ಕಾಂಗ್ರೆಸ್ ನ ಬೆಳಗಾವಿಯ 3, ರಾಜ್ಯದ 50 ನಾಯಕರ ಮನೆ ಮೇಲೆ ಲೋಕಾಯುಕ್ತ, ಐಟಿ ದಾಳಿಗೆ ಬಿಜೆಪಿ ಹುನ್ನಾರ ; ಶಾಸಕಿ ಹೆಬ್ಬಾಳಕರ ಆರೋಪ
ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವದನ್ನು ಕಂಡು ಹತಾಶರಾಗಿ ನಾನೂ ಸೇರಿದಂತೆ ಬೆಳಗಾವಿಯ ಮೂವರು ಹಾಗೂ ರಾಜ್ಯದ ಸುಮಾರು 50 ಅಭ್ಯರ್ಥಿಗಳು ಮತ್ತು ಅವರ ಸಂಬಂಧಿಗಳ ಮೇಲೆ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ದಾಳಿಗಳನ್ನು ನಡೆಸಿ ಧೃತಿಗೆಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದ್ದಾರೆ.
ನಗರದಲ್ಲಿ ರವಿವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಕಾಂಗ್ರೆಸ್ ಪರ ಅಲೆ ಇರುವುದು ಜನರ ಭಾವನೆಯಿಂದ ಗೊತ್ತಾಗಿದೆ. ರಾಜ್ಯದ ಜನಸಾಮಾನ್ಯರು, ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನಸ್ಸು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ವಾತಾವರಣವಿದೆ. ಮುಖ್ಯವಾಗಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ಜನ ಕಾಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಿಜೆಪಿಯವರು ಇಂಥ ಮಾರ್ಗ ಹಿಡಿದಿರುವುದು ಗಮನಕ್ಕೆ ಬಂದಿದೆ" ಎಂದರು.
ಚುನಾವಣೆ ಸಮೀಪಿಸಿರುವ ಈ ಸಂದರ್ಭದಲ್ಲಿ ಒಂದೊಂದು ನಿಮಿಷವೂ ಬಹು ಮುಖ್ಯವಾಗಿರುತ್ತದೆ. ನಾವು ಯಾವುದೇ ತಪ್ಪುಗಳನ್ನು ಮಾಡಿರದಿದ್ದರೂ ಇಂಥ ಸಂದರ್ಭದಲ್ಲಿ ನಮ್ಮ ಸಮಯ ವ್ಯರ್ಥಗೊಳಿಸಲು ಬಿಜೆಪಿಯವರು ಈ ತಂತ್ರ ಮಾಡುತ್ತಿದ್ದಾರೆ. ಚುನಾವಣೆಗಳು ಎದುರಾದ ಸಂದರ್ಭದಲ್ಲಿ ಪ್ರತಿಪಕ್ಷದವರನ್ನು ಹೆದರಿಸಿ ಹಣಿಯಲು ಬಿಜೆಪಿ ಹುಡುಕಿಕೊಂಡಿರುವ ಈ ವಾಮಮಾರ್ಗ ಬಿಜೆಪಿಯವರಿಗೇ ಮುಳುವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಚುನಾವಣೆ ಪ್ರಚಾರ ಅಂತಿಮ ಹಂತದಲ್ಲಿರುವ ಈ ಸಮಯದಲ್ಲಿ ಬಿಜೆಪಿಯವರು ಇಂಥ ವಾಮಮಾರ್ಗ ಬಿಡಬೇಕು. ಬದಲಾಗಿ ಸತ್ಯ, ಧರ್ಮ, ನ್ಯಾಯದ ಮಾರ್ಗದಲ್ಲಿ ಚುನಾವಣೆ ಎದುರಿಸಬೇಕು ಎಂದು ಅವರು ಕೋರಿದರು.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಗೆಲುವಿಗೂ ಇದಕ್ಕೂ ಸಂಬಂಧವಿಲ್ಲ. ಇಲ್ಲಿ ಗೆಲ್ಲುವ ಕುದುರೆಯನ್ನು ಕಟ್ಟಿ ಹಾಕುವುದಕ್ಕಿಂತ ಕೊನೆಯ ಹಂತದಲ್ಲಿ ಜನರ ಭಾವನೆಗಳನ್ನು ಕಲಕುವ ಉದ್ದೇಶ ಹೊಂದಲಾಗಿದೆ. ಒಂದೊಮ್ಮೆ ಅವರು ಇಂಥ ತಂತ್ರ ಬಳಸುವುದೇ ಆದರೆ ನಾವೇನೂ ಮಾಡಲಿಕ್ಕೂ ಸಾಧ್ಯವಿಲ್ಲ. ಆದರೆ ಯಾವುದಕ್ಕೂ ನಿರ್ಧಾರ ತಳೆಯುವವರು ಮತದಾರರು. ನಮ್ಮ ಸಮಯ ವ್ಯರ್ಥವಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ ಎಂದರು.
ಚುನಾವಣೆ ಸಮೀಪಿಸಿರುವ ಈ ಸಂದರ್ಭದಲ್ಲಿ ಒಂದೊಂದು ನಿಮಿಷವೂ ಬಹು ಮುಖ್ಯವಾಗಿರುತ್ತದೆ. ನಾವು ಯಾವುದೇ ತಪ್ಪುಗಳನ್ನು ಮಾಡಿರದಿದ್ದರೂ ಇಂಥ ಸಂದರ್ಭದಲ್ಲಿ ನಮ್ಮ ಸಮಯ ವ್ಯರ್ಥಗೊಳಿಸಲು ಬಿಜೆಪಿಯವರು ಈ ತಂತ್ರ ಮಾಡುತ್ತಿದ್ದಾರೆ. ಚುನಾವಣೆಗಳು ಎದುರಾದ ಸಂದರ್ಭದಲ್ಲಿ ಪ್ರತಿಪಕ್ಷದವರನ್ನು ಹೆದರಿಸಿ ಹಣಿಯಲು ಬಿಜೆಪಿ ಹುಡುಕಿಕೊಂಡಿರುವ ಈ ವಾಮಮಾರ್ಗ ಬಿಜೆಪಿಯವರಿಗೇ ಮುಳುವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಚುನಾವಣೆ ಪ್ರಚಾರ ಅಂತಿಮ ಹಂತದಲ್ಲಿರುವ ಈ ಸಮಯದಲ್ಲಿ ಬಿಜೆಪಿಯವರು ಇಂಥ ವಾಮಮಾರ್ಗ ಬಿಡಬೇಕು. ಬದಲಾಗಿ ಸತ್ಯ, ಧರ್ಮ, ನ್ಯಾಯದ ಮಾರ್ಗದಲ್ಲಿ ಚುನಾವಣೆ ಎದುರಿಸಬೇಕು ಎಂದು ಅವರು ಕೋರಿದರು.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಕುರಿತು ಇನ್ನೂ ನಿರ್ಧರಿಸಿಲ್ಲ. ಎಲ್ಲ ಚುನಾಯಿತ ಶಾಸಕರು ಸೇರಿ ಈ ಕುರಿತು ನಿರ್ಧಾರ ತಳೆದು ಹೈಕಮಾಂಡ್ ಗೆ ಕಳುಹಿಸುತ್ತಾರೆ. ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದರು. ಈ ವೇಳೆ ಚನ್ನರಾಜ್ ಹಟ್ಟಿಹೊಳಿ ಉಪಸ್ಥಿತರಿದ್ದರು.