ಮಿನಿವಿಧಾನ ಸೌಧ ಕಟ್ಟಡ ಕಾಮಗಾರಿಗೆ ಶಾಸಕ ಭೂಸನೂರ ಚಾಲನೆ
ಸಿಂದಗಿ: ತಾಲೂಕಾ ಆಡಳಿತದ ಕಾರ್ಯಗಳು ಒಂದೇ ಸೂರಿನಡಿ ದೊರಕಬೇಕು ಎನ್ನುವ ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು 9.75 ಕೋಟಿ ರೂ. ಅನುದಾನದಲ್ಲಿ ಪಟ್ಟಣದಲ್ಲಿ ಸುಸಜ್ಜಿತ ಮಿನಿವಿಧಾನ ಸೌಧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಲಾಗುತ್ತಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಆಲಮೇಲ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಉಪವಿಭಾಗ ಸಿಂದಗಿ ಸೋಮವಾರ ಹಮ್ಮಿಕೊಂಡ 2020-21ನೇ ಸಾಲಿನ ಲೆಕ್ಕ ಶೀರ್ಷಿಕೆ 4059 ಇಲಾಖಾ ಕಟ್ಟಡಗಳ ನಿರ್ಮಾಣ ಯೋಜನೆ (ಕಂದಾಯ ಇಲಾಖೆ) ಅಡಿಯಲ್ಲಿ ತಾಲೂಕಾ ಆಡಳಿತ ಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು.
ಮಿನಿವಿಧಾನಸೌಧ ಕಟ್ಟಡದಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ತಹಶೀಲ್ದಾರ ಕಚೇರಿ ಹಾಗೂ ಕಚೇರಿಗೆ ಸಂಬಂಧಿಸಿದ ಶಾಖೆಗಳು, ಖಜಾಣೆ ಕಚೇರಿ ಮತ್ತು ಕಚೇರಿಗೆ ಸಂಬಂಧಿಸಿದ ಶಾಖೆಗಳು ಮೊದಲ ಮಹಡಿಯಲ್ಲಿ ಕಂದಾಯ ಇಲಾಖೆ ಹಾಗೂ ಸಂಬಂಧಿಸಿದ ಆಹಾರ ವಿಭಾಗ, ಚುನಾವಣೆ ವಿಭಾಗ ಹಾಗೂ ಆಡಳಿತ ವಿಭಾಗಗಳ ಶಾಖೆಗಳು. ಉಪ ನೋಂದಣಿ ಕಚೇರಿ ಹಾಗೂ ಕಚೇರಿಗೆ ಸಂಬಂಧಿಸಿದ ಶಾಖೆಗಳು ಒಳಗೊಂಡಿದೆ. ಕಟ್ಟಡದ ಒಟ್ಟು ವಿಸ್ತೀರ್ಣ 4099 ಚ.ಮೀ. ಇದ್ದು ಕಟ್ಟಡ ಪೂರ್ಣಗೊಳ್ಳಲು ಇನ್ನೂ 10 ಕೋಟಿ ರೂ. ಹೆಚ್ಚಿನ ಅನುದಾನ ಬೇಕಾಗುತ್ತದೆ. ಸರಕಾರದಿಂದ 10 ಕೋಟಿ ರೂ. ಅನುದಾನ ಮಂಜೂರಿ ಮಾಡಿಕೊಂಡು ಬರುವುದಾಗಿ ಭರವಸೆ ನೀಡಿದರು. ಗುತ್ತಿಗೆದಾರರು ಶಿರ್ಘದಲ್ಲಿ ಸುಂದರ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು. ಎಇಇ ತಾರಾನಾಥ ರಾಠೋಡ, ಎಇ ನಾಗರಾಜ ಆಚಾರ್ಯ, ವಕೀಲಹ್ಮದ ಜಾಗೀರದಾರ, ಜಿ.ಬಿ. ಕರ್ನಾಳ, ಎ.ಎಚ್. ತುಂಬಗಿ, ಗುತ್ತಿಗೆದಾರರು ಎ.ಎಚ್. ರುಣವಾಲ, ಹೆಸ್ಕಾಂ ನಿರ್ದೇಶಕ ಪುಟ್ಟು ಸಾವಳಗಿ, ಗ್ರೇಡ್-2 ತಹಶೀಲ್ದಾರ ಪ್ರಕಾಶ ಸಿಂದಗಿ, ಸಂತೋಷ ಪಾಟೀಲ ಡಂಬಳ, ಗುರು ಗಡಗಿ ಅವರು ವೇದಿಕೆ ಮೇಲೆ ಇದ್ದರು.
ಈರಣ್ಣ ರಾವೂರ, ಜೀತೇಂದ್ರ ರಜಪೂರ, ರವಿ ನಾಯ್ಕೋಡಿ, ಹುಸೇನಿ ಅಡಾಡಿ ಸೇರಿದಂತೆ ಇತರರು ಇದ್ದರು.
ಹೆಸ್ಕಾಂ: ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಕಾರ್ಯ ಮತ್ತು ಪಾಲನೆ ವಿಭಾಗ ಇಂಡಿ ಅವರು ಸೋಮವಾರ ಹಮ್ಮಿಕೊಂಡ ಸಿಂದಗಿ ಉಪವಿಭಾಗ ಕಚೇರಿಯ ನೂತನ ಕಟ್ಟಡ ಕಾಮಗಾರಿಗೆ ಶಾಸಕ ರಮೇಶ ಭೂಸನೂರ ಅವರು ಭೂಮಿ ಪೂಜೆ ನೇರವೆರಿಸಿದರು.
ನಂತರ ಅವರು ಮಾತನಾಡಿ, ವಿದ್ಯುತ್ನಲ್ಲಿ ಸ್ವಾವಲಂಬನೆ ಪಡೆಯಲು ಕ್ಷೇತ್ರದಲ್ಲಿ ವಿದ್ಯುತ್ ಘಟಕಗಳ ಕಾಮಗಾರಿ ಅಭಿವೃದ್ಧಿ ಮಾಡಲಾಗುತ್ತಿದೆ. ರೈತರಿಗೆ ಹಗಲಿನಲ್ಲಿ 7 ಗಂಟೆ ಗುಣಮಟ್ಟದ ವಿದ್ಯುತ್ ನೀಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ತಾಲೂಕಿನ ಆಹೇರಿ ಗ್ರಾಮದಲ್ಲಿ 220 ಕೆವಿ ಸ್ಟೇಷನ್ ಕಾಮಗಾರಿ ಪೂರ್ಣಗೊಂಡಲ್ಲಿ ಈ ಭಾಗದ ರೈತರಿಗೆ ಗುಣ ಮಟ್ಟದ ವಿದ್ಯುತ್ ದೊರಕುತ್ತದೆ. ಗುಬ್ಬೇವಾಡದಲ್ಲಿ 110 ಕೆ.ವಿ. ಸ್ಟೇಷನ್,ಗೆ 3 ದಿನಗಳಲ್ಲಿ ಭೂಮಿ ಖರೀದಿಸಲಾಗುವುದು. ಯಂಕಂಚಿಯಲ್ಲಿ 110 ಕೆ.ವಿ. ಸ್ಟೇಷನ್ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೆ ಇನ್ನು ವಿವಿಧ ಭಾಗಗಳಲ್ಲಿ ಐದು 110 ಕೆ.ವಿ. ಸ್ಟೇಷನ್ಗಳನ್ನು ನೂತನವಾಗಿ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಲ್ಲಿ ನೀರು ಸರಬರಾಜು ಮಾಡಲು ಕಳೆದ 25 ವರ್ಷಗಳ ಹಿಂದೆ ಅಳವಡಿಸಿದ ಮೋಟರ್ಗಳು ಹಾಳಾಗಿವೆ. ಅವುಗಳ ಬದಲಾಗಿ 2800 ಎಚ್ಪಿ ಸಾಮರ್ಥ್ಯವುಳ್ಳ 6 ಮೋಟರ್ಗಳನ್ನು ಶೀಘ್ರದಲ್ಲಿ ಅಳವಡಿಸುವ ಮೂಲಕ ರೈತರಿಗೆ ಯಾವುದೇ ತೊಂದರೆ ಆಗದ ಹಾಗೆ ಮಾಡಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ನಿಂಬಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು. ಇಂಡಿ ಇಇ ಎಸ್.ಎ. ಬಿರಾದಾರ, ಎಇಇ ಚಂದ್ರಕಾಂತ ನಾಯಕ, ಎಇ ಸಿದ್ರಾಮ ದುದ್ದಗಿ, ಗುತ್ತಿಗೆದಾರರು ರವಿ ಪೂಜಾರಿ, ಗುರಣ್ಣ ಹುಣಶ್ಯಾಳ, ಸಂಗಣ್ಣ ಕಡ್ಲಗೊಂಡ ಸೇರದಿಂದತೆ ಹೆಸ್ಕಾಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.