ಮುದ್ದೇಬಿಹಾಳ ಪುರಸಭೆಗೆ ಲೋಕಾಯುಕ್ತ ತಂಡ ದೀಢಿರ ದಾಳಿ: ದಾಖಲೆ ಪರೀಶಿಲನೆ
ಮುದ್ದೇಬಿಹಾಳ 29: ಪಟ್ಟಣದ ಪುರಸಭೆಗೆ ವಿಜಯಪುರ ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡ್ಡಿ ನೇತೃತ್ವದ ಲೋಕಾಯುಕ್ತ ತಂಡ ಬುಧವಾರ ದೀಢಿರ ದಾಳಿ ನಡೆಸಿ ಅಗತ್ಯ ದಾಖಲೆ ಪರೀಶಿಲನೆ ನಡೆಸಿದರು.
ಈ ವೇಳೆ ಪುರಸಭೆಯ ಎಲ್ಲ ಕೊಠಡಿಗಳಿಗೆ ತೆರಳಿ ಸ್ವಚ್ಛತೆ, ದಾಖಲೆಗಳನ್ನು ಪರೀಶೀಲನೆ ನಡೆಸುವುದರ ಜೊತೆಗೆ ಪುರಸಭೆ ಕಚೇರಿಯ ಮೇಲ್ಛಾವಣೆಯಲ್ಲಿ ಸಂಗ್ರಹಿಸಿಟ್ಟಿದ್ದ ಕೆಟ್ಟು ಹೋಗಿದ್ದ ಗಾಜಿನ ವಿದ್ಯುತ್ ಟ್ಯೂಬ್ ಲೈಟಗಳನ್ನು ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡ್ಡಿ ಪರೀಶೀಲನೆ ನಡೆಸಿ ಇಷ್ಟೊಂದು ಕೊಳಚೆಯಾಗಿಟ್ಟಿದ್ದು ಯಾಕೇ ಹೀಗೆಲ್ಲ ಎಲ್ಲೆಂದರಲ್ಲಿ ಕಸದಂತೆ ಎಸೆಯುವುದು ಸರಿಯಲ್ಲ. ರೋಗಮುಕ್ತ ಕಸಮುಕ್ತ ಕಚೇರಿಯನ್ನಾಗಿ ಮಾಡಬೇಕು. ಕಚೇರಿಯ ಸಿಬ್ಬಂದಿಗಳು ವ್ಯರ್ಥ ಸಮಯ ಹಾಳು ಮಾಡುವಲ್ಲದೇ ಹರಟೆ ಹೊಡೆಯದೆ ಸರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅವರ ಕೆಲಸ ತ್ವರಿತ ಗತಿಯಲ್ಲಿ ಮಗಿಸಿಕೊಡುವಂತೆ ನೋಡಿಕೊಳ್ಳಬೇಕು. ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಸಮರ್ಕವಾಗಿ ಪೂರೈಸಬೇಕು. ಅದರಂತೆ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಮುಖ್ಯ ಹಾಗೂ ಸಂಪರ್ಕ ರಸ್ತೆಗಳಲ್ಲಿ ಕಸ ಕಡ್ಡಿ ಬೀಳದಂತೆ ಸ್ವಚ್ಛತೆಯಿಂದ ಕಾಣುವಂತೆ ಮಾಡಬೇಕು. ಪಾರದರ್ಶಕ ಆಡಳಿತ ನೀಡುವಲ್ಲಿ ಶ್ರಮಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರಿಗೆ ಸೂಚಿಸಿದರು.
ಬಳಿಕ ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡಿ ಸುದ್ದಿಗಾರೊಂದಿಗೆ ಮಾತನಾಡಿ ಬೆಂಗಳೂರು ಮುಖ್ಯ ಲೋಕಾಯುಕ್ತರ ಆದೇಶ ಮೇರೆಗೆ ಪಟ್ಟಣದ ಪುರಸಭೆಗೆ ಬೇಟಿ ನೀಡಿ ಸಾರ್ವಜನಿಕರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ನೇರವಾಗಿ ಸಿಗುವಂತೆ ಮಾಡಲು ಮತ್ತು ಜನನ. ಮತ್ತು ಮರಣ ಪತ್ರ, ಉತಾರ, ವಾಣಿಜ್ಯ ತೆರಿಗೆ ಸೇರಿದಂತೆ ಅನೇಕ ಸೌಲಭ್ಯಗಳಲ್ಲಿ ಅಕ್ರಮ ನಡೆಯದಂತೆ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನಿಗದಿತ ಅವಧಿಯೊಳಗೆ ಸರಕಾರದ ಸೌಲಭ್ಯಗಳ ಒದಗಿಸುವಂತೆ ಜೊತೆಗೆ ಸಾರ್ವಜನಿಕರಿಂದ ಸರಕಾರಿ ಕೆಲಸ ಮಾಡಿಕೊಡಲು ಆಕ್ರಮ ನಡೆಸದಂತೆ ಅಧಿಕಾರಿಗಳಿಗೆ ಎಚ್ಚರಿಸಲಾಗಿದೆ.
ಇದೇ ರೀತಿ ಸಾರ್ವಜನಿಕರಿಂದ ಅಕ್ರಮ, ಲಂಚ ಕೇಳಿದ ಆರೋಪದ ದೂರುಗಳು ಕೇಳಿ ಬಂದರೆ ಲೋಕಾಯುಕ್ತ ಇಲಾಖೆಯು ಸುಮ್ಮನೆ ಬಿಡುವುದಿಲ್ಲ. ಸಧ್ಯ ಭೇಟಿ ಪರೀಶೀಲನೆ ವೇಳೆ ಸಾರ್ವಜನಿಕರಿಂದ ಬಲವಾದ ಅಕ್ರಮ ಹಣ ಆಮೀಶದ ಬಗ್ಗೆ ಆರೋಪಗಳು ಕೇಳಿಬಂದಿಲ್ಲ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವಂತಾಗಲು ಇದೊಂದು ಸಾಂಕೇತಿಕ ಭೇಟಿಯಾಗಿದೆ. ಸಧ್ಯ ಪರೀಶೀಲನೆ ವೇಳೆ ನಮ್ಮ ಗಮನಕ್ಕೆ ಬಂದಿರುವ ಸ್ವಚ್ಚತೆಯ ಹಾಗೂ ದಾಖಲೆ ನೀಡುವುದರ ಬಗ್ಗೆಯಾಗಲಿ ಸಂಪೂರ್ಣ ವಿವಿರವನ್ನು ಮೇಲಾಧಿಕಾರಿಗಳಿಗೆ ರವಾನಿಸಲಾಗುವುದು ಈ ವೇಳೆ ತಪ್ಪಿತಸ್ಥರಾಗಿದ್ದಾರೆ ಎಂಬುದು ಗೊತ್ತಾದರೆ ಅಂತಹ ಅಧಿಕಾರಿಗಳ ಮೇಳೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯಪುರ ಲೋಕಾಯುಕ್ತ ಇನ್ಸ್ಪೆಕ್ಟರ್ ಆನಂದ ಟಕ್ಕನ್ನವರ, ಆನಂದ ಡೋಣಿ ಸೇರಿದಂತೆ ಇತರೇ ಸಿಬ್ಬಂದಿಗಳು ಪುರಸಭೆ ಅಧಿಕಾರಿಗಳು ಇದ್ದರು.