷಯ ಮರೆಮಾಚಲು ಆಪರೇಷನ್ ಹಸ್ತದ ಬಗ್ಗೆ ಮಹಾ ನಾಯಕ ಮಾಡಿದ ಕುತಂತ್ರವಾಗಿದೆ. ಇದು ಆಪರೇಷನ್ ಹಸ್ತ ಅಲ್ಲ, ಕಾಂಗ್ರೆಸ್ ಪಕ್ಷದ ಶಾಸಕರು ಕೈ ಬಿಡುತ್ತಾರೆ ಎಂದು ಆಪರೇಷನ್ ಹಸ್ತ ಅಂತಾ ಪೋಸ್ ಕೊಡುವ ನಾಯಕ ತನ್ನ ಪಕ್ಷಕ್ಕೆ ಅವಮಾನ ಆಗುತ್ತೆ ಎನ್ನುವ ಕಾರಣ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ನಾಟಕ ಮಾಡಿದ್ದಾನೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಡಿಸಿಎಂ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಬಳಿಕ ಪ್ರಥಮಬಾರಿಗೆ ಜಿಲ್ಲೆಯ ಅಥಣಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡು ಸಿಎಂಗೆ ಪತ್ರ ಬರೆದ ಬಳಿಕ ಆ ಎಲ್ಲ ಎಲ್ಲರೂ ಸೇರುವವರಿದ್ದರು. ಅವರು ಹೆದರಿಸಲು, ಆ ಕೈ ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಆಪರೇಷನ್ ಹಸ್ತದ ಬಗ್ಗೆ ಈಗ ನಾಟಕ ಮಾಡಿದ್ದಾರೆ. ಎಲ್ಲರ ದೃಷ್ಟಿ ಬೇರೆಡೆ ಸೆಳೆಯಲು ಈ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು.
ಆಪರೇಷನ್ ಹಸ್ತ ಮಾಡೋರು ಮೂರ್ಖರು, ಹೋಗೋರು ಮೂರ್ಖರು. ಫಲಿತಾಂಶ ಬಳಿಕ ಆರು ತಿಂಗಳ ರಾಜ್ಯ ಸರ್ಕಾರ ಬಗ್ಗೆ ಮಾತನಾಡಬಾರದು ಅಂದುಕೊAಡಿದ್ದೆ, ಈಗ ಮೂರು ತಿಂಗಳಾಗಿದೆ. ನಾವು ಆಪ್‌ರೇಷನ್ ಕಮಲ ಮಾಡಿದಾಗ ಅದಕ್ಕೆ ಒಂದು ಅರ್ಥ ಇತ್ತು, ಆಗ ಸರ್ಕಾರಕ್ಕೆ ಬಹುಮತ ಇರಲಿಲ್ಲ, ಅದು ನಮ್ಮ ಸ್ವಂತ ನಿರ್ಣಯವಾಗಿತ್ತು. ಆ ವೇಳೆಯಲ್ಲಿ ಬಿಜೆಪಿಯವರು ಯಾರೂ ನಮಗೆ ಆಹ್ವಾನ ನೀಡಿರಲಿಲ್ಲ. ಕಾಂಗ್ರೆಸ್‌ನಲ್ಲಿ ನಮಗೆ ಆದ ಅನ್ಯಾಯದಿಂದ ಹೊರಬಂದಿದ್ದೇವೆ ಹೊರತು ಆಪರೇಷನ್ ಕಮಲ ಏನಲ್ಲ, ನಾವು ಸ್ವತಃ ಮನಃಪೂರ್ವಕವಾಗಿ ಬಿಜೆಪಿಗೆ ಹೋಗಿ ಯಶಸ್ಸು ಕಂಡಿದ್ದೇವೆ. ಆದ್ರೆ ಈಗಿನ ಬಗ್ಗೆ ಸರ್ಕಾರಕ್ಕೆ ಶೋಭೆ ತರಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕ ನೀಡಿದ್ದಾರೆ.