ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಪಾಟೀಲ್ ನಡಹಳ್ಳಿ ಭೂಮಿಪೂಜೆ
ಮುದ್ದೇಬಿಹಾಳ ೦೨:- ಮುಂದಿನ ದಿನಗಳಲ್ಲಿ ನಮ್ಮ ಮತಕ್ಷೇತ್ರದಲ್ಲಿ 10ಸಾವಿರ ಉದ್ದೋಗವನ್ನು ಸೃಷ್ಠೀಸುವ ಗುರಿಯೊಂದಿಗೆ, ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿನ ಕುಂದುಕೊರತೆಯ ಜೋತೆಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತೇನೆ, ನಮ್ಮ ಮತಕ್ಷೇತ್ರದಲ್ಲಿ ನೀರು, ವಿದ್ಯುತ್ತ್, ರಸ್ತೇಯಂತಹ ಅನೇಕ ಸೌಲಭ್ಯಗಳನ್ನು ನಮ್ಮ ಅಧಿಕಾರದವದಿಯಲ್ಲಿ ಅತಿ ಹೆಚ್ಚು ಕಾರ್ಯಗಳು ಮುಗಿದಿವೆ. ನಾನು ಅಧಿಕಾರಕ್ಕೆ ಬಂದಾಗಿನಿಂದ ಗ್ರಾಮೀಣ ಪ್ರದೇಶ ಹಾಗೂ ಕ್ಷೇತ್ರದ ಮೂರು ನಗರ ಪ್ರದೇಶವನ್ನು ಅಭಿವೃದ್ಧಿ ಪಡಿಸುವಲ್ಲಿ ಕಾರ್ಯೋನ್ಮುಕವಾಗಿದ್ದೇವೆ ಎಂದು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದರು.
ತಾಲೂಕಿನ ಕೂಚಬಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಂಜೂರಾದ 500 ಲಕ್ಷದ ಅನುದಾನದ ಸಾಸನೂರನಿಂದ ಬಾವೂರ ವಾಯಾ ಕೂಚಬಾಳ ರಸ್ತೇ ಸುದಾರಣಾ ಕಾಮಗಾರಿಯನ್ನು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಭೂಮಿಪೂಜೆಯನ್ನು ನೆರೆವೇರಿಸಿ ಮಾತನಾಡಿದ ಅವರು ಮುಂದಿನ ಒಂದೂವರೆ ವರ್ಷದಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಕೇರೆಗಳು, ಬಾಂದಾರಗಳನ್ನು ನಿರ್ಮಿಸುವ ಕಾರ್ಯ ಕ್ರೀಯಾ ಅಂತದಲ್ಲಿದಲ್ಲಿದೆ, ಮತ್ತು ಹಸಿರುಕರಣ ಮಾಡುವ ನಿಟ್ಟನಲ್ಲಿಯೂ ನಾವು ಮುಂದೆ ಇದ್ದೇವೆ ಎಂದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸೋಮು ಕಾಮರಡ್ಡಿ,ಶರಣಗೌಡ ಬಿರಾದಾರ,ಸಂಗಮ್ಮ ದೇವರನಳ್ಳಿ, ಪದ್ಮನಾಬ ಜೋಷಿ, ಶರಣಯ್ಯಾ ಹಿರೇಮಠ,ಶಂಕರ ಮೇಟಿ, ಲಕ್ಷ್ಮಣ ಆಲಗೂರ, ಲಕ್ಷ್ಮಣ ಚಲವಾದಿ,ಕಾಶಿನಾಥ ಚಲವಾದಿ,ಮುದುಕಪ್ಪ ಚಲವಾದಿ,ಚಂದ್ರು ಕುಂಬಾರ,ಕಿರಣ ಬಿರಾದಾರ, ಕೂಚಬಾಳ,ಬಾವೂರ ಗ್ರಾಮಸ್ಥರು ಇನ್ನೀತರರು ಇದ್ದರು.