ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಪಾಟೀಲ್ ನಡಹಳ್ಳಿ ಭೂಮಿಪೂಜೆ
ಮುದ್ದೇಬಿಹಾಳ : ಸುಮಾರು ಇಪ್ಪತೈದು ವರ್ಷಗಳಲ್ಲಿ ಮತಕ್ಷೇತ್ರದಲ್ಲಿ ಆಗದ ಅಭಿವೃದ್ಧಿ ಕಾಮಗಾರಿಯನ್ನು ನಾನು ಒಂದೇ ಅವದಿಯಲ್ಲಿ ಮಾಡಿ ತೋರಿಸಿದ್ದೇನೆ, ಗ್ರಾಮೀಣ ಬಾಗದಲ್ಲಿ ಈ ಹಿಂದೆ ಸರಿಯಾದ ರೀತಿಯಲ್ಲಿ ಓಡಾಡಲು ರಸ್ತೇ ಇರಲಿಲ್ಲಾ, ನಾನು ಅಧಿಕಾರಕ್ಕೆ ಬಂದಾಗನಿಂದ ಮತಕ್ಷೇತ್ರದ ಪ್ರತಿಯೊಂದು ಗ್ರಾಮೀಣ ಬಾಗಗಳಲ್ಲಿ ರಸ್ತೇ , ಕರೆ ತುಂಬುವದು, ಇನ್ನೂ ಅನೇಕ ಕೆಲಸಗಳನ್ನು ಮಾಡಿದ್ದೇನೆ ಎಂದು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದರು.
ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಯಮಿತ ವತಿಯಿಂದ 1 ಕೋಟಿ 71 ಲಕ್ಷದ ವೇಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.
ಕರೋನಾ ಅಂತಹ ಪರಿಸ್ಥೀತಿಯಲ್ಲಿ ನನ್ನ ಮತಕ್ಷೇತ್ರದ ಸುಮಾರು ಸಾವಿರಾರೂ ಕುಂಟುಂಬಗಳನ್ನು ಸುರಕ್ಷೀತವಾಗಿ ಮನೆಗೆ ತಂದು ಬಿಟ್ಟು, ಅವರಿಗೆ ದಿನಬಳಿಕೆಯ ಕಿಟ್ ಗಳನ್ನು ಕೋಟ್ಟಿದ್ದೇನೆ, ಹದಿನಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಆರ್ಥಿಕವಾಗಿ ಹಿಂದುಳಿದವರ ಮದುವೆಗೆ ಎಂದು ಮದುವೆ ಸಮಯದಲ್ಲಿ ಅನೇಕ ಜನರಿಗೆ ಸುಮಾರು 30 ಲಕ್ಷದಷ್ಟು ಆರ್ಥಿಕವಾಗಿ ಸಹಾಯ ಮಾಡಿದ್ದೇನೆ, ಅಭಿವೃದ್ದಿಯನ್ನು ಮಾಡಿ ನಾನು ಮುಂದಿನ ಬಾರಿ ಮತಗಳನ್ನು ಕೇಳುತ್ತೇನೆ ಎಂದರು.
ನಂತರ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ನಿಂಗಪ್ಪ ಬಪ್ಪರಗಿ ಮಾತನಾಡಿ ಈ ಹಿಂದೆ ಅಧಿಕಾರದಲ್ಲಿದ್ದವರು ನಮ್ಮ ಮತಕ್ಷೇತ್ರವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ, ಎಂಬುವದು ನಮ್ಮೇಲ್ಲರಿಗೂ ಗೋತ್ತಿದೆ, ಒಂದೇ ಅವದಿಯಲ್ಲಿ ಅಭಿವೃದ್ಧಿ ಮಾಡಿದ್ದು ನಮಗೆ ಗೋತ್ತಿದೆ, ನಾವುಗಳು ಅಭಿವೃದ್ಧಿಯನ್ನು ನೋಡಿ ಮತವನ್ನು ಹಾಕಬೇಕು ಎಂದು ಹೇಳಿದರು.
ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಶಾಂತಪ್ಪ ಕಂಬಳಿ,ಬಸನಗೌಡ ವಣಿಕ್ಯಾಳ, ರಾಜುಕುಮಾರ ಚವ್ಹಾಣ, ಗ್ರಾಮಸ್ಥರು ಇದ್ದರು.
ಫೋಟೋ ಇದೇ :- ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಕೃಷ್ಣಾ ಬಾಗ್ಯ ಜಲ ನಿಯಮಿತ ವತಿಯಿಂದ 1 ಕೋಟಿ 71 ಲಕ್ಷದ ವೇಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಭೂಮಿಪೂಜೆ ನೆರೆವೇರಿಸಿದರು.