ಪತ್ರಕರ್ತರಿಗೆ ಸಾಹಿತ್ಯ ಅರಿವು ಅತ್ಯಗತ್ಯ: ರವೀಂದ್ರ
ಹಗರಿಬೊಮ್ಮನಹಳ್ಳಿ 02: ಕಳೆದ ಹಲವು ವರ್ಷಗಳ ಹಿಂದೆ ಸಾಹಿತಿಗಳು ಪತ್ರಕರ್ತರಾಗಿದ್ದು ಅವರಿಗೆ ಭಾಷಾ ಕೌಶಲ್ಯದ ಅರಿವಿತ್ತು ಇಂದು ಅದು ಮರೆಯಾಗಿದೆ ಪತ್ರಕರ್ತರಿಗೆ ಮೊದಲು ಸಾಹಿತ್ಯದ ಇತಿಹಾಸದ ಅರಿವಿನ ಅಗತ್ಯತೆ ಇದೆ ಎಂದು ಸಂಪಾದಕ ರವೀಂದ್ರ ಜಿ ಭಟ್ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಶನಿವಾರ ಬಳ್ಳಾರಿ ಸುನಾಮಿ ಪತ್ರಿಕೆಯು ಶ್ರೀ ಮರುತಿ ಸ್ಪೋಟ್ಸ್ ಕ್ಲಬ್ ಸಹಕಾರದೊಂದಿಗೆ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಉತ್ತಮ ಭಾಷಾ ಕೌಶಲ್ಯದ ಶಿಕ್ಷಣ ದೊರೆಯುತ್ತಿಲ್ಲ, ವಿಶ್ವ ವಿದ್ಯಾಲಯಗಳಲ್ಲಿ ಭಾಷಾ ವಿಭಾಗವಿಲ್ಲ, ಪತ್ರಕರ್ತರು ಯಾವುದೇ ಒತ್ತಡಕ್ಕೆ ಮಣಿಯದೇ ಇದ್ದ ವಿಷಯ ಇದ್ದ ಹಾಗೆ ಬರೆಯಬೇಕು, ಒದುಗರಿಗೆ ಆಘಾತವಾಗವಂತೆ ಸುದ್ದಿಗಳು ಬಿತ್ತರಿಸಬಾರದು ಎಕೆಂದರೆ ಒದುಗರು ಬುದ್ದಿವಂತರಾಗಿದ್ದಾರೆ ಅವರು ದಡ್ಡರಲ್ಲ, ಎಲ್ಲ ತಿಳಿದವ ಎಂಬ ಅಹಃ ಪತ್ರಕರ್ತನ ಮೈಗೂಡಬಾರದು, ಕಳೆದ 25ವರ್ಷಗಳಿಂದ ಒದುಗ ನೂಡುಗನಾಗಿದ್ದಾನೆ ಅದು ಶಾಶ್ವತವಾದುದ್ದಲ್ಲ ಶಾಶ್ವತವಾಗಿಟ್ಟುಕೊಳ್ಳಲು ಒದಲೇ ಬೇಕಿದೆ, ಪತ್ರಿಕೋದ್ಯಮದ ಫಲವತ್ತಾದ ಭೂಮಿಯನ್ನು ಬರಿದು ಮಾಡಲಾಗಿದೆ ಇಂದಿನ ಪೀಳಿಗೆ ಅದನ್ನು ಕಾಪಾಡುವಲ್ಲಿ ಮುಂದಾಗಬೇಕಿದೆ, ಪತ್ರಕರ್ತರಿಗೆ ಸಾಹಿತ್ಯ ಅವಶ್ಯಕತೆ ಇಲ್ಲ ಎಂಬ ಮನೋಭಾವನೆಯಿಂದ ಹೊರಬರುವಂತೆ ಕಿವಿ ಮಾತು ಹೇಳಿದರು. ಈ ಕ್ಷೇತ್ರದಲ್ಲಿ ಟೀಕೆಗಗಳು ಸಹಜ ಅಂತಹ ಟೀಕೆಗಳಿಗೆ ಕಿವಿಗೊಡದೇ ತಮ್ಮ ಕಾರ್ಯ ಸಮಪರ್ಕವಾಗಿ ಮಾಡುವಂತೆ ತಿಳಿಸಿದರು.
ಖ್ಯಾತ ಪರಿಸರ ತಜ್ಞಾ ಹೆಚ್ ಆರ್ ಸ್ವಾಮಿ ಮಾತನಾಡಿ ಪತ್ರಕರ್ತರು ನಿಜ ಸುದ್ದಿ ಬಿತ್ತರಿಸಬೇಕು, ಪರವಿರೋಧ ವ್ಯಕ್ತವಾಗದಂತೆ ಯಾವುದೇ ಒತ್ತಡಕ್ಕೆ ಮಣಿಯದೇ ಎಚ್ಚರಿಕೆಯಿಂದ ಸುದ್ದಿ ಬಿತ್ತರಿಸುವುದರ ಜೊತೆ ಸುದ್ದಿಗಳ ಮೂಲ ಹುಡುಕುವಲ್ಲಿ ಬೇಕಾದ ಚಾಣಾಕ್ಷತನ ಮೈಗೂಡಿಸಿಕೊಳ್ಳಬೇಕು, ಕಣ್ಣರಳಿಸಿ ನೋಡಿದರೆ ಸುದ್ದಿ ಬಿತ್ತರಿಸಿ ಒದುಗರ ಮುಂದೆ ಇಡುವಂತೆ ಕೆಲಸ ಮಾಡಬೇಕು ಪತ್ರಕರ್ತರು ಒದುಗರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ರೂಪಿಸಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿದೆ ಎಂದರು.
ಸಾಹಿತಿ ಕೇಶವರೆಡ್ಡಿ ಹಂದ್ರಾಳ ಮಾತನಾಡಿ ಇಂದಿನ ದಿನಮಾನಗಳಲ್ಲಿ ಪತ್ರಿಕೆಗಳನ್ನು ಚಾನಲ್ಗಳಿಗೆ ಹೋಲಿಸಿದರೆ ಪತ್ರಿಕೆಗಳು ಇಂದಿಗೂ ತಮ್ಮ ತನವನ್ನು ಉಳಿಸಿಕೊಂಡು ಬಂದಿವೆ, ಒಂದೇ ವಿಷಯವನ್ನು ತಿರುಚು ಮುರುಚಾಗಿ ಹತ್ತಾರಿ ರೀತಿಯಲ್ಲಿ ನೂಡುಗನ ಮುಮದೆ ಇಟ್ಟು ತಲೆ ಕೆಡಿಸುವ ಕೆಲಸ ಪತ್ರಿಕೆಗಳು ಮಾಡುತ್ತಿಲ್ಲ, ನೈಜ ಸುದ್ದಿಗಳನ್ನು ಒದುಗರಿಗೆ ನೀಡುತ್ತಿವೆ ಎಂದರು.
ಪ್ರಾಸ್ತಾವಿಕವಾಗಿ ಸಂಪಾದಕ ಹುಳ್ಳಿ ಪ್ರಕಾಶ್ ಮಾತನಾಡಿದರು. ಮರುತಿ ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ಶಿವಶಂಕರ ಗೌಡ ಸ್ವಾಗತಿಸಿದರು, ನಂದಿನಿ ನಿರೂಪಿಸಿದರು. ಈ ಸಂಧರ್ಭದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಜೆ.ಎಂ.ಅನೀಲ್ಕುಮಾರ್, ಕಾಂಗ್ರೆಸ್ ಮುಖಂಡ ಕುರಿ ಶಿವಮೂರ್ತಿ, ಬಳ್ಳಾರಿ ಪತ್ರಿಕೆ ಬಳಗ, ಮಾರುತಿ ಸ್ಪೋಟ್ಸ್ ಕ್ಲಬ್ನ ಸದಸ್ಯರು ಇದ್ದರು. ಅಖಂಡ ಬಳ್ಳಾರಿ ಜಿಲ್ಲೆಯ ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು.