ಮಹಲಿಂಗಪುರ

ಪಟ್ಟಣವನ್ನು 118.50 ಕೋಟಿ ವೆಚ್ಚದ ಯುಜಿಡಿ (ಡ್ರೈನೇಜ್ ಸಿಸ್ಟಮ್)ಗೆ ಅಳವಡಿಸಲು ಇಲಾಖೆಗೆ ಪ್ರಸ್ತಾವನೆ ! ತಿನಿಸು ಮಾರುಕಟ್ಟೆ ಕಾಮಗಾರಿಗೆ ಶಾಸಕ ಸವದಿ ಚಾಲನೆ !

ಪಟ್ಟಣವನ್ನು 118.50 ಕೋಟಿ ವೆಚ್ಚದ ಯುಜಿಡಿ (ಡ್ರೈನೇಜ್ ಸಿಸ್ಟಮ್)ಗೆ ಅಳವಡಿಸಲು ಇಲಾಖೆಗೆ ಪ್ರಸ್ತಾವನೆ ! ತಿನಿಸು ಮಾರುಕಟ್ಟೆ ಕಾಮಗಾರಿಗೆ ಶಾಸಕ ಸವದಿ ಚಾಲನೆ !

ಮಹಾಲಿಂಗಪುರ30;  2021-22 ನೇ ಸಾಲಿನ ಉದ್ಯಮ ನಿಧಿ ಅನುದಾನದಡಿಯಲ್ಲಿ ಸ್ಥಳೀಯ ಗುಂಡದ ಬಾವಿ ಹತ್ತಿರ ನಿರ್ಮಾಣವಾಗುತ್ತಿರುವ ಅಂದಾಜು 30 ಲಕ್ಷ ವೆಚ್ಚದ 09 ತಿನಿಸು ಮಳಿಗೆಗಳ ಕಾಮಗಾರಿಗೆ ಭೂಮಿ ಪೂಜಾ ಕಾರ್ಯಕ್ರಮವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ನೆರವೇರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣವನ್ನು 118.50 ಕೋಟಿ ವೆಚ್ಚದ ಯುಜಿಡಿ (ಡ್ರೈನೇಜ್ ಸಿಸ್ಟಮ್)ಗೆ ಅಳವಡಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇನ್ನುಳಿದಂತೆ ಪಟ್ಟಣದ ಪ್ರಮುಖ ರಸ್ತೆಗಳನ್ನು ಡಾಂಬರೀಕರಣ ಇಲ್ಲವೇ ಸಿಸಿ ರೋಡ್, ಕೆರೆ ಅಭಿವೃದ್ಧಿಗೆ, ಇರುವ 35 ಲಕ್ಷಗಳು ಸೇರಿ ಇನ್ನೂ ಒಂದು ಕೋಟಿ ರೂಗಳಿಗೆ ಸಂಬಂಧಿಸಿದ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಬಿಲ್ಡಿಂಗ್ ಫಂಡ್ 35 ಲಕ್ಷ ರೂ ಸಂಗ್ರಹವಿದ್ದು ಬನಶಂಕರಿ ದೇವಸ್ಥಾನದ ಹತ್ತಿರವಿರುವ ಜಾಗೆಯಲ್ಲಿ ಮಳಿಗೆಗಳನ್ನು ಕಟ್ಟಿಸಿ ಪುರಸಭೆಯ ಆದಾಯವನ್ನು ಹೆಚ್ಚಿಸಲಾಗುವುದು ಎಂದರು.  

ಪಟ್ಟಣದ ಅಂದವನ್ನು ಹೆಚ್ಚಿಸಲಿಕ್ಕೆ ಚೆನ್ನಮ್ಮ ವೃತ್ತದಿಂದ ಮಡ್ಡಿ ಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ನಂದಗಾವ ಕ್ರಾಸ್ ವರೆಗೆ ಡಬಲ್ ರಸ್ತೆ ಮತ್ತು ಮಧ್ಯದಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಲಾಗುವುದು. ಈ ಕಾಮಗಾರಿ 2 ತಿಂಗಳಲ್ಲಿ ಆರಂಭಗೊಳ್ಳಲಿದೆ. 

ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಧ್ಯಕ್ಷ ಬಸನಗೌಡ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಈರ​‍್ಪ ದಿನ್ನಿಮನಿ, ಮುಖ್ಯಾಧಿಕಾರಿ ಎಚ್‌.ಎಸ್‌.ಚಿತ್ತರಗಿ, ಪುರಸಭಾ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ಬಸವರಾಜ ಹಿಟ್ಟಿನಮಠ ಮುಖಂಡರಾದ ಮಹಾಲಿಂಗಪ್ಪ ಕೋಳಿಗುಡ್ಡ, ಮನೋಹರ ಶಿರೋಳ, ಜಿ.ಎಸ್‌.ಗೊಂಬಿ, ಶಿವಾನಂದ ಅಂಗಡಿ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಚನ್ನಪ್ಪ ರಾಮೋಜಿ, ಗುರುಪಾದ ಅಂಬಿ, ಪ್ರಕಾಶ ಕೋಳಿಗುಡ್ಡ, ಮಹಾಲಿಂಗಪ್ಪ ಮುದ್ದಾಪುರ, ಹನಮಂತ ಜಮಾದಾರ, ಶಿವಾನಂದ ಹುಣಶಾಳ ಮತ್ತು ಸಿಬ್ಬಂದಿ ಇದ್ದರು. 

ಇಂದು ಸನ್ಮಾನ್ಯ ಶಾಸಕರಿಂದ ಭೂಮಿ ಪೂಜೆ ನೆರವೇರಿದ ತಿನಿಸು ಮಾರುಕಟ್ಟೆಯನ್ನು ಬೆಳಗಾವಿ ಮಾದರಿಯಲ್ಲಿ ಅತ್ಯಂತ ಸುಂದರವಾದ ಮತ್ತು ವ್ಯವಸ್ಥಿತವಾಗಿ ಅತ್ಯಂತ ಶೀಘ್ರವಾಗಿ ನಮ್ಮ ಪಟ್ಟಣದ ಜನತೆಗೆ ಒದಗಿಸಲಾಗುವುದು 

 ಶೇಖರ ಅಂಗಡಿ, ಪುರಸಭಾ ಸದಸ್ಯರು 


ಸುದ್ದಿ ಓದಿ