ತಾಲೂಕಿನ ವಿವಿಧ ಇಲಾಖೆಗಳಿಗೆ ಭೇಟಿ ನೀಡಿದ ಲೋಕಾಯುಕ್ತ ಇಲಾಖೆ ಅಧಿಕಾರಿಗಳು
ಬ್ಯಾಡಗಿ 26: ಪಟ್ಟಣದ ಸರ್ಕಾರಿ ಆಸ್ಪತ್ರೆ. ಪುರಸಭೆ ಕಾರ್ಯಾಲಯ ತಹಶೀಲ್ದಾರ್ ಕಚೇರಿ ಹಾಗೂ ವಸತಿ ನಿಲಯಗಳು ಸೇರಿದಂತೆ ಹಲವು ಇಲಾಖೆಗಳಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ನಾಲ್ಕು ತ ಡವಾಗಿ ಇಲಾಖೆಗಳನ್ನು ಪರೀಶೀಲಿಸಿದರು. ಈ ವೇಳೆ ಇಲಾಖೆಗಳಲ್ಲಿ ದಾಖಲೆಗಳ ಪರೀಶೀಲನೆಯನ್ನು ನಡೆಸಿದರು ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಓಷಧ ಉಗ್ರಾಣ ಮತ್ತು ಅವಧಿ ಮುಗಿದ ಓಷಧಿಗಳ ಬಗ್ಗೆ ಮಾಹಿತಿ ಪಡೆದರು ಮತ್ತು ಈಗಾಗಲೇ ಎಲ್ಲ ಇಲಾಖೆಗಳು ಗಣತಿಕೃತ ಕಂಪ್ಯೂಟರ್ ರೈಸಡ ಕೆಲಸ ನಡೆಯುತ್ತಿದ್ದು ಇಲ್ಲಿ ಇನ್ನೂ ಹಳೆಯ ಬುಕ್ಕಿನಲ್ಲಿ ಬರೆಯುವ ಪದ್ಧತಿ ಇದೆ ಮತ್ತು ಹೊರರೋಗಿಗಳ ನೀಡುವ ಓಷಧಿಗಳು ಬಗ್ಗೆ ಮಾಹಿತಿ ಪಡೆದರು ಮತ್ತು ಓಷಧಿ ನೀಡಿದ ರೋಗಿಗಳಿಗೆ ಇಂಡೆಂಟ್ ನೀಡುವಂತೆ ಸೂಚನೆ ನೀಡಿದರು ಮತ್ತು ಅಂಬುಲೆನ್ಸ್ ಸೇವೆ ಬಗ್ಗೆ ಮಾಹಿತಿ ಮತ್ತು ಆಸ್ಪತ್ರೆಯ ಎಲ್ಲ ವಿಭಾಗಗಳ ಪರೀಶೀಲಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಜನನ ಮರಣ ಜಾತಿ ಆದಾಯ ಮುಜರಾಯಿ ಆಹಾರ ಸೇರಿದಂತೆ ಹಲವು ದಾಖಲೆಗಳನ್ನು ಪರೀಶೀಲಿಸಿದರು ಮತ್ತು ಪುರಸಭೆಯಲ್ಲಿ ದಾಖಲೆಗಳನ್ನು ಪರೀಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಬಾಲಚಂದ್ರ. ವಿಜಯ ಕೃಷ್ಣ ಹಾಗೂ ಲೋಕೇಶ್ ಬಸವರಾಜ್ ಹಲವು ಅಧಿಕಾರಿಗಳು. ಸೇರಿದಂತೆ ಇಲಾಖೆಯ ಉಪಸ್ಥಿತರಿದ್ದರು.