ದೇವಸ್ಥಾನಗಳಿಗೆ ಶಾಸಕ ಸಿದ್ದು ಸವದಿ ಭೇಟಿ.
ಮಹಾಲಿಂಗಪುರ: 2023ರ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ತೇರದಾಳ ಮತ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಬುಧವಾರ ಇತಿಹಾಸ ಪ್ರಸಿದ್ಧ ಪವಾಡಪುರುಷ ಗುರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೀಠಾಧಿಪತಿ ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಆಶೀರ್ವಾದ ಪಡೆದರು. ನಂತರ ಚನ್ನಗಿರೇಶ್ವರ ಬನಶಂಕರಿ ದೇವಿ, ಟೊಣಪಿನಾಥ, ಸಿದ್ಧಾರೂಢ, ಸಾಯಿಬಾಬಾ ಮಂದಿರಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾತೇಂಶ ಹಿಟ್ಟಿನಮಠ, ಮುಖಂಡರಾದ ಈರಪ್ಪ ದೀನಿಮನಿ,ಶೇಖರ ಅಂಗಡಿ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ,ಶಂಕರಗೌಡ ಪಾಟೀಲ, ಅಶೋಕ ಅಂಗಡಿ, ಚಂದ್ರಶೇಖರ ಗೊಂದಿ,ರಾಜು ಚಮಕೇರಿ,ಚನ್ನಬಸು ಯರಗಟ್ಟಿ,ಶಿವಾನಂದ ಅಂಗಡಿ,ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಪ್ಪ ರಾಮೋಜಿ,ಅಜರ್ುನ ಮೋಪಾಗಾರ, ತಿಪ್ಪಣ್ಣ ಬಂಡಿವಡ್ಡರ,ಮಹೇಶ ಮುಕುಂದ,ವಿಷ್ಟುಗೌಡ ಪಾಟೀಲ,ಹನಮಂತ ಯರಗಟ್ಟಿ, ಸಂಗಯ್ಯ ಹಿರೇಮಠ,ಬಸವರಾಜ ಮಡಿವಾಳ,ಮಹೇಶ ಜಿಡ್ಡಿಮನಿ,ಬಸವರಾಜ ಗಿರಿಸಾಗರ ಇನ್ನೂ ಹಲವಾರು ಕಾರ್ಯಕರ್ತರೂ ಉಪಸ್ಥಿತರಿದ್ದರು.