ಮಹಲಿಂಗಪುರ

ಮೊರಾರ್ಜಿ ವಸತಿ ಶಾಲೆಗೆ ಶಾಸಕ ಸಿದ್ದು ಸವದಿ ಭೇಟಿ:ಪರೀಶೀಲನೆ

ಮೊರಾರ್ಜಿ ವಸತಿ ಶಾಲೆಗೆ ಶಾಸಕ ಸಿದ್ದು ಸವದಿ ಭೇಟಿ:ಪರೀಶೀಲನೆ


ಮಹಾಲಿಂಗಪುರ 27: ವಸತಿ ಶಾಲೆಯಲ್ಲಿರುವ ಎಲ್ಲ ಮಕ್ಕಳು ತಮ್ಮ ಸ್ವಂತ ಮನೆಯಲ್ಲಿರುವಂತೆ ಖುಷಿಯಾಗಿರಬೇಕು ಎಂದು ಶಾಸಕ ಸಿದ್ದು ಸವದಿ ಖಡಕ್ ಸೂಚನೆ ನೀಡಿದರು 

ಭಾನುವಾರ ಬೆಳಿಗ್ಗೆ ಸ್ಥಳೀಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು ಮಕ್ಕಳಿಂದ ಮಾಹಿತಿ ಪಡೆದು, ಅರೆಬರೆ ಬೆಂದ ಇಡ್ಲಿ, ಎಣ್ಣೆ ಇಲ್ಲದ ನೀರಿನಂತಹ ಸಾಂಬಾರನ್ನು ನೋಡಿದ ಶಾಸಕರು ಮೇಲ್ವಿಚಾರಕರು ಮತ್ತು ಅಡುಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು, ಮಕ್ಕಳೊಂದಿಗೆ ಮತ್ತೋಮ್ಮೆ ಸಮಾಲೋಚನೆ ನಡೆಸಿದಾಗ ಸಾಂಬಾರು, ಚಪಾತಿಗೆ ಎಣ್ಣೆ ಇರುವುದಿಲ್ಲ, ಬರೀ ಹಿಟ್ಟಿನವೆ, ಅನ್ನವನ್ನು ಕೂಡ ಸರಿಯಾಗಿ ಬೇಯಿಸುವುದಿಲ್ಲ ಮತ್ತು ರುಚಿಯೂ ಇರುವುದಿಲ್ಲ ಹೀಗಾಗಿ ನಮಗೆ ಇಂತಹ ಆಹಾರವನ್ನು ತಿನ್ನಲು ಆಗುತ್ತಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದರು. ನಂತರ ಅಡುಗೆಯವರು ಈ ರೀತಿ ಹೇಳಿದ್ದಕ್ಕೆ ಬಾಯಲ್ಲಿ ಹುಳ ಬೀಳಲಿ ಎನ್ನುವ ವಿಷಯವನ್ನೂ ಸಹ ವಿದ್ಯಾರ್ಥಿಗಳು ಶಾಸಕರಿಗೆ ತಿಳಿಸಿದರು. ಇದರಿಂದ ಮತ್ತಷ್ಟು ಕೋಪಗೊಂಡ ಶಾಸಕರು ಮಕ್ಕಳ ರುಚಿಗೆ ತಕ್ಕ ಆಹಾರ ಬೇಯಿಸಿ ಇಲ್ಲ ನಿಮ್ಮನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪೋತದಾರ ಅವರಿಗೆ ದೂರವಾಣಿ ಮೂಲಕ ತಕ್ಷಣವೇ ಭೇಟಿ ನೀಡಲು ಮತ್ತು ಅವ್ಯವಸ್ಥೆ ಸರಿಪಡಿಸಲು ಆದೇಶ ಮಾಡಿದರು. 

ವಸತಿನಿಲಯದ ಪ್ರತಿ ಕೊಠಡಿಯಲ್ಲಿ ಇಲಾಖಾ ಮಂತ್ರಿ, ಶಾಸಕರು, ಆಯುಕ್ತರು ಹಾಗೂ ಅಧಿಕಾರಿಗಳ ಮೊಬೈಲ್ ನಂಬರ್ ಗಳನ್ನು ತೂಗು ಹಾಕಬೇಕು, ಅಲ್ಲದೆ 10 ನೇ ತರಗತಿಯ 5 ವಿದ್ಯಾರ್ಥಿಗಳ ತಂಡ ರಚಿಸಿ, ನಿತ್ಯವೂ ಅಡುಗೆಯ ಗುಣಮಟ್ಟ ಪರೀಶೀಲಿಸಲು ಹೇಳಿದರು. ಶಾಸಕರು ವಸತಿ ಶಾಲೆ ಮಕ್ಕಳಿಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ನೀಡಿ ಕರೆ ಮಾಡಲು ತಿಳಿಸಿದರು. ವಾರದ ವಿವಿಧ ಆಹಾರದ ಮತ್ತು ಬಳಕೆಯ ಪ್ರಮಾಣದ ಯಾದಿಯನ್ನು ಸ್ಪಷ್ಟವಾಗಿ ಕಾಣುವಂತೆ ವಸತಿ ಶಾಲೆಯಲ್ಲಿ ತೂಗು ಹಾಕಬೇಕು. ಅಡುಗೆ ಮನೆ ಮತ್ತು ಶೌಚಾಲಯಗಳ ಸ್ವಚ್ಛತೆಯ ಬಗ್ಗೆಯೂ ಖಡಕ್ ವಾನಿಂರ್ಗ್ ಮಾಡಿದರು.  

ಮುಖಂಡ ಶಿವಾನಂದ ಅಂಗಡಿ, ನಿಲಯ ಮೇಲ್ವಿಚಾರಕ ಸಂಗಮೇಶ ಪಾಟೀಲ ಇತರರು ಇದ್ದರು. 


ಸುದ್ದಿ ಓದಿ