ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನಕ್ಕೆ ತೆರಳಿದ್ದ ಶಾಸಕ ಪ್ರಭು ಚವ್ಹಾನಗೆ ತಡೆದ ಮಹಾ ಪುಂಡರು
ಬೆಳಗಾವಿ : ನೆರೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ತೆರಳಿದ್ದ ಕರ್ನಾಟಕದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರಿಗೆ ಶಿವಸೇನಾ ಪುಂಡರು ಅಡ್ಡಿಪಡಿಸಿದ ಘಟನೆ ಕೊಲ್ಲಾಪುರದಲ್ಲಿ ಬುಧವಾರ ನಡೆದಿದೆ.
ಕೊಲ್ಲಾಪುರದ ಶಿವಸೇನೆ ಮುಖಂಡ ವಿಜಯ್ ದೇವಣೆ ನೇತೃತ್ವದ ಶಿವಸೇನಾ ಪುಂಡರು ಅಡ್ಡಿಪಡಿಸಿದ್ದು, ಅಧಿವೇಶನ ವೇಳೆ ಮಹಾಮೇಳಾವಕ್ಕೆ ಕರ್ನಾಟಕ ಅವಕಾಶ ಕೊಟ್ಟಿಲ್ಲವೆಂದು ಎಂದು ಹೇಳಿದ್ದಾರೆ.
ಈ ವೇಳೆ ಶಾಸಕ ಪ್ರಭು ಚವ್ಹಾಣ್ ಅವರು ಶಿವಸೇನಾ ಪುಂಡರಿಗೆ ಕನ್ನಡದಲ್ಲಿ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎಂಇಎಸ್ ಪ್ರತಿಭಟನೆಗೆ ಬ್ಯಾನ್ ಮಾಡಿದ್ದಾರೆ ಎಂದು ಮಾಹಾ ಪುಂಡರು ಶಾಸಕ ಚವ್ಹಾನ್ ಅವರಿಗೆ ಹೇಳಿದ್ದಾರೆ.
ಮಹಾಮೇಳಾವ್ ಗೆ ಅವಕಾಶ ಕೊಡದ ಕಾರಣ ಕರ್ನಾಟಕದ ರಾಜಕಾರಣಿಗಳಿಗೆ ಮಹಾರಾಷ್ಟ್ರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಉದ್ದವ ಠಾಕ್ರೆ ಬಣದ ಕೊಲ್ಲಾಪುರದ ಜಿಲ್ಲಾ ಅಧ್ಯಕ್ಷ ವಿಜಯ ದೇವಣೆ ಹೇಳಿದ್ದರು.
ಅಲ್ಲದೆ ಮಹಾಪುಂಡರು ವರ್ತನೆ ಇದೇ ರೀತಿ ಮುಂದೆ ವರೆದರೆ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮ ಕ್ಷೇತ್ರಕ್ಕೆ ಬರುವ ಜನರನ್ನು ನಾವು ಇಲ್ಲಿ ಅಡ್ಡಿಪಡಿಸಬೇಕಾಗುತ್ತದೆ ಎಂದು ಜಿಲ್ಲಾ ಕರವೇ ಅಧ್ಯಕ್ಷ ದೀಪಕ್ ಗುಡಗನಟ್ಟಿ ಹಾಗೂ ಕನ್ನಡ ಹೋರಾಟಗಾರರು ಎಚ್ವರಿಕೆ ನೀಡಿದ್ದಾರೆ.