ಬೆಳಗಾವಿ ಜಿಲ್ಲೆಯ 3 ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆಯಾಡಿದ ಲೋಕಾಯುಕ್ತರು

ಬೆಳಗಾವಿ ಜಿಲ್ಲೆಯ 3 ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆಯಾಡಿದ ಲೋಕಾಯುಕ್ತರು

ಬೆಳಗಾವಿ : ಬೆಳಗಾವಿ ಜಿಲ್ಲೆಯ ಎರಡು ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ್ದಾರೆ. 

     ಗ್ರಾಮ ಲೆಕ್ಕಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಡವಳೇಶ್ವರ ಎಂಬಾತನ ಬೋರಗಾಂವ ಗ್ರಾಮದ ಮನೆ ಹಾಗೂ ನಿಪ್ಪಾಣಿ ಬಾಡಿಗೆ ಮನೆ ಮೇಲೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.  ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿರೋ ಲೋಕಾಯುಕ್ತರು. ಮನೆಯಲ್ಲಿ ದಾಳಿ ಸಂದರ್ಭದಲ್ಲಿ ಒಂದು ಲಕ್ಷ ರೂ ಹಣ ಪತ್ತೆಯಾಗಿದೆ.

   ನಿಪ್ಪಾಣಿ ಪಟ್ಟಣದ ಬಾಡಿಗೆ ಮನೆ ಮೇಲೂ ದಾಳಿಯಾಗಿದೆ. ಇನ್ನೂ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

   ಈ‌ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವಿಠ್ಠಲ. 1 ಕೋಟಿ 10 ಲಕ್ಷ ಹಣ ಸಂಗ್ರಹಿಸುವ ವೇಳೆ ರಾಮದುರ್ಗ ಚೆಕ್‌ಪೋಸ್ಟ್ ಅಧಿಕಾರಿಗಳ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ‌ಗ್ರಾಮಲೆಕ್ಕಾಧಿಕಾರಿ ವಿಠ್ಠಲ ‌ಮನೆ, ಕಚೇರಿ ಮೇಲೂ ‌ದಾಳಿ ಮಾಡಲಾಗಿದೆ.

   ಅದೇ ರೀತಿಯಾಗಿ ಅಕ್ರಮ ಆಸ್ತಿ ಹಿನ್ನೆಲೆಯಲ್ಲಿ ಧಾರವಾಡದ ಕೆಐಎಡಿಬಿ ಅಧಿಕಾರಿ ಗೋವಿಂದಪ್ಪ ಭಜಂತ್ರಿ ಅವ ರಸಂಬಂಧಿಕರ ಸವದತ್ತಿ ತಾಲ್ಲೂಕಿನ ಉಗರಗೋಳದಲ್ಲಿರುವ ಗೋವಿಂದಪ್ಪ ಸಂಬಂಧಿಕರ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ಮಾಡಿದ್ದಾರೆ.

    ಅದೇ ರೀತಿಯಾಗಿ ಬೆಂಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿಯಾಗಿರುವ ಆಗಿರುವ ವೆಂಕಟೇಶ ಮಜುಂದಾರ್ ಅವರಿಗೆ ಸೇರಿದ ಮನೆ ಮೇಲೆ ದಾಳಿ ಮಾಡಲಾಗಿದ್ದು, ಈ ಹಿಂದೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಮಜುಂದಾರ್ ಅವರು ಬೆಳಗಾವಿಯ ಸಯಾದ್ರಿ ನಗರದಲ್ಲಿ ಮನೆ

ಖರೀದಿಸಿದ್ದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎನ್ನಲಾಗಿದೆ.

ಸುದ್ದಿ ಓದಿ