ಸಂತ್ರಸ್ತರ ಸಮಸ್ಯೆ ಆಲಿಸಿದ: ರೇಖಾ ಪುಂಜಪ್ಪಗೋಳ

ಸಂತ್ರಸ್ತರ ಸಮಸ್ಯೆ ಆಲಿಸಿದ: ರೇಖಾ ಪುಂಜಪ್ಪಗೋಳ
ಪ್ರವಾಹ ಸಂತ್ರಸ್ತ ಮಹಿಳೆಯರು ಸಮಸ್ಯೆ ಆಲಿಸಿದ ರೇಖಾ ಪುಂಜಪ್ಪಗೋಳ

ಸಂತ್ರಸ್ತರ ಸಮಸ್ಯೆ ಆಲಿಸಿದ: ರೇಖಾ ಪುಂಜಪ್ಪಗೋಳ 


ಕಾಗವಾಡ,06:  ತಾಲೂಕಿನ ನದಿ ತೀರದ ಗ್ರಾಮಗಳಿಗೆ ಕಾಗವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಭೇಟ್ಟಿ ನೀಡಿ, ಪ್ರವಾಹ ಸಂತ್ರಸ್ತ ಮಹಿಳೆಯರು ಸಮಸ್ಯೆ ಆಲಿಸಿ, ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. 


ಅವರು ಇತ್ತೀಚೆಗೆ ತಾಲೂಕಿನ ಶಹಾಪೂರ, ಜೂಗುಳ, ಕಾತ್ರಳ, ಬಣಜವಾಡ, ಕೃಷ್ಣಾ ಕಿತ್ತೂರು ಗ್ರಾಮಗಳ ಕಾಳಜಿ ಕೇಂದ್ರಗಳಿಗೆ ಭೇಟ್ಟಿ ನೀಡಿ, ಅಲ್ಲಿನ ಸಂತ್ರಸ್ತ ಮಹಳೆಯರ ಸಮಸ್ಯೆ ಆಲಿಸಿ, ಕೆಲವು ಮನೆಗಳು ಮಳೆಯಿಂದ ಬಿದ್ದಿರುವುದನ್ನು ಪರೀಶೀಲನೆ ನಡೆಸಿದರು. ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಶಾಸಕ ರಾಜು ಕಾಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತಂದು, ನಿಮ್ಮ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗುವುದು. ನಿಮ್ಮ ಜೊತೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಯಾವತ್ತೂ ನೇರವು ನೀಡಲು ಸದಾ ಸಿದ್ದವಾಗಿದೆ ಎಂದು ಧೈರ್ಯ ಹೇಳಿದರು. 


ಈ ವೇಳೆ ಜೂಗುಳ ಗ್ರಾಮ ಪಂಚಾಯತ ಸದಸ್ಯೆ ಬಿಂದು ಅಧೋಕೆ, ಮಂಗಲ ಮಾಲಗಾಂವೆ, ವಿಮಲಾ ಶಿಂಧೆ, ಅಶ್ವಿನಿ ಕರೋಲಿ, ಶಿವಕ್ಕಾ ಸವವಿ, ಶೋಭಾ ಕೋಳಿ, ಶೋಭಾ ಕಾಂಬಳೆ, ಸುಶ್ಮಿತಾ ಕಾಂಬಳೆ, ವೀಣಾ ಕಾಂಬಳೆ ಸೇರಿದಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ