ಮಹಲಿಂಗಪುರ

ಪ್ರೀತಿಗೆ ವಿರೋಧ ಪ್ರೇಮಿಗಳು ಆತ್ಮಹತ್ಯೆಗೆ ಶರಣು

ಪ್ರೀತಿಗೆ ವಿರೋಧ ಪ್ರೇಮಿಗಳು ಆತ್ಮಹತ್ಯೆಗೆ ಶರಣು

ಮಹಾಲಿಂಗಪುರ 10:  ಮನೆಗಳಲ್ಲಿ ಪ್ರೀತಿಗೆ ವಿರೋಧ ಮತ್ತು ಪರಸ್ಪರರ ಮದುವೆಗೂ ನಿರಾಕರಿಸಿದ ಹಿನ್ನೆಲೆಯಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ನಂದಗಾಂವ ಗ್ರಾಮದ ಪ್ರೇಮಿಗಳಿಬ್ಬರು, ಶುಕ್ರವಾರ ಬೆಳಗಿನ ಜಾವ 1 ಗಂಟೆಯಿಂದ ಮುಂಜಾನೆ 6 ಗಂಟೆಯ ಅವಧಿ ಒಳಗೆ ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಕುರಿತಾಗಿ ಹುಡುಗಿಯ ತಾಯಿ ನೀಲವ್ವ ಮಲ್ಲಪ್ಪ. ಮಡಿವಾಳ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಮೃತರು ನಂದಗಾಂವ ಗ್ರಾಮದ ಅನ್ಯ ಜಾತೀಯವರಾಗಿದ್ದು, ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಗ್ರಾಮದ ಹಿರಿಯರು, ಮನೆಯವರು ಪದೆ ಪದೆ ಅವರಿಗೆ ಬುದ್ಧಿವಾದ ಸಹ ಹೇಳುತ್ತ ಬಂದಿದ್ದು, ಇದನ್ನು ಲೆಕ್ಕಿಸದೆ ತಮ್ಮ ಪ್ರೀತಿಯ ಛಾಳಿಯನ್ನು ಮುಂದುವರೆಸಿದ್ದರು. 

ಇನ್ನೂ ಮುಂದೆ ನಮ್ಮ ಮದುವೆಗೂ ಇವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಪರಸ್ಪರ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ನಿರ್ಧರಿಸಿ. ಮೃತ ಸಚಿನ್ (ಬೀರ​ಪ್ಪ ದಳವಾಯಿ ಮಗ) (22) ತಮ್ಮದೆ ಹೊಲದಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರತಿಭಾ ಮಲ್ಲಪ್ಪ ಮಡಿವಾಳ (19) ಜೊತೆಗೂಡಿ ಟಾವೆಲ್ ಹಾಗೂ ವೇಲ್ ನಿಂದ ಮಾವಿನ ಗಿಡ ಒಂದಕ್ಕೆ ನೇನು ಬಿಗಿದುಕ್ಕೊಂಡು ಪ್ರಾಣ ತ್ಯಾಗ ಮಾಡಿಕ್ಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. 

ಪ್ರಕರಣ ನಡೆದ ಸ್ಥಳಕ್ಕೆ ಮಹಜರು ನಡೆಸಲು ಜಮಖಂಡಿ ಡಿವಾಯ್ ಎಸ್ಪಿ ಈ ಶಾಂತವೀರ ಮತ್ತು ಮಹಾಲಿಂಗಪುರ ಠಾಣೆ ಠಾಣಾಧಿಕಾರಿ ಕಿರಣ ಸತ್ತಿಗೇರಿ ಹಾಗೂ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಸ್ಥಳೀಯ ಪೋಲಿಸ್ ಇಲಾಖೆ ತಿಳಿಸಿದೆ. 


ಸುದ್ದಿ ಓದಿ