ಮಹಲಿಂಗಪುರ

ಶಾಸಕ ಸಿದ್ದು ಸವದಿ ಸಹಾನುಭೂತಿಯಿಂದ ಸ್ಪಂದಿಸಲಿ: ಉಮಾಶ್ರೀ

ಶಾಸಕ ಸಿದ್ದು ಸವದಿ ಸಹಾನುಭೂತಿಯಿಂದ ಸ್ಪಂದಿಸಲಿ: ಉಮಾಶ್ರೀ

ಮಹಾಲಿಂಗಪುರ 12: ಶಾಸಕ ಸಿದ್ದು ಸವದಿ ಆತ್ಮಾವಲೋಕನ ಮಾಡಿಕೊಂಡು ಕಷ್ಟದಲ್ಲಿರುವವರು ಕರೆ ಮಾಡಿದಾಗ ಸಹಾನುಭೂತಿಯಿಂದ ಸ್ಪಂದಿಸಿ ಅವರಲ್ಲಿ ಶಕ್ತಿ ತುಂಬಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಭಾಜಪ ಸದಸ್ಯೆ ಯಮನವ್ವ ಧೊಂಡಿಬಾ ಗಾಯಕವಾಡ ಅವರ ಪುತ್ರ ಶಾಸಕರಿಗೆ ಕರೆ ಮಾಡಿ ತನ್ನ ಸಹೋದರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವಿಷಯ ಹಾಗೂ, ಆಕ್ಸಿಜನ್ ಬೆಡ್ ವ್ಯವಸ್ಥೆ ಕುರಿತು ಕೇಳಿದಾಗ, ಸಿಟ್ಟಿಗೆದ್ದ ಶಾಸಕ ನಾಲಾಯಕ್ ಫೋನ್ ಕೆಳಗೆ ಇಡು ಎಂದು ದರ್ಪದಿಂದ ಮಾತನಾಡಿದ್ದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಕೊರೋನಾ ಜನರ ಓಡಾಟದಿಂದ ಬಂದದ್ದಲ್ಲ, ಕೇಂದ್ರ ಸಕರ್ಾರದ ಅಶಿಸ್ತಿನ, ನಿರ್ಣಯಗಳು, ಆಡಳಿತ ವೈಫಲ್ಯದಿಂದ ಬಂದದ್ದು.

 ಜನಸಾಮಾನ್ಯರು ಆಕ್ಸಿಜನ್ ಹಾಗೂ ಚಿಕಿತ್ಸೆ ಸಿಗದೆ ಸಾವು, ನೋವಿನಿಂದ ಒದ್ದಾಡುತ್ತಿದ್ದಾರೆ. ಅಷ್ಟೆ ಅಲ್ಲ ಆಥರ್ಿಕ ಹಿನ್ನಡೆಯಿಂದಲೂ ತತ್ತರಿಸಿರುವ ಈ ಸಮಯದಲ್ಲಿ ಅವರ ಮನದಾಳದ ಮಾತುಗಳನ್ನು ಸಾವಧಾನದಿಂದ ಕೇಳಿ, ಸಾಂತ್ವನ ಹೇಳುವುದು ಅವರಿಗೆ ದೊಡ್ಡ ಶಕ್ತಿಯಾಗುತ್ತದೆ. ಅದನ್ನು ಬಿಟ್ಟು ಸಿಟ್ಟಿನ ಭರದಲ್ಲಿ ಗೂಬೆ ಕೂರಿಸುವ ಕೆಲಸವಾಗಬಾರದು. 

ಅಷ್ಟಕ್ಕೂ ನಾಲಾಯಕ್ ಎನಿಸಿಕೊಂಡ ಗಾಯಕವಾಡ ಭಾಜಪ ಪಕ್ಷದ ಸಕ್ರಿಯ ಕಾರ್ಯಕರ್ತ ಹಾಗೂ ನಾಯಕನಾಗಿದ್ದು ಅಂತಹವರಿಗೆಯೇ ದರ್ಪದ ಮಾತನಾಡಿದ ಶಾಸಕರು ಸಾಮಾನ್ಯ ಜನರಿಗೆ ಯಾವ ನ್ಯಾಯ ಕೊಡಲು ಸಾಧ್ಯ ? 

ಅದು ಅಲ್ಲದೆ ಮಹಾಲಿಂಗಪುರ ಹಾಗೂ ಬನಹಟ್ಟಿ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಸಕಲ ವ್ಯವಸ್ಥೆ ಇದ್ದರೂ ಚಿಕಿತ್ಸೆ ಆರಂಭ ವಿಳಂಬಕ್ಕೆ ಕಾಂಗ್ರೆಸ್ ನಾಯಕರು ಪ್ರಶ್ನಿಸಿಸಿದರೆ ಅವರಿಗೆ ಕೆಲಸವಿಲ್ಲ, ಅವರು ಇದರಲ್ಲಿಯೂ ರಾಜಕೀಯ ಮಾಡುತ್ತಾರೆಂದು ವಿರೋಧ ಪಕ್ಷದ ಸಾಂವಿಧಾನಿಕ ಸ್ಥಾನಮಾನಗಳನ್ನು ಅಲ್ಲಗಳೆಯುತ್ತಿದ್ದಾರೆ. 

ಜವಾಬ್ದಾರಿಯುತ ಸಚಿವ ಉಮೇಶ್ ಕತ್ತಿಯವರು ಸಹ ಸಾಯುವವರು ಸಾಯಲಿ, ನಾನು ಮಾತ್ರ ಬದುಕಬೇಕು ಎಂಬ ದಾಷ್ಟ್ಯದ ಮಾತುಗಳು ಜನಸಾಮಾನ್ಯರ ಬಗೆಗಿರುವ ಬಿಜೆಪಿಯ ನಿರ್ಲಕ್ಷ್ಯ ಧೋರಣೆ ಸ್ಪಷ್ಟವಾಗುತ್ತದೆ. ಜನಪ್ರತಿನಿಧಿಗಳು ಮತದಾರರಿಂದ ಆಯ್ಕೆಯಾಗಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆ ವಿನಃ ಸವರ್ಾಧಿಕಾರಿ ಧೋರಣೆಯನಲ್ಲ.

ಇತ್ತೀಚೆಗೆ ಸಚಿವರಾದ ಈಶ್ವರಪ್ಪ ವಿರೋಧ ಪಕ್ಷಗಳು ಬಾಯಿ ಮುಚ್ಚಿ ಕೂಡಬೇಕು. ಜನರಿಗೆ ಹತ್ತು ಸಾವಿರ ಗಟ್ಟಲೆ ಹಣ ನೀಡಲು ನಾವು ನೋಟ್ ಪ್ರಿಂಟ್ ಮಾಡಬೇಕೆ ಎಂದು ಪ್ರಶ್ನೆ ಮಾಡುತ್ತಾರೆ. ನಾವು ಪ್ರಿಂಟ್ ಮಾಡಲು ಹೇಳುತ್ತಿಲ್ಲ, ಇರುವ ವ್ಯವಸ್ಥೆಯಲ್ಲಿ ಜನರ ಕಷ್ಟಗಳಗೆ ಸ್ಪಂದಿಸಿ ಎಂದು ಹೇಳುತ್ತಿದ್ದೇವೆ. 

 ವಯಕ್ತಿಕ ಒತ್ತಡಗಳಿಗೆ ಸಿಲುಕಿ ಜನಸಾಮಾನ್ಯರ ಮೇಲೆ ರೇಗಾಡಬಾರದುರದು. ಮೀಟಿಂಗ್ ಹಾಗೂ ಜನರ ಮಧ್ಯೆ ಓಡಾಟ ಜನಪ್ರತಿನಿಧಿಯ ಆದ್ಯ ಕರ್ತವ್ಯವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

 

ಸುದ್ದಿ ಓದಿ