ಭ್ರಷ್ಟ ಅಧಿಕಾರಿಗಳ ವಿರುದ್ದ ಸಮರ ಸಾರಿದ ಲೋಕಾಯುಕ್ತ ಅಧಿಕಾರಿಗಳು : ಬೆಳಗಾವಿಯಲ್ಲಿ ಬೆಳಂಬೆಳಿಗ್ಗೆ ಹೆಸ್ಕಾ ಇಂಜಿನಿಯರ್ ಸೇರಿ ವಿವಿಧೆಡೆ ದಾಳಿ
ಬೆಳಗಾವಿ : ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬುಧವಾರ ಬೆಳಂಬೆಳಿಗ್ಗೆ ಸಮರ ಸಾರಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಅವರ ಮನೆ ಮೇಲೆ ಬುಧವಾರ ಬೆಳಗಿನ ಜಾವ ದಾಳಿ ಮಾಡಲಾಗಿದೆ.
ಸದ್ಯ ಶೇಖರ್ ಬಹುರೂಪಿ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೇಖರ್ ಬಹುರೂಪಿ ಅವರು 2019ರಲ್ಲಿ ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಅಮಾನತುಗೊಂಡಿದ್ದರು.
ಅಧಿಕಾರಿಗಳ ತಂಡವು ವಿವಿಧೆಡೆ ದಾಳಿ ನಡೆಸಿ ಪರಶೀಲನೆ ನಡೆಸುತ್ತಿದ್ದು, ಆಕ್ರಮ ಆಸ್ತಿ ಹಣವನ್ನು ಪತ್ತೆ
ಮಾಡುವ ಕಾರ್ಯಾಚರಣೆಯಲ್ಲಿ ತೋಡಗಿದ್ದಾರೆ.