ಸಮವಸ್ತ್ರದಲ್ಲಿ ಎಣ್ಣೆ ಪಾರ್ಟಿ, 112 ಪೊಲೀಸ್ ವಾಹನ ದುರ್ಬಳಕೆ : ಇಬ್ಬರು ಪೊಲೀಸ್ ಅಧಿಕಾರಗಳ ಅಮಾನತ್ತು
ಬೆಳಗಾವಿ : 112 ಪೊಲೀಸ್ ವಾಹನದ ಕರ್ತವ್ಯ ನಿರತ ಇಬ್ಬರು ಪೊಲೀಸ್ ಅಧಿಕಾರಿಗಳು 112 ಹೈವೇ ಪೆಟ್ರೊಲಿಂಗ್ ಸರ್ಕಾರಿ ವಾಹನ ಜೊತೆ ಖಾಕಿ ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ ಇಬ್ಬರು ಪೊಲೀಸರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
112 ಪೊಲೀಸ್ ಸಿಬ್ಬಂದಿ ಗಳಾದ ಕಮತೆ ಹಾಗೂ ದುಮಾಳ ಅಮಾನತ್ತು ಆದ ಪೊಲೀಸರಾಗಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಹೊರ ವಲಯದಲ್ಲಿ ಈ ಎಣ್ಣೆ ಪಾರ್ಟಿ ಮಾಡುತ್ತಿದ್ದರು.
ಕರ್ತವ್ಯದ ಸಮಯದಲ್ಲೇ ಎಣ್ಣೆ ಕುಡಿಯುತ್ತ, ಮಾಂಸ ತಿನ್ನುತ್ತಿರುವ ಸಿಬ್ಬಂದಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ತುರ್ತು ಪರಿಸ್ಥಿತಿಯಲ್ಲಿ ನಾಗತಿಕರ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸರು ಎಣ್ಣೆ ಅಮಲಿನಲ್ಲಿರುವ ಸಿಬ್ಬಂದಿಗಳಿಂದ ಜನರ ಸಹಾಯ ಹೇಗೆ ಸಾಧ್ಯ ಎಂಬ ಪ್ರಶ್ನೆ ಜಿಲ್ಲೆಯ ಜನರಲ್ಲಿ ಕಾಡತೋಡಗಿದೆ.
ಇಬ್ಬರು 112 ಪೋಲಿಸ್ ಸಿಬ್ಬಂದಿಗಳಿಂದ ಕರ್ತವ್ಯ ಲೋಪ ಮಾಡುವ ಮೂಲಕ ರಾಜಾರೋಷವಾಗಿ ಸಾರ್ವಜನಿಕವಾಗಿ ಪಾರ್ಟಿಯಲ್ಲಿ ಇಬ್ಬರೂ ಮಗ್ನರಾಗಿದ್ದರು. KA22 G 1818 ಸಂಖ್ಯೆ ಹೊಂದಿದ 112 ಪೋಲಿಸ್ ವಾಹನ ಇದಾಗಿದೆ. ಇತ್ತೀಚಿಗೆ 112 ವಾಹನದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳ ಬಗ್ಗೆ ಸಾರ್ವಜನಿಕರ ಅಸಮಾಧಾನ ಇತ್ತು ಎನ್ನಲಾಗುತ್ತಿದೆ.
112 ತುರ್ತು ಸೇವೆಯು ಮಹತ್ವದ ಯೋಜನೆಯದಾಗಿದೆ. ಯಾರಿಗೆ ಯಾವ ಹೊತ್ತಿನಲ್ಲೂ ನೆರವಾಗ ಬೇಕಾದ ಸಿಬ್ಬಂದಿಗಳು ಹಾಗೂ ಈ ಯೋಜನೆ ಹಳ್ಳ ಹಿಡಿಯುತ್ತಿದೆ ಎನ್ನುವದಕ್ಕೆ ಈ ಘಟನೆ ಸಾಕ್ಷಿ ಎನ್ನಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಎಣ್ಣೆ ಅಮಲಿನಲ್ಲಿ ಜನರ ಸಹಾಯ ಹೇಗೆ ಸಾಧ್ಯ ಎನ್ನು ಮಾತು ನಾಗರಿಕರಿಂದ ವ್ಯಕ್ತವಾಗುತ್ತಿವೆ. ಸಾರ್ವಜನಿಕರಿಗೆ ರಕ್ಷಣೆಗಾಗಿ ಇರುವ ೧೧೨ ಸಿಬ್ಬಂದಿಗಳೇ ಈ ರೀತಿ ಕರ್ತವ್ಯ ಲೋಪ ಎಸಿಗದರೇ ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.