ದೇವರಲ್ಲಿ ಭಕ್ತಿಯಿಂದ ನಡೆದರೆ ಜೀವನ ಪಾವನವಾಗುವುದು: ಕಲ್ಲಿನಾಥಶ್ರೀ

ದೇವರಲ್ಲಿ ಭಕ್ತಿಯಿಂದ ನಡೆದರೆ ಜೀವನ ಪಾವನವಾಗುವುದು: ಕಲ್ಲಿನಾಥಶ್ರೀ

 

ಕೊಲ್ಹಾರ 22: ಮೂರು ಲೋಕದ ಗಂಡ ಬಬಲಾದಿ ಸದಾಶಿವ ಸ್ವಾಮೀಗಳ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ಯುಗಾದಿಯ ಹೊಸ ವರ್ಷಾಚರಣೆ ಹಾಗೂ ಬೇವು ಬೆಲ್ಲ ವಿತರಣೆ ಕಾರ್ಯಕ್ರಮ ಶನಿವಾರ ಸಂಜೆ ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದಲ್ಲಿ ಜರುಗಿತ್ತು ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ ಉದ್ಘಾಟಿಸಿದರು.   

ದಿವ್ಯ ಸಾನಿಧ್ಯ ವಹಿಸಿ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ಸ್ವಾಮಿ ಮಾತನಾಡಿ ಮನುಷ್ಯ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಅವು ಪರಿಹಾರ ಆಗದಂತಹ ಸ್ಥಿತಿಯಲ್ಲಿದ್ದಾಗ ದೇವರಲ್ಲಿ ಹರಕೆ ಹೊತ್ತು ತಮಗೆ ಬಂದಿರುವ ಸಂಕಷ್ಟಗಳು ದೂರವಾದಾಗ ದೇವರ ಹರಕೆ ತಿರಿಸುವ ಸಂಪ್ರದಾಯ ಪ್ರತಿಯೊಬ್ಬರು ದೇವರಲ್ಲಿ ಭಯ ಭಕ್ತಿಯಿಂದ ನಡೆದಿದ್ದೆ ಆದರೆ ನಿಮ್ಮ ಜೀವನ ಪಾವನವಾಗಲಿದೆ ಇಂದಿನಿಂದ ಏಪ್ರಿಲ್ 12ರವರೆಗೆ ದಿಗಂಬರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಠದಲ್ಲಿ ನಿರಂತರವಾಗಿ ಪುರಾಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.   

ನಿವೃತ್ತ ಶಿಕ್ಷಕ ಪಡೆಪ್ಪ ನಾಗರಾಳ ಮಾತನಾಡಿ ಜೀವನ ಪಾವನವಾಗಬೇಕಾದರೆ ಮಠ ಮಂದಿರಗಳಲ್ಲಿ ಪುರಾಣ ಪ್ರವಚನ ಸತ್ಸಂಗಗಳು ಕಾರ್ಯಕ್ರಮಗಳು ನಡೆಯಲಿ ದಿಗಂಬರೇಶ್ವರ ಮಠದಲಿ ಪ್ರತಿ ವರ್ಷ ನಡೆಯುವ ಆಧ್ಯಾತ್ಮಿಕ ಅಮೃತವನ್ನು ನೀಡುವ ಪುರಾಣ ಕಾರ್ಯಕ್ರಮ ಅನ್ನದಾಸೋಹ ನಡೆಸುತ್ತಿರುವುದು ಬಹಳ ಶ್ಲಾಘನೀಯವಾದದ್ದು ಎಂದು ಹೇಳಿದರು.   

ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಬಸಪ್ಪ ಗಿಡ್ಡಪ್ಪಗೋಳ, ಈರ​‍್ಪ ಜಿಡ್ಡಿಲಬಾಗಿಲ, ಬಸವರಾಜ ಹಂಗರಗಿ, ಬಸವರಾಜ ಕೊಠಾರಿ, ಸೇರಿದಂತೆ ಮಹಿಳೆಯರು ಇದ್ದರು. 


ಸುದ್ದಿ ಓದಿ