ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ದೀಡಿರ ಲೋಕಾಯುಕ್ತರ ದಾಳಿ : ಕಾಗದಪತ್ರಗಳ ಪರಿಶೀಲನೆ

ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ದೀಡಿರ ಲೋಕಾಯುಕ್ತರ ದಾಳಿ : ಕಾಗದಪತ್ರಗಳ ಪರಿಶೀಲನೆ

  ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ದಿಢೀರ ಲೋಕಾಯುಕ್ತರ ದಾಳಿ ನಡೆದಿದ್ದು, ಲೋಕ ಅಧಿಕಾರಿಗಳು ಕಚೇರಿಯ ಕಾಗದಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
     ಮಂಗಳವಾರ ಬೆಳಿಗ್ಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ಅಧಿಕಾರಿಗಳ ದೀಡಿರ ಎಂಟ್ರಿ ಕೊಟ್ಟಿದ್ದು, ಸಾರ್ವಜನಿಕರ ದೂರು, ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಮಹಾನಗರ ಪಾಲಿಕೆಯ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿ ವಿಳಂಬ ಆಗ್ತಿರುವ ಬಗ್ಗೆ ದೂರು ಬಂದಿವೆ.
    ಕಟ್ಟಡ ಪರವಾನಿಗೆ ವಿಭಾಗದಲ್ಲಿ ಎಸ್ಪಿ ಪರಿಶೀಲನೆ. ಕಟ್ಟಡ ಪರವಾನಗಿ ವಿಭಾಗದ ಮುಖ್ಯಸ್ಥ ವಾಹೀದ್ ಅತ್ತರ ತೀವ್ರ ವಿಚಾರಣೆ ನಡೆಸಿದ್ದಾರೆ. ಕಟ್ಟಡ ಪರವಾಗಿ ವಿಭಾಗಕ್ಕೆ ಪಾಲಿಕೆ ಆಯುಕ್ತ ಲೋಕೇಶ್ ಕುಮಾರನನ್ನ ಕರೆಸಿದ ಎಸ್ಪಿ ಚರ್ಚೆ ನಡೆಸಿದರು. ಎಸ್ಪಿ ಹಣಮಂತ ರಾಯ್‌ಗೆ 10ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಆರೋಗ್ಯ ವಿಭಾಗದಲ್ಲಿ ವ್ಯವಸ್ಥಿತ ದಾಖಲೆ ಇಲ್ಲದ, ದರಪಟ್ಟಿ ಇಲ್ಲದ, ಜನರಿಗೆ ಸಮಸ್ಯೆ ಆಗುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ರೇಗಿದ ಲೋಕಾಯುಕ್ತರು, ಇದ್ದುಕೊಳ್ಳುವ ಸಂಗತಿಗಳನ್ನು ತಿಳಿಸಿ, ಕೆಲ ದಾಖಲೆಗಳನ್ನು ಸಂಗ್ರಹಿಸಿದರು.
      ನಗರ ಯೋಜನೆ ವಿಭಾಗಕ್ಕೆ ಸ್ವತಃ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳೇ ಬೇಟಿ ನೀಡಿ, ಪಾಲಿಕೆಯ ಆಯುಕ್ತರ ಎದುರಿಗೆ ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆ, ಪಾಲಿಕೆಯಲ್ಲಿ ಸುಮಾರು ಮೂರು ತಾಸುಗಳಿಂದ ಪರಿಶೀಲನೆ ನಡೆಯುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಪಾಲಿಕೆ ಅಧಿಕಾರಿಗಳ ವಿಚಾರಣೆ ಇನ್ನೂ ಮುಂದುವರೆದಿದೆ.
ಕಳೆದೆರಡು ತಿಂಗಳಿನಿAದ ಪಾಲಿಕೆಯ ವಿವಿಧ ವಿಭಾಗಗಳಲ್ಲಿಯ ಕಡತಗಳು ಬಾಕಿ ಇರುವದು, ಅಧಿಕಾರಿಗಳು ಅನುಮೋದನೆಗೆ ಹಿಂದೇಟು ಹಾಕುತ್ತಿರುವುದು, ಸಾರ್ವಜನಿಕರ ಕೆಲಸದಲ್ಲಿ ವಿಳಂಬ ಆಗುತ್ತಿರುವುದು ಈ ದಾಳಿಗೆ ಕಾರಣ ಇರಬಹುದು ಎಂಬ ಅನುಮಾನವಿದೆ..

ಸುದ್ದಿ ಓದಿ