ಬೃಹತ್ ಹಲಗೆ ಹಬ್ಬಕ್ಕೆ ಶಾಸಕ ಸವದಿ ಚಾಲನೆ
ಮಹಾಲಿಂಗಪುರ 26: ಹಿಂದೂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಹಲಗೆ ಹಬ್ಬಕ್ಕೆ ಶಾಸಕ ಸಿದ್ದು ಸವದಿ ಹಲಗೆ ಬಾರಿಸುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.
ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಿ ಹಲಗೆ ಬಾರಿಸಿ ಚಾಲನೆಗೊಂಡ ಬೃಹತ್ ಹಲಗೆ ಹಬ್ಬ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕೇಸರಿ ಧ್ವಜ, ಪಟಾಕಿಗಳ ಅಬ್ಬರ, ಹಲಗೆ ಬಡಿತ, ಲಯಬದ್ಧ ಕುಣಿತ ಇವುಗಳ ಸಂಭ್ರಮದಿಂದ ಬೀದಿ ಬೀದಿಗಳು ಕೇಸರಿಮಯವಾಗಿದ್ದವು.
ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಮುಖಂಡರಾದ ಅಶೋಕಗೌಡ ಪಾಟೀಲ, ಶಿವಾನಂದ ಅಂಗಡಿ, ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ಶಂಕರಗೌಡ ಪಾಟೀಲ, ಸಂಜು ಚೆನ್ನಾಳ, ವಿಷ್ಣುಗೌಡ ಪಾಟೀಲ, ಭೈರೇಶ ಆದೆಪ್ಪನವರ, ಶಿವನಗೌಡ ಪಾಟೀಲ, ರಾಘು ಗರಗಟ್ಟಿ, ಮಹಾಂತೇಶ ಹಟ್ಟಿ, ಶ್ರೀನಿಧಿ ಕುಲಕರ್ಣಿ, ಅಭಿಷೇಕ ಲಮಾಣಿ, ಸಚಿನ್ ಕಲ್ಮಾಡಿ, ಶೇಖರ ಮಗದುಮ್, ಬಸವರಾಜ ಮಡಿವಾಳ, ಮಹಾಲಿಂಗ ಪಂಚಕಟ್ಟಿಮಠ, ಶ್ರೀಶೈಲಗೌಡ ಪಾಟೀಲ ಮುಂತಾದವರಿದ್ದರು.