ಬಳ್ಳಾರಿ

ಆಶ್ರಯ ಮನೆ ನೀಡಿದರೂ ರಸ್ತೆಯ ಪಕ್ಕದಲ್ಲಿ ವಾಸ

ಆಶ್ರಯ ಮನೆ ನೀಡಿದರೂ ರಸ್ತೆಯ ಪಕ್ಕದಲ್ಲಿ ವಾಸ

ಬಳ್ಳಾರಿ 27: ನಗರದಲ್ಲಿ ಸಂಗಮ್ ಸರ್ಕಲ್‌ನಿಂದ ಗೋನಾಳು ಬೈಪಾಸ್‌ವರೆಗೆ  ಎಲ್ಲರೂ ಸರಕಾರಿ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಸರಕಾರ ಅವರಿಗೆ ಆಶ್ರಯ ಯೋಜನೆಯ ಅಡಿಯಲ್ಲಿ ಸ್ಥಳವನ್ನು ನೀಡಿದರೂ ಕೂಡ ಯಾರೂ ಖಾಲಿ ಮಾಡಿಲ್ಲ, ಸರ್ಕಾರಿ ರಾಜ್ಯ ಹೆದ್ದಾರಿ ರಸ್ತೆಯ ಮೇಲೆಯೇ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.  

ಸದರಿ ರಾಜ್ಯ ಹೆದ್ದಾರಿ ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡು ವಾಸಿಸುತ್ತಿರುವಂತಹ ಮನೆಗಳನ್ನು ತೆರವುಗೊಳಿಸಲು ಹಲವಾರು ವರ್ಷಗಳಿಂದ ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಪಕ್ಷದ ಆಡಳಿತ ನಾಯಕರು ಮುಖ್ಯವಾಗಿ ಶಾಸಕರು ಯಾರೂ ಕೂಡ ಇದು ಸರ್ಕಾರಿ ಸ್ಥಳ ರಾಜ್ಯ ಹೆದ್ದಾರಿ ರಸ್ತೆ ಇದನ್ನು ಕಡ್ಡಾಯವಾಗಿ ಸ್ಥಳವನ್ನು ಖಾಲಿ ಮಾಡಬೇಕೆಂದು ಯಾವ ರಾಜಕೀಯ ನಾಯಕರಾಗಲೀ ಅಥವಾ ನಿಷ್ಟಾವಂತ ಅಧಿಕಾರಿಗಳಾಗಲೀ ಮುಂದೆ ಬಂದು ರಸ್ತೆಯ ಎರಡು ಬದಿಗಳಲ್ಲಿನ  ಮನೆಗಳನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣ ಮಾಡಿರುವುದಿಲ್ಲ. 

ಎಲ್ಲಾ ಪಕ್ಷದ ನಾಯಕರ ಒತ್ತಡದಿಂದ ಉನ್ನತಾಧಿಕಾರಿಗಳು ಕೆಲಸ ಮಾಡಿಲ್ಲೇನೋ ಗೊತ್ತಿಲ್ಲ, ಈಗಾಗಲೇ ಹಲವಾರು ನಗರಗಳು ಅಭಿವೃದ್ಧಿ ಆಗುತ್ತ್ತಿವೆ, ಮುಖ್ಯವಾಗಿ ಬಳ್ಳಾರಿಯಲ್ಲಿ ರಾಜ್ಯ ಹೆದ್ದಾರಿ-132 ರಸ್ತೆ ಸಂಪೂರ್ಣವಾಗಿ ರಾಘವಕಲಾ ಮಂದಿರದವರೆಗೆ ಅಭಿವೃದ್ಧಿ ಆಗದೇ ಗಡಿಗಿ ಚನ್ನಪ್ಪ ವೃತ್ತದಿಂದ  ಡಾಽಽ ರಾಜ್‌ಕುಮಾರ್‌ರಸ್ತೆ ಕೈಗಾರಿಕಾ ಪ್ರದೇಶದವರೆಗೆ ಅಗಲೀಕರಣ ಆಗುತ್ತಿದೆ. ಇನ್ನು ಉಳಿದಂತಹ ರಸ್ತೆ (ಎನ್‌.ಹೆಚ್‌-67 ಅನಂತಪುರ ರಸ್ತೆ) ರಾಜ್ಯ ಹೆದ್ದಾರಿ-128  ಈ ರಸ್ತೆಯಲ್ಲಿ ಒಂದು ಕಡೆ ಸುಮಾರು 30 ಅಡಿ, ಇನ್ನೊಂದು ಕಡೆ ಸುಮಾರು 20 ಅಡಿ ರಷ್ಟು ಸರಕಾರಿ ಜಾಗವನ್ನು ಹಲವಾರು ವರ್ಷಗಳಿಂದ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ.  

ನಿಷ್ಠಾವಂತ ಪ್ರ್ರಾಮಾಣಿಕ ಅಧಿಕಾರಿಗಳಾದ ತಮ್ಮಲ್ಲಿ ವಿನಂತಿಸುವುದೇನೆಂದರೆ, ಅಧಿಕಾರದಲ್ಲಿ ಯಾರೂ ಶಾಶ್ವತ ಅಲ್ಲಾ ಇದ್ದ ಸಮಯದಲ್ಲಿ ಸ್ವಲ್ಪ ಆದರೂ ಜವಾಬ್ದಾರಿಯಿಂದ ನಿಷ್ಠಾವಂತರಾಗಿ ಉಕ್ಕಿನ ನಗರ ಅಭಿವೃದ್ಧಿಗೆ ಹಾಗೂ ನಗರ ಸುಂದರೀಕರಣಕ್ಕೆ ಕೆಲಸ ನಿರ್ವಹಿಸುವಂತೆ ಮನವಿ ಮಾಡಿಕೊಳ್ಳುತ್ತಾ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇವೆ. 


ಸುದ್ದಿ ಓದಿ