ಪ್ರತಿ ಹಳ್ಳಿಗಳಲ್ಲಿ ಮದ್ಯಪಾನ ಮಾರಾಟ ತಡೆಗೆ ಶಾಸಕ ಸೋಮಲಿಂಗಪ್ಪ ಸೂಚನೆ
ಸಿರುಗುಪ್ಪ 20: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡುವವರ ವಿರುದ್ಧ ಅಬ್ಕಾರಿ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಎಂ ಎಸ್ ಸೋಮಲಿಂಗಪ್ಪ ತಾಲ್ಲೂಕು ಪಂಚಾಯತ್ ಸಭಾ ಭವನದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಿದರು. ಶಿಕ್ಷಣ ಇಲಾಖೆ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೂ ನಾನು ಕೇಳುವ ಮಾಹಿತಿಗೂ ತಾಳೆ ಆಗುತ್ತಿಲ್ಲ ಸೂಕ್ತ ಮಾಹಿತಿಯೊಂದಿಗೆ ಸಭೆಗಳಿಗೆ ಬರುವಂತೆ ತಾಕೀತು ಮಾಡಿದರು ಸರ್ಕಾರ ತಮಗೆ ನೀಡಿರುವ ಕಾರ್ಯಗಳನ್ನು ಸಮರ್ಕವಾಗಿ ನಿರ್ವಹಿಸಬೇಕು ಇದು ಸರ್ಕಾರದ ಆಶಯ ವಾಗಿದ್ದನ್ನು ಅದನ್ನು ಈಡೇರಿಸಲು ಶಾಸಕರೊಂದಿಗೆ ಅಧಿಕಾರಿಗಳು ಕೈ ಜೋಡಿಸಬೇಕು ಎಂದರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಈರಣ್ಣ ಅವರು ಮಾತನಾಡಿ ತಾಲ್ಲೂಕಿನಲ್ಲಿ ಶೇ. 97ರಷ್ಟು ಪ್ರಥಮ ಡೋಸ್ ಮತ್ತು ಎರಡನೇ ಡೋಸ್ ಶೇಕಡಾ 67ನೀಡಲಾಗಿದೆ ಡಿಸೆಂಬರ್ ಒಳಗೆ ಪ್ರಥಮ ಡೋಸ್ ಶೇಕಡಾ 100ರಷ್ಟು ನೀಡ ಲಾಗುವದು 2ನೇ ಡೋಸ್ ಶೇ.75ರಷ್ಟು ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ ಒಮಿಕ್ರಾನ್ ಕಾಣಿಸಿ ಕೊಂಡಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು .