ಕಾರ್ಖಾನೆಗಳಿಗೆ ಕಂಟಕ, ಶುರು ವಾದ ಲಾರಿ ಮುಷ್ಕರ ಪ್ರತಿಭಟನೆ
ಬಳ್ಳಾರಿ: ನಗರದಲ್ಲಿ ಮತ್ತೆ ಇಂದಿನಿಂದ ಅನಿರ್ಧಿಷ್ಟಾವಧಿಯ ಲಾರಿ ಮಾಲೀಕರ ಮುಷ್ಕರ ಆರಂಭಗೊಂಡಿದ್ದು ಕಾರ್ಖಾನೆಗಳಿಗೆ ಕಂಟಕ ಶುರವಾಗಿದೆ.ಬಳ್ಳಾರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸುಲು ವಿ.ಮಿಂಚು ನೇತೃತ್ವದಲ್ಲಿ ನಗರದ ಐದು ಸೆಕ್ಟರ್ ಗಳ ಮಾದಿಯಲ್ಲಿ ,ಜಾನಕಿ, ಬಸಾಯಿ, ಹಲಕುಂದಿ ಸೆಕ್ಟರ್, ವಿ.ಆರ್.ಕೆ.ಪಿ.ಪಿ ಸೇರಿದಂತೆ 11 ಸ್ಥಳದಲ್ಲಿ ಕಾರ್ಖಾನೆಗಳ ಮುಂದೆ ಟೆಂಟ್ ಹಾಕಿ ಶಾಂತಿಯುತ ಧರಣಿ.
ಈ ಕುರಿತು ಮಾದ್ಯಮ ವಂದಿಗೆ ಮಾತನಡಿದ ಲಾರೀ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸುಲು ಮಿಂಚು, ನಾವು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಎಲ್ಲಾ ಲಾರೀ ಮಾಲೀಕರಲ್ಲಿ ಸಹಕರಿಸಲು ಮನವಿ ಮಾಡಿ ಧರಣಿ ಕುಳಿತಿದ್ದೇವೆ. ನಮ್ಮದು ಶಾಂತಿಯುತ ಹೋರಾಟ ಎಂದರು.
ಈ ಹಿಂದೆ ಮುಷ್ಕರ ನಡೆಸಿದಾಗ ಸ್ಪಾಂಜ್ ಐರನ್, ರೈಸ್ ಮಿಲ್ ಕಾರ್ಖಾನೆಗಳ ಮಾಲೀಕರು ಸಭೆ ನಡೆಸಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು.
ಆದರೆ ಲಾರಿಗಳ ಸರಕು ಸಾಗಾಟದ ಬಾಡಿಗೆ ದರ ಹೆಚ್ಚಳ, ಸೀರಿಯಲ್ ಪದ್ದತಿಯಲ್ಲಿ ಲೋಡಿಂಗ್ ನೀಡಲು ಈಗ ಸಮ್ಮತಿಸುತ್ತಿಲ್ಲ ಅದಕ್ಕಾಗಿ ಈ ಹೋರಾಟ ಎಂದಿದ್ದಾರೆ..
ಈ ಸಂದರ್ಭದಲ್ಲಿ ,ಉಪಾಧ್ಯಕ್ಷ ಕೆ.ನೂರ್ ಮುಹಮ್ಮದ್,ಕಾರ್ಯದರ್ಶಿ,ಎಂ.ಮಹಬೂಬ್ ಬಾಷಾ ಮತ್ತು 3ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಹಾಗು ಲಾರಿ ಮಾಲೀಕರ ಸಂಘದ ಸದಸ್ಯರಾದ ಟಿ.ಪ್ರವೀಣ್ ಕುಮಾರ್,ಎಂ.ನೀಲಕಂಠ ನಾಯುಡು,ಡಿ.ರಾಮ್ ಕುಮಾರ್, ಪೂಜಾದೇವಿ ಶ್ರೀನಿವಾಸ್,ಹಿರಿಯರಾದ ಟಿ.ನರಸಿಂಹಲು,ಪೆದ್ದನ್ನ. ವೆಂಕಟೇಶ್,ಎಂ. ಡಿ ಫಯಾಜ್ ಬಾಷಾ,ಸಿ.ಸಂತೋಷ್,ಕುಮಾರ್ ರಾಮ್ ನಾಯ್ಕ,ಲಕ್ಷ್ಮಿ ನಾರಾಯಣ,ಶ್ರೀಕಾಂತ್ ರೆಡ್ಡಿ. ಸಿದ್ದಾರೆಡ್ಡಿ ಚಲ್ಲಾ ರಮೇಶ್,ಲೋಕೇಶ್,ರವಿ,ಸುರೇಶ್,ಅಂಜನೆಯಲಲು ,ರಾಹುಲ್,ಗಿರಿಧರ್ ರೆಡ್ಡಿ,ಶ್ರೀನಿವಾಸ್ ಶೆಟ್ಟಿ,ಬಾಲರಾಜ್,ಸುರೇಂದ್ರ, ನೆಟ್ಟಪ್ಪ ,ಲೋಕನಾಥ್, ಈ ಕೆಆರ್ ಚಂದ್ರ ,ವಿ ಎಸ್ ಎಸ್ ಸುರೇಶ್ ,ಭೀಮಣ್ಣ, ತಿಪ್ಪಯ್ಯ,ಸಾಯಿನಾಥ್,ಹರೀಶ್,ಪವನ್ ಇನ್ನು ಹಲವು ಲಾರಿ ಮಾಲೀಕರು ಉಪಸ್ಥಿತರಿದ್ದರು.