ಜುಲೈ 11ಕ್ಕೆ ಎಂ.ಪಿ.ಪ್ರಕಾಶ್ ರ 86ನೇ ಜನ್ಮದಿನ ಆಚರಣೆ
ಲೋಕದರ್ಶನ ವರದಿ
ಹೂವಿನಹಡಗಲಿ 09- ’ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ಅವರ 86ನೇ ಜನ್ಮ ದಿನೋತ್ಸವ ಪ್ರಯುಕ್ತ ಜುಲೈ 11 ರಂದು ಪಟ್ಟಣದ ರಂಗಭಾರತಿ ರಂಗಮಂದಿರ ಮುಂಭಾಗದಲ್ಲಿ ಎಂ.ಪಿ.ಪ್ರಕಾಶ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ರಂಗಭಾರತಿ ಅಧ್ಯಕ್ಷೆ ಎಂ.ಪಿ.ಸುಮಾ ವಿಜಯ್, ಎಂ.ಪಿ.ಪ್ರಕಾಶ್ ಪ್ರತಿಷ್ಠಾನ ಕಾರ್ಯದರ್ಶಿ ಶಾಂತಮೂರ್ತಿ ಬಿ.ಕುಲಕರ್ಣಿ ಹೇಳಿದರು.’ದಿ. ಸೊಪ್ಪಿನ ಬಾಳಪ್ಪ ಹಾಗೂ ಅಪಾರ ಅಭಿಮಾನಿಗಳ ಒತ್ತಾಸೆಯಂತೆ ಎಂ.ಪಿ.ಪ್ರಕಾಶ ಅವರ ಕಂಚಿನ ಪುತ್ಥಳಿ ರೂಪಿಸಲಾಗಿದೆ. ನಾನಾ ಕಾರಣಗಳಿಂದ ಎರಡು ವರ್ಷ ವಿಳಂಬವಾಗಿದ್ದ ಪುತ್ಥಳಿ ಅನಾವರಣ ಕಾರ್ಯಕ್ರಮ 11 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದೆ. ಎಂಪಿಪಿ ಒಡನಾಡಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿ ಲೋಕಾರೆ್ಣ ಮಾಡಲಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸುತ್ತೂರು ಕ್ಷೇತ್ರದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ, ಲಿಂಗನಾಯಕನ ಹಳ್ಳಿ ಮಠದ ಚನ್ನವೀರ ಸ್ವಾಮೀಜಿ, ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದರು.ನಿರ್ದೇಶಕ ಟಿ.ಎನ್.ಸೀತಾರಾಮ್ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಪಿ.ಟಿ.ಪರಮೇಶ್ವರನಾಯ್ಕ, ಶಾಸಕ ಸಂತೋಷ ಲಾಡ್, ಸಂಸದ ಈ. ತುಕಾರಾಂ, ಶಾಸಕರಾದ ಮಧು ಬಂಗಾರ್ಪ, ಕೃಷ್ಣನಾಯ್ಕ, ಗಣೇಶ ಪ್ರಸಾದ್, ಲತಾ *ಕಾರ್ಜುನ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಗಳಾದ ಭಾಗವಹಿಸಲಿದ್ದಾರೆ. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಸ್ಥಳದಾನಿ ಹಣ್ಣಿ ಸರ್ವಮಂಗಳಮ್ಮ ವೀರಭದ್ರ್ಪ ಕುಟುಂಬ, ಶಿಲ್ಪಿ ಬಿ.ಸಿ. ಶಿವಕುಮಾರ, ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ ಎಸ್.ಪಾಟೀಲ್, ಗುತ್ತಿಗೆದಾರ ಮುರುಗೇಶ ತುರುಕಾಣಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.ಮಧ್ಯಾಹ್ನ 3 ಗಂಟೆಗೆ ಎಂ.ಡಿ.ಪಲ್ಲವಿ ತಂಡದಿಂದ ಗಾನವೈಭವ, ಸಂಜೆ 5ಕ್ಕೆ ಎಂ.ಪಿ.ಪ್ರಕಾಶ್ ಕಲಾನಿಕೇತನ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂಜೆ 5.30ಕ್ಕೆ ಕರ್ನಾಟಕ ನಾಟಕ ಅಕಾಡೆಮಿಯಿಂದ ’ರಂಗ ದಿಗ್ಗಜ ಎಂ.ಪಿ.ಪ್ರಕಾಶ್ ಹವ್ಯಾಸಿ ನಾಟಕೋತ್ಸವ’ ಹಮ್ಮಿಕೊಳ್ಳಲಾಗಿದೆ. ರಂಗಭಾರತಿ ಕಲಾವಿದರು ’ಸೂರ್ಯ ಶಿಕಾರಿ’ ನಾಟಕ ಪ್ರದರ್ಶಿಸುವರು. ನಾಟಕ ಅಕಾಡೆಮಿಯು ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಇದ್ದರು.