ಮುದ್ದೆಬಿಹಾಲ್

ಶಾಸಕರೇ ಎಲ್ಲಿದೇ ನಿಮ್ಮ ಅಬಿವೃದ್ಧೀ ? . ಜನಸಾಮಾನ್ಯರ ಪ್ರಶ್ನೇಗಳಿಗೆ ಉತ್ತರಿಸಿ.

ಶಾಸಕರೇ ಎಲ್ಲಿದೇ ನಿಮ್ಮ ಅಬಿವೃದ್ಧೀ ? . ಜನಸಾಮಾನ್ಯರ ಪ್ರಶ್ನೇಗಳಿಗೆ ಉತ್ತರಿಸಿ.
ಸಂಪೂರ್ಣವಾಗಿ ಬಸರಕೋಡದಿಂದ ಕಣಕಾಲ ಗ್ರಾಮದವರೆಗೆ ಹಾಳಾಗಿರುವ ರಸ್ತೇ.

ಹಾಳಾದ ರಸ್ತಾ ರಿಪೇರಿ ಮಾಡಿ ಪುಣ್ಯ ಕಟಗೋಳ್ರೀ 

ಸಚೀನ್ ವೈ ಚಲವಾದಿ 

ಮುದ್ದೇಬಿಹಾಳ 29 :  ದಿನಕ್ಕ ನಾಲ್ಕ ಬಾರಿ ಈ ರಸ್ತಾದಾಗ  ಜೀವಾ ಕೈಯಾಗ ಹಿಡ್ಕೋಂಡು ತೀರಗ್ಯಾಡಬೇಕ್ರೀ ಸಾಹೇಬ್ರ್‌, ಮುದ್ದೇಬಿಹಾಳಕ ಹೋಗಿ ನಮ್ಮೂರಿಗಿ ಬರೋದ್ರ ಒಳಗ ಸಾಕ್ ಸಾಕಾಗಿ ಹೋಗತ್ರೀ,  ಬಸರಕೋಡ ಕ್ರಾಸ್ನಿಂದ್ ಅರ್ದಮರ್ದ ರೋಡ್ ಮಾಡ್ಯಾರ್ ಹಾಳಾದ ರಸ್ತಾದಾಗ ಆಲಕೊಪ್ಪರ ತನಕ ಬರಬೇಕ್ರೀ ಬರುದ್ರಾಗ ಎಲ್ಲಿ ನಮ್ಮ ಗಾಡಿ ಬಿಳತದ ನಾವು ಸರಿಯ್ಯಾಗಿ ಜ್ವಾಕಿಲೇ  ನಮ್ಮ ಹೆಂಡರ ಮಕ್ಕಳ ಮಾರಿಯರ್ ನೋಡ್ತೀವಿಲ್ಲ ಅನ್ನಂಗ್ ಆಗೇತ್ರೀ,  ನಾವು ರೈತರಿ ನಸಕ್ನ್ಯಾಗ ಎದ್ದು ಕಾಯಿಪಲ್ಲೇ ತಂಗೊಂಡ ನಮ್ಮೂರಿನಿಂದ  ಮುದ್ದೇಬಿಹಾಳಕ ಹೊಗಬೇಕಂದ್ರ ಹೈರಾ​‍್ಯಣ ಆಗಿ ಹೋಗತಿವಿ, ಕಡಿ ತುಂಬಕೊಂಡ ಗಾಡಿ ಉಸರ್ ತಿರಗದಂಗ ತಿರಗತಾವ್, ಈ ಗಾಡಿ ತೀರಗ್ಯಾಡಕತ್ತಿಂದ ರಸ್ತಾ ನೋಡಿದ್ರ ಇದು ರಸ್ತಾನೋ ಅಥವಾ ತಗ್ಗು ಗುಂಡಿಯೋ ಅನ್ನುದ ತೀಳಿವಲ್ದಾಗೇತ್ರೀ ಎಂದು ರೂಡಗಿ, ಆಲಕೋಪ್ಪರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ರಸ್ತೆಯ ಬಗ್ಗೆ ಹೇಳಿದ ನೋವಿನ ನುಡಿಯಿದು. 

ಮುದ್ದೇಬಿಹಾಳ ತಾಲೂಕಿನಲ್ಲಿ ಸುಮಾರು ಇಲಾಖೆಗಳಲ್ಲಿ ಬರುವ ಸೌಲಭ್ಯಗಳು ಜನಪ್ರತಿನಿದಿಗಳ ಬೇನ್ನ ಹಿಂದೆ ತಿರುಗುವರೆ  ನುಂಗುತ್ತಾರೆ.  ಅದಕ್ಕೆ ತಾಜಾ ಉದಾಹರಣೆ ಎಂದರೆ ತಾಲೂಕಿನಲ್ಲಿ ಗ್ರಾಮೀಣ ಭಾಗಗಳಲ್ಲಿ  ನಿರ್ಮಾಣವಾದ ಕಳಪೆ ರಸ್ತೆಗಳು ಎಂದು ಜನರು ಹೇಳುತ್ತಿದ್ದಾರೆ . ಇಂತಹ ವ್ಯವಸ್ಥೆ ಇರುದರಿಂದ ತಾಲೂಕಿನ ಅನೇಕ ಗ್ರಾಮೀಣ ಭಾಗಗಳಲ್ಲಿ ಜನರಿಗೆ ತಿರುಗಾಡಲು ರಸ್ತೆಗಳು ಗುಂಡಿಗಳಾಗಿ ಮಾರ​‍್ಪಟಟಿದ್ದಾವೆ ಇದನ್ನು ಯಾರು ಕೇಳುವಂತಿಲ್ಲಾ ಎನ್ನುತ್ತಿದ್ದಾರೆ ಸಾರ್ವಜನಿಕರು. 

ಆದರಿಂದ ಬಸರಕೋಡ ಗ್ರಾಮದಿಂದ  ರೂಡಗಿ, ಆಲಕೋಪ್ಪರಕ್ಕೆ ಹೋಗುವ ರಸ್ತೇಯನ್ನು ಅಧಿಕಾರದಲ್ಲಿರುವರು ಒಮ್ಮೇಯಾದರೂ ಕಣ್ಣು ತೆಗೆದು ನೋಡಿದರೆ ಸಾಕು ಪುಣ್ಯ ಬರತದ ಅವರ ಹೆಂಡಿರ ಮಕ್ಕಳಿಗೆ ಎನ್ನುತ್ತಿದ್ದಾರೆ ಗ್ರಾಮಸ್ಥರು. ಸಿದ್ದಾಪೂರ, ಗುಂಡಕರ್ಚಗಿ, ಕೋಪ್ಪ, ಗುಡದಿನ್ನಿ ಇನ್ನು ಸುಮಾರು ಗ್ರಾಮಗಳಿಗೆ ಹೋಗಬೇಕಾದರೆ ಇದೇ ರಸ್ತೇಯನ್ನೇ ಜನರು ಅವಲಂಬಿಸಿದ್ದಾರೆ. ಇಂತಹ ಸಮಸ್ಯೆಗಳನ್ನು ನೋಡಿದರೆ ನಮಗೆ ನಿಜವಾಗಲೂ ಸ್ವಾತಂತ್ರ್ಯ ಸಿಕ್ಕಿದೇಯಾ ? ಎಂದು ಸಂಶಯ ಬರುತ್ತಿದೆ ಎಂದು ಜನರು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದಾರೆ. 

ಮಾರ್ಚ ತಿಂಗಳಲ್ಲಿ ರಸ್ತೆ ರಿಪೇರಿ ಗ್ಯಾರಂಟಿ:

ಯಾವದೇ ಕಾಮಗಾರಿಯನ್ನು  ಅಪೂರ್ಣವಾಗಿ ಮಾಡಿದ್ದರೆ ಅಂತಹ ಕಾಮಗಾರಿಯನ್ನು ಪೂರ್ಣ ಮಾಡಿ, ಮಾರ್ಚ ತಿಂಗಳಲ್ಲಿ ಅನುದಾನವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ವಿಚಿತ್ರ ಏನ್ನಪ್ಪಾ ಎಂದರೆ, ಬಸರಕೋಡದಿಂದ ಆಲಕೋಪ್ಪರವರೆಗೂ ರಸ್ತಾವನ್ನು ಪ್ರತಿ ವರ್ಷ ಮಾರ್ಚ ತಿಂಗಳಲ್ಲಿ ರಿಪೇರಿ ಮಾಡುವದಕ್ಕೆ ಅನುದಾನವನ್ನು ತೆಗೆದುಕೊಂಡು, ರಿಪೇರಿ ಕಾಮಗಾರಿಯನ್ನು ಸಹ ಮನಸ್ಸಿಗೆ ಬಂದ ರೀತಿಯಲ್ಲಿ ಮಾಡಿ ಗುತ್ತಿಗೆದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು ನುಂಗಿ ನೀರು ಕುಡಿಯುತ್ತಿದ್ದಾರೆ , ಮತ್ತು ಸುಮಾರು ಈ ರಸ್ತೇ ಐದು ವರ್ಷದಲ್ಲಿ ಐದು ಬಾರಿ ರಿಪೇರಿಯನ್ನು ಮಾಡಿದ್ದಾರೆಂದು ಎಂದು ಜನರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಸ್ವಾಮಿ.. 

ಜನಪ್ರತಿನಿಧಿಗಳೇ ನಮ್ಮೂರ ರಸ್ತಾ ನೋಡ್ರೀ : 

ತಾಲೂಕಿನಲ್ಲಿ ಕೆಲವು ಗ್ರಾಮೀಣ ಬಾಗಗಳಲ್ಲಿ ಸರಿಯಾಗಿ ಪ್ರಯಾಣಿಸಲು ಸರಿಯಾದಂತಹ ರಸ್ತೇಗಳಿಲ್ಲಾ, ಇದಕ್ಕೆ ತಾಜಾ ಉದಾಹರಣೆ ಎಂದರೆ ಬಸರಕೋಡ ಗ್ರಾಮದಿಂದ ಬಸವನ ಬಾಗೇವಾಡಿಗೆ ಹೋಗುವ ರಸ್ತೇಯೇ ಸಾಕ್ಷೀ, ಈ ರಸ್ತೇಯನ್ನು ನೋಡಿದರೇ ತಾಲೂಕಿನ ಆಡಳಿತಕ್ಕೆ ಕೈಗನ್ನಡಿ ಎಂದೇ ಅಂದಾಜಿಸಬಹುದು.ಅಬಿವೃದ್ದಿಯೇ ನನ್ನ ಮೂಲಭೂತ ಮಂತ್ರ ಎಂದು ಹೇಳುವ ಶಾಸಕರಿಗೆ ನಮ್ಮೂರಿನ ರಸ್ತೇ ಕಾಣುತ್ತಿಲ್ಲವೇ ? ಅಥವಾ ಕಂಡರೂ ಕಾಣದಂತೆ ಮೌನವಹಿಸಿದ್ದು ಯಾಕೇ ? ಎನ್ನುತ್ತಿದ್ದಾರೆ ರೂಡಗಿ, ಆಲಕೊಪ್ಪರ ಗ್ರಾಮಸ್ಥರು. 

ರಸ್ತೆಯಲ್ಲಿ ಕಡಿತುಂಬಿಕೊಂಡು ವಾಹನ ದಿನನಿತ್ಯ ಓಡಾಡುವದರಿಂದ ನಮ್ಮೂರ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಅನೇಕ ಬಾರಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿದಿಗಳಿಗೆ ತಿಳಿಸಿದರು ಪ್ರಯೋಜನೆಯಾಗಿಲ್ಲಾ ಎಂದರು.

ಎಚ್ ಎಸ್ ಸಿದ್ದನಾಥ 

ಆಲಕೋಪ್ಪರ ಗ್ರಾಮದ ಯುವ ಮುಖಂಡ

ತಾಲೂಕಿನ ಬಸರಕೋಡದಿಂದ ಬಾಗೇವಾಡಿಗೆ ತೆರಳುವ ರಸ್ತೆಗಳೂ ಸಂಪೂರ್ಣ ಹಾಳಾಗಿದ್ದಾವೆ. ಸಂಭಂದಿಸಿದ ಅಧಿಕಾರಿಗಳೂ ಬಸರಕೋಡ ಗ್ರಾಮದಿಂದ ಕಣಕಾಲವರೆಗೆ ರಸ್ತೇಯನ್ನು ನಿರ್ಮಾಣ ಮಾಡಿಕೊಡಿ 

ಯುವ ಮುಖಂಡ ಮುತ್ತಪ್ಪ ಪೂಜಾರಿ ಆಗ್ರಹ. 


ಸುದ್ದಿ ಓದಿ