ಸಂಕೇಶ್ವರ ಪುರಸಭೆ ಮೇಲೆ ಲೋಕಾಯುಕ್ತರ ದಾಳಿ : ಕಡತಗಳ, ಕಾಗದ ಪತ್ರಗಳ ಪರಿಶೀಲನೆ
ಸಂಕೇಶ್ವರ : ಸ್ಥಳೀಯ ಪುರಸಭೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಳಿಗ್ಗೆಯಿಂದ ಕಚೇರಿಯ ಕಡತಗಳು ಮತ್ತು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸಂಕೇಶ್ವರ ಪುರಸಭೆಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಪುರಸಭೆಯ ಕೆಲವು ವಿಭಾಗಗಳಲ್ಲಿ ಕಡತಗಳನ್ನು ಹಾಗೂ ಕಾಗದಪತ್ರಗಳನ್ನು ಪರಿಶೀಲನೆ ನಡೆಸಿದ್ದು ಬೆಳಿಗ್ಗೆ ಯಿಂದ ಈ ಕಾರ್ಯ ದಲ್ಲಿ ಲೋಕಾಯುಕ್ತ ಅಧಿಕಾರಿಗಳು ತೊಡಗಿದ್ದಾರೆ ಎನ್ನಲಾಗಿದೆ.