ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳ ಭೂಮಿ ಪೂಜೆ
ರಾಯಬಾಗ 06; ತಾಲ್ಲೂಕಿನ ನಸಲಾಪೂರ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತು ಫೇವರ್ಸ್ ಬ್ಲಾಕ್ ಅಳವಡಿಕೆ ಮಾಡುವ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ, ನಸಲಾಪುರ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯಗಳು ಒದಗಿಸಬೇಕೆನ್ನುವ ಮಹದಾಸೆಯಿಂದ ಗ್ರಾಮದ ಮುಖಂಡರ ಬೇಡಿಕೆಗಳನ್ನು ಪ್ರತಿಯೊಂದು ಈಡೇರಿಸುತ್ತ ಬಂದಿದ್ದೇನೆ. ಗ್ರಾಮದ ಮುಖಂಡರ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಮುಖಂಡರಾದ ಭರತೇಶ ಬನವಣೆ ಮಾತನಾಡಿ, ಗ್ರಾಮದ ಸರ್ವಾಂಗಿನ ಅಭಿವೃದ್ಧಿಗೆ ಶಾಸಕರ ಪಾತ್ರ ಬಹಳ ಮಹತ್ವ ಇದೆ.
ಇನ್ನೂ ಗ್ರಾಮದ ಅಭಿವೃದ್ದಿಗೆ ಹಣ ನೀಡಲಾಗುವುದು ಎಂದು ಭರವಸೆ ನೀಡಿದ್ದು ಸಂತಸವಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಭರತೇಶ ಬನವಣೆ, ಸದಾಶಿವ ಘೋರೆ್ಡ, ರಾಜುಗೌಡ ಪಾಟೀಲ, ಜಯಪಾಲ ಬನವಣೆ, ಚೌಗೊಂಡಾ ಪಾಟೀಲ, ಅರುಣ ನಾಯಿಕ, ಸುರೇಂದ್ರ ಸಮಾಜೆ, ಶಿವಾನಂದ ಕುಂಬಾರ, ಮಹಾದೇವ ಕಾಂಬಳೆ, ಅಣ್ಣಾಸಾಹೇಬ ಸಮಾಜೆ, ಬಾಳಾಸಾಹೇಬ ಪಾಟೀಲ, ಯಾಕೂಬ ತಾಂಬಟ, ಪ್ರಕಾಶ ಖೋಬಾರೆ, ನಿಂಗಪ್ಪ ಕುಂಬಾರ, ವೆಂಕಟೇಶ ಬನವಣೆ, ದಿನೇಶ ಕಾಂಬಳೆ, ಆನಂದ ಸಮಾಜೆ ಉಪಸ್ಥಿತರಿದ್ದರು.