ಪ್ರೀತಿಸಿ ಕೈಕೊಟ್ಟ ಪ್ರಿಯಕರ : ಪತಿಗೂ ಅಶ್ಲೀಲ ಪೊಟೊ ಕಳಿಸಿದ ಭೂಪ : ಪ್ರೀಯಕರನ ಮನೆ ಎದುರು ಧರಣಿಗೆ ಕುಳಿತ ಯುವತಿ

ಪ್ರೀತಿಸಿ ಕೈಕೊಟ್ಟ ಪ್ರಿಯಕರ : ಪತಿಗೂ ಅಶ್ಲೀಲ ಪೊಟೊ ಕಳಿಸಿದ ಭೂಪ : ಪ್ರೀಯಕರನ ಮನೆ ಎದುರು ಧರಣಿಗೆ ಕುಳಿತ ಯುವತಿ

ಬೆಳಗಾವಿ : "ಪ್ರೀತಿ‌ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು" ಎನ್ನು‌ ಮಾತು ಈಗ ಅಕ್ಷರಶಃ ಸುಳ್ಳಾಗಿದ್ದು, ಪ್ರೀತಿಸಿ ಮದುವೆ ಆಗುವದಾಗಿ ನಂಬಿಸಿ ದೈಹಿಕ ಸುಖ ಪಡೆದ ಪ್ರೀಯಕರ ಕೈಕೊಟ್ಟಿದ್ದು ಅಲ್ಲದೆ ಕೊನೆಗೆ ಆ ಯುವತಿ ಬೇರೆಯವನೊಂದಿಗೆ ಮದುವೆ ಆದ ಪತಿಯ ಮನೆಯವರಿಗೆ ತಾವು ನಗ್ನವಾಗಿದ್ದ ಅಶ್ಲೀಲ ಪೊಟೊ ಕಳಿಸಿ ಮದುವೆ ಮುರಿದು ಬೀಳುವ ಮನೆ‌ಮುರಕ ಕೆಲಸ‌ ಮಾಡಿರುವ ಘಟನೆಯೊಂದು ಜಿಲ್ಲೆಯ ಕಿತ್ತೂರಲ್ಲಿ ನಡೆದಿದ್ದು, ನೊಂದ ಯುವತಿ ನ್ಯಾಯಕ್ಕಾಗಿ ಪ್ರೀಯಕರನ ಮನೆ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾಳೆ. 

   ಕಿತ್ತೂರಿನಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಪತಿ ಮನೆಯಿಂದ ಮರಳಿ ಕರೆದುಕೊಂಡು ಬಂದ ಯುವಕ, ಆ ಯುವತಿಯನ್ನು ತಾನೂ ಕೂಡಾ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಪ್ರೀತಿಸಿದ ಯುವಕನ ಮನೆ ಮುಂದೆ ಏಕಾಂಗಿ ಆಗಿ ಧರಣಿ ನಡೆಸಿದ್ದಾಳೆ. 

 ಈ ಪ್ರಕರಣ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಯುವಕನ ಮನೆಯವರು ಬಾಗಿಲನ್ನು ಹಾಕಿಕೊಂಡರೆ, ಯುವಕ ಮಾತ್ರ ಎಲ್ಲೋ ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.

   ಕಿತ್ತೂರಿನ ಸೋಮವಾರ ಪೇಟೆಯ ಯುವಕ ಮತ್ತು ಯುವತಿ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವಂತೆ ಯುವತಿ ಮನೆಯವರು ಒಪ್ಪಿಗೆ ನೀಡಿದ್ದರು. ಆದರೆ, ಯುವಕನ ಮನೆಯವರು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ, ಯುವತಿಯನ್ನು ಬೇರೊಬ್ಬ ವರನೊಂದಿಗೆ ಫೆ.14ರಂದು ಸಂಭ್ರಮದಿಂದ ಮದುವೆ ಮಾಡಿಕೊಟ್ಟಿದ್ದರು.

    ಯುವಕ ನಿರಾಕರಿಸಿದ ಕಾರಣ ನಾನು ಬೇರೊಬ್ಬರನ್ನು ಮದುವೆಯಾಗಿದ್ದೆ.  ಇದನ್ನೂ ಸಹಿಸದ ಆತ ನಮ್ಮಿಬ್ಬರ ಖಾಸಗಿತನದ ಫೋಟೊಗಳನ್ನು ಗಂಡನ ಮನೆಯವರಿಗೆ ಕಳಿಸಿದ್ದಾನೆ. 

  ಮದುವೆಯಾದ ಬಳಿಕವೂ ಪತಿಯ ಮನೆಯಿಂದ ನಾನು ಮರಳಿ ಬರುವಂತೆ ಮಾಡಿದ್ದಾನೆ. ಅವನೂ ಕೂಡಾ ನನ್ನ ಮದುವೆಯಾಗುತ್ತಿಲ್ಲ. ನನಗೆ ನ್ಯಾಯ ಕೊಡಿಸಬೇಕು ಎಂದು ಯುವತಿ ಆಗ್ರಹಿಸಿದರು.

   ನನ್ನ ಖಾಸಗಿತನದ ಫೋಟೊಗಳನ್ನು ತೋರಿಸಿ ಮದುವೆ ಮುರಿಯಲಾಗಿದೆ ಎಂದು ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಯುವತಿ ದೂರಿದ್ದಾರೆ. ಆದರೆ ಇತ್ತ ಪ್ರೀಯಕರನು ಕೈಕೊಟ್ಟಿದ್ದು, ಪತಿ‌ ಮನೆಯವರು ಬಿಟ್ಟಿದ್ದು, ಯುವತಿಯ ಸ್ಥಿತಿ ಅತಂತ್ರವಾಗಿದೆ. 

ಸುದ್ದಿ ಓದಿ