ಮಹಾರಾಷ್ಟ್ರದಲ್ಲಿ ಮದ್ಯಕ್ಕೆ ಕಡಿಮೆ ದರ, ಕಬ್ಬಿಗೆ ಹೆಚ್ವು : ಕರ್ನಾಟಕದಲ್ಲಿ ಕಬ್ಬಿಗೆ ಕಡಿಮೆ, ಮದ್ಯಕ್ಕೆ ದರ ಹೆಚ್ವು : ತಾರತಮ್ಯ ವಿರುದ್ಧ ಗುಡುಗಿದ ಗಡಾದ : ಕಾನೂನು ಹೋರಾಟದ ಎಚ್ವರಿಕೆ

ಮಹಾರಾಷ್ಟ್ರದಲ್ಲಿ ಮದ್ಯಕ್ಕೆ ಕಡಿಮೆ ದರ, ಕಬ್ಬಿಗೆ ಹೆಚ್ವು : ಕರ್ನಾಟಕದಲ್ಲಿ ಕಬ್ಬಿಗೆ ಕಡಿಮೆ, ಮದ್ಯಕ್ಕೆ ದರ ಹೆಚ್ವು : ತಾರತಮ್ಯ ವಿರುದ್ಧ ಗುಡುಗಿದ ಗಡಾದ : ಕಾನೂನು ಹೋರಾಟದ ಎಚ್ವರಿಕೆ

ಬೆಳಗಾವಿ : ನೆರೆಯ ಮಹಾರಾಷ್ಟ್ರದಲ್ಲಿ ಸರಕಾರ ರೈತರ ಕಬ್ಬಿಗೆ ಹೆಚ್ವಿನ ದರ ನೀಡಿ, ಮದ್ಯದ ದರವನ್ನು ಕಡಿಮೆ ಮಾಡಿದೆ. ಆದರೆ ಕರ್ನಾಟಕದಲ್ಲಿ ರೈತರ ಕಬ್ಬಿನ ಬೆಳೆಗೆ ದರ ಕಡಿಮೆ ನೀಡಿ, ಮದ್ಯಕ್ಕೆ ಹೆಚ್ವು ದರ ನಿಗಧಿ ಮಾಡಿದೆ. ಇದರಿಂದ ರಾಜ್ಯದಲ್ಲಿ ರೈತರಿಗೆ ಹಾಗೂ ಮದ್ಯ ಪ್ರಿಯರಿಗು ಸರಕಾರ ಅನ್ಯಾಯ ಮಾಡುತ್ತಿದೆ. ಇದರನ್ನು ರಾಜ್ಯ ಸರಕಾರ ಸರಿ ಪಡಿಸದಿದ್ದರೆ ಸರಕಾರ ವಿರುದ್ದ ಕಾನೂನು ಹೋರಟಾ ಮಾಡುವದಾಗಿ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಸರಕಾರವನ್ನು ಎಚ್ಚರಿಸಿದ್ದಾರೆ.

     ಈ ಕುರಿತು ಹೇಳಿಕೆ ನೀಡಿರುವ ಗಡಾದ ಅವರು, ರಾಜ್ಯದಲ್ಲಿ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ನೀಡದ ಕಾರ್ಖಾನೆಗಳ ವಿರುದ್ದ ಕ್ರಮಕೈಗೊಳ್ಳಲಾಗದ ಸರಕಾರ ಅಬಕಾರಿ ದರವನ್ನು ಹೆಚ್ಚಿಸುತ್ತಲೆ ಇದ್ದು, 5 ವರ್ಷಗಳ ಅಬಕಾರಿ ಆದಾಯ 1 ಲಕ್ಷ 21 ಸಾವಿರ ಕೋಟಿಯಾಗಿದೆ. ಅದರಂತೆ ಕರ್ನಾಟಕ - ಮಹಾರಾಷ್ಟ್ರಗಳ ಮಧ್ಯದ ದರಗಳಲ್ಲಿ ಭಾರಿ ವ್ಯತ್ಯಾಸ ಇದೆ. ಇವಗಳನ್ನು ಸರಿಪಡಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗುವದಾಗಿ ಗಡಾದ ಅವರು ಎಚ್ಚರಿಸಿದ್ದಾರೆ.

   ಕಳೆದ 5 ವರ್ಷಗಳ ಅವಧಿಯಲ್ಲಿ ರಾಜ್ಯ ಖಜಾನೆಗೆ ಅಬಕಾರಿ ಇಲಾಖೆ ಒಂದರಿಂದಲೇ ಸುಮಾರು 1 ಲಕ್ಷ 21 ಸಾವಿರದಾ 158 ಕೋಟಿ ರೂ. ಗಳ ಆದಾಯದಲ್ಲಿ ಬಂದಿರುವ ವಿಷಯವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.

    ೨೦೧೮-೧೯ ನೇ ಸಾಲಿನಿಂದ ೨೦೨೨-೨೩ ನೇ ಸಾಲಿನ ಅವಧಿಯಲ್ಲಿ ಭಾರತ ತಯಾರಿಕಾ ಮಧ್ಯ ಮಾರಾಟದಿಂದ ೧ ಲಕ್ಷ ೨ ಸಾವಿರದಾ ೫೬೪ ಕೋಟಿ ರೂ. ಗಳು ಮತ್ತು ಬೀಯರ್ ಮಾರಾಟದಿಂದ ೧೫ ಸಾವಿರದಾ ೭೧ ಕೋಟಿ ರೂ. ಗಳು ಹಾಗೂ ಸನ್ನದು ಶುಲ್ಕಗಳ ಮುಖಾಂತರವಾಗಿ ೩ ಸಾವಿರದಾ ೧೧೧ ಕೋಟಿ ರೂ. ಗಳು ಅಲ್ಲದೇ ಅಬಕಾರಿ ಇಲಾಖೆಯ ಇತರ ಮೂಲಗಳಿಂದ ೨೦೧ ಕೋಟಿ ರೂ. ಗಳು ರಾಜ್ಯ ಖಜಾನೆಗೆ ಸಂದಾಯವಾಗಿರುತ್ತವೆ.

    ಯಾವುದೇ ಸರಕಾರಗಳು ಬರಲಿ ಮುಂಗಡ ಪತ್ರದಲ್ಲಿ ಮೊದಲಿಗೆ ಅಬಕಾರಿ ಸುಂಕವನ್ನೇ ಹೆಚ್ಚಿಸುತ್ತವೆ. ಹೀಗಾಗಿ ಮಧ್ಯಪ್ರಿಯರಿಂದ ಬರುವ ಆದಾಯದಿಂದಲೇ ಈ ಸರಕಾರಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಸರಾಯಿ ಮುಕ್ತ ರಾಜ್ಯವನ್ನಾಗಿ ಮಾಡಿದರೆ ಸಚಿವರುಗಳ ಸಂಬಳಕ್ಕೂ ಹಣ ಇಲ್ಲದಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲಾ. ಈ ಕಾರಣದಿಂದಲೇ ಆಡಳಿತಕ್ಕೆ ಬರುವ ಯಾವ ಸರಕಾರಗಳು ಸರಾಯಿ ಬಂದ ಮಾಡುತ್ತಿಲ್ಲವೆಂಬುದು ಖಚಿತವಾಗುತ್ತದೆ.

    ಮಧ್ಯಪ್ರಿಯರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕಬ್ಬಿನ ಉಪ ಉತ್ಪನ್ನದಿಂದ ಮಧ್ಯ ತಯಾರಿಸಲಾಗುತ್ತಿದೆ. ನೆರೆಯ ಮಹಾರಾಷ್ಟçದಲ್ಲಿ ಕಬ್ಬಿಗೆ ಹೆಚ್ಚಿನ ದರ ನೀಡುತ್ತಿದ್ದರೂ ಕೂಡಾ ಅಲ್ಲಿ ಮಧ್ಯದ ದರ ನಮ್ಮ ರಾಜ್ಯಕ್ಕಿಂತಲೂ ಕಡಿಮೆ ಇರುವುದು ವಿಶೇಷವಾಗಿದೆ.

     ಕರ್ನಾಟಕದಲ್ಲಿ ಕಬ್ಬಿಗೆ ಅತೀ ಕಡಿಮೆ ದರ ನೀಡುತ್ತಿದ್ದರೂ ಇಲ್ಲಿನ ಸರಕಾರ ಮಧ್ಯದ ದರವನ್ನು ಊಹೆಗೂ ಮೀರಿ ಹೆಚ್ಚಿಸಿದೆ ಅಂದರೆ ತಪ್ಪಾಗಲಾರದು. ಯಾಕೆ ಈ ತಾರತಮ್ಯ ಎಂಬುದು ಮಧ್ಯಪ್ರಿಯರ ಪ್ರಶ್ನೆಯಾಗಿದೆ.

    ಮಹಾರಾಷ್ಟ್ರದಲ್ಲಿ ವಿವಿಧ ಮದ್ಯದ ಬ್ರಾಂಡಗಳು ಭಾರೀ ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವುದರಿಂದ ರಾಜ್ಯದ ಮಧ್ಯಪ್ರಿಯರು ಮಹಾರಾಷ್ಟçದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಧ್ಯ ಖರೀದಿಸುತ್ತಿದ್ದಾರೆ ಇದು ರಾಜ್ಯದ ಅಬಕಾರಿ ಆದಾಯದ ಮೇಲೂ  ಪರಿಣಾಮ ಬೀರುತ್ತಲಿದೆ. ಕಾರಣ ಸರಕಾರ ಎಚ್ಚೆತ್ತುಕೊಂಡು ಈಗಲಾದರೂ ಕಬ್ಬಿಗೆ ಯೋಗ್ಯ ಬೆಲೆ ನೀಡುವುದರ ಜೊತೆಗೆ ಮಧ್ಯದ ದರದಲ್ಲಿನ ಈ ತಾರತಮ್ಯವನ್ನು ಹೋಗಲಾಡಿಸಲು ಸೂಕ್ತ ಕ್ರಮ ಕೈಗೊಂಡು ಕಬ್ಬು ಬೆಳೆಗಾರರಿಗೆ ಹಾಗೂ ಮಧ್ಯಪ್ರಿಯರಿಗೆ ನ್ಯಾಯ ದೊರಕಿಸದೆ ಇದ್ದಲ್ಲಿ ಸರ್ಕಾರದ ವಿರುದ್ಧ ನ್ಯಾಯಾಲಯದ ಮುಖಾಂತರ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಭೀಮಪ್ಪ ಗಡಾದ ಅವರು ಸರಕಾರವನ್ನು ಎಚ್ವರಿಸಿದ್ದಾರೆ.


ಸುದ್ದಿ ಓದಿ