ವೃದ್ಧ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,06: ಕುರುಗೋಡು ತಾಲ್ಲೂಕಿನ ಮಲ್ಲೇಶ್ವರ ಕ್ಯಾಂಪ್ ಗ್ರಾಮದ ಎಂ.ಸುಬ್ಬರೆಡ್ಡಿ ಎನ್ನುವ 64 ವರ್ಷದ ವೃದ್ಧ 2022ರ ಏ.6 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಕುರುಗೊಡು ಪೋಲೀಸ್ ಠಾಣೆಯ ಆರಕ್ಷಕ ವೃತ್ತ ನೀರೀಕ್ಷಕ ಅವರು ಮನವಿ ಮಾಡಿದ್ದಾರೆ.
ವೃದ್ಧನ ಚಹರೆ:
ಎತ್ತರ 5.5 ಅಡಿ, ದುಂಡು ಮುಖ, ಗೋದಿ ಮೈಬ್ಬಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷ ಮತನಾಡುತ್ತಾನೆ. ಕಾಣೆಯಾದ ಸಂಧರ್ಭದಲ್ಲಿ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗು ಬಿಳಿ ಬಣ್ಣದ ಧೋತ್ರ ಧರೆಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವೃದ್ಧನ ಬಗ್ಗೆ ಮಾಹಿತಿ ದೊರೆತಲ್ಲಿ ಕುರುಗೋಡು ಪೊಲೀಸ್ ಠಾಣೆಯ ದೂ:08392263433, ಮೊ:9480803039 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ:08392258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.