28.35 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಶಂಕುಸ್ಥಾಪನೆ
ಲೋಕದರ್ಶನ ವರದಿ
ಕಂಪಿ 25: ಯುಜಿಡಿ ಯೋಜನೆಯಿಂದ ಪಟ್ಟಣವೂ ಸ್ವಚ್ಚತೆಯ ಜೊತೆಗೆ ಸುಂದರೀಕರಣವಾಗುತ್ತದೆ. ಮತ್ತು ತಾಜ್ಯಾ ನೀರು ಬೇರಿ್ಡಸಿ, ಒಳಚರಂಡಿ ಮೂಲಕ ಸಾಗಿ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ 2025-26ನೇ ಸಾಲಿನ ಎನ್‌ಜಿಟಿ ಎನ್ವಿರಾನ್ವೆಂಟ್ ಕಾಂಪೆನ್ಸೆಷನ್ ಯೋಜನೆಯಡಿ ಸುಮಾರು 28.35 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ಚರಂಡಿ ನೀರು ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಎಲ್ಲಿಂದರಲ್ಲಿ ಬಿಸಾಡುವುದರಿಂದ ಅಸ್ವಚ್ಚತೆ ಕಾಣುತ್ತಿದೆ. ಆದ್ದರಿಂದ ಸ್ವಚ್ಚತೆ ಹಾಗೂ ಸೌಂದಾರ್ಯಕರಣಕ್ಕಾಗಿ ಯುಜಿಡಿ ಅತ್ಯವಶ್ಯಕವಾಗಿದೆ.
ಒಳಚರಂಡಿ ಮಾಡಬೇಕೆಂಬುದು ಬಹಳ ವರ್ಷದ ಕನಸಾಗಿತ್ತು. ಈಗ ಕನಸು ನನಸಾಗುತ್ತಿದೆ.ಮೊದಲ ಹಂತದಲ್ಲಿ ಸುಮಾರು 28 ಕೋಟಿ ವೆಚ್ಚದಲ್ಲಿ ಪಟ್ಟಣದ 5/12ನೇ ವಾರ್ಡಿನಲ್ಲಿ ಯುಜಿಡಿ ಪ್ರಾರೆಂಭ ಮಾಡಲಾಗಿದೆ. ಯುಜಿಡಿ ಸಂಸ್ಕರಣ ಘಟಕವನ್ನು ಅರಳಿಹಳ್ಳಿ ತಾಂಡದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ, ರೈತರಿಗೆ ನೀಡಲಾಗುತ್ತದೆ. ಪಟ್ಟಣದ 23 ವಾರ್ಡ್‌ಗಳಲ್ಲಿ ಒಳಚರಂಡಿ ನಿರ್ಮಾಣಕ್ಕೆ ಸುಮಾರು 250 ಕೋಟಿ ಅನುದಾನದ ಅವಶ್ಯಕತೆ ಇದೆ. ಆದ್ದರಿಂದ ಈಗಾಗಲೇ ಸಂಬಂಧಪಟ್ಟ ಸಚಿವ ಬೈರೈತಿ ಸುರೇಶ ಇವರಿಗೆ ಇನ್ನಷ್ಟು ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ.
ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಒಳಚರಂಡಿ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಮುಖಂಡರಾದ ಬಿ.ನಾರಾಯಣಪ್ಪ, ಭಟ್ಟ ಪ್ರಸಾದ್, ಆಟೋ ರಘು, ಶ್ರೀನಿವಾಸ, ಪಿ.ನಾಗೇಶ್ವರಾವ್, ಕರೇಕಲ್ ಮನೋಹರ, ಕೆ.ಎಸ್.ಚಾಂದ್ ಬಾಷಾ, ವೀರಾಂಜೀನೀಯಲು, ಸುಧಾಕರ, ಗದ್ದಿ ವಿರುಪಾಕ್ಷಿ, ಬಿ.ವಿ.ಗೌಡ, ಎಚ್.ಪಿ.ಶಿಕಾರಿರಾಮು, ಅಕ್ಕಿ ಜಿಲಾನ್, ಫ್ಯಾಕ್ಸಿ ಶೇಖರ್, ನಾಗರಾಜ ಸೇರಿದಂತೆ ಇತರರು ಇದ್ದರು. ಳಚರಂಡಿ ಕಾಮಗಾರಿಗೆ ಶಾಸಕ ಗಣೇಶ ಭೂಮಿ ಪೂಜೆ ಸಲ್ಲಿಸಿದರು.