ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ
ಲೋಕದರ್ಶನ ವರದಿ
ಚಿಕ್ಕೋಡಿ 15: ರಾಯಬಾಗ ಮತಕ್ಷೇತ್ರದಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಹಲವು ರಸ್ತೆಗಳು ಹಾಳಾಗಿದ್ದು, ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಮುಂದಿನ ದಿನಮಾನದಲ್ಲಿ ಕ್ಷೇತ್ರದ ಪ್ರತಿಯೊಂದು ರಸ್ತೆಯನ್ನು ಅಭಿವೃದ್ದಿ ಪಡಿಸಿ, ಮಾದರಿ ಕ್ಷೇತ್ರ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ಜಾಗನೂರ, ಕೆಂಚನಟ್ಟಿ ಮತ್ತು ಮಮದಾಪೂರ ಕೆಕೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಮೂಲಕ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಐದಾರೂ ತಿಂಗಳ ಹಿಂದೆ ಪ್ರಕೃತಿ ವಿಕೋಪದಲ್ಲಿ ಏರುಪೇರಾಗಿ ಅಬ್ಬರದ ಮಳೆ ಸುರಿದಿರುವ ಪರಿಣಾಮ ಗ್ರಾಮೀಣ ರಸ್ತೆಗಳು ಹಾಳಾಗಿ ಹೋಗಿದ್ದು, ಕ್ಷೇತ್ರದ ಜನರ ಬೇಡಿಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಜಾಗನೂರ ಗ್ರಾಮದಿಂದ ಗೋಕಾಕ ತಾಲೂಕಿಗೆ ಕೂಡುವ ಜಾಗನೂರ-ಪಾಮಲದಿನ್ನಿ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ ಹಾಗೂ ಪೋಗತ್ಯಾನಟ್ಟಿ ಗ್ರಾಮದಿಂದ ಕಬ್ಬೂರ ಪಟ್ಟಣದವರಿಗೆ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ ಮಂಜೂರು ಸಿಕ್ಕಿದ್ದು, ಸಂಬಂಧಿಸಿದ ಅಧಿಕಾರಿಗಳು ಮುಂದೆ ನಿಂತ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಬೇಕು. ಗುತ್ತಿಗೆದಾರರು ಕೂಡಾ ರಸ್ತೆಗಳನ್ನು ಅಗಲಿಕರಣಗೊಳಿಸಿ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದರು.
ಬಿಜೆಪಿ ಯುವ ದುರೀಣ ಪ್ರಥ್ವಿ ಕತ್ತಿ ಮಾತನಾಡಿ, ಜಾಗನೂರ ಗ್ರಾಮವು ಹನುಮಾನ ದೇವಸ್ಥಾನದಿಂದ ಸುಪ್ರಸಿದ್ದಿ ಪಡೆದಿದ್ದು, ಶಾಸಕರು ಜಾಗನೂರ ಗ್ರಾಮವನ್ನು ಪ್ರವಾಸಿ ತಾಣವಾಗಿ ಮಾಡಬೇಕು. ದೇವಸ್ಥಾನದ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರು, ಉದ್ಯಾನವನ ನಿಮರ್ಾಣ ಮಾಡುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಹೀರಾ ಶುಗರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ, ರಾಮಚಂದ್ರ ಹಣಮನ್ನವರ.ರಾಮಗೌಡ ಪಾಟೀಲ.ರಮೇಶ ಕಾಮಗೌಡ. ರಾಮಪ್ಪ ಪುಕಾಟೆ. ಹಣಮಂತ ಕರಿಕಟ್ಟಿ. ಭಿಮರಾವ ಪೇಂಡಾರೆ. ಸಿದ್ದು ಖಿಚಿಡಿ ಮುಂತಾದವರು ಇದ್ದರು.