ಮಹಲಿಂಗಪುರ

ಸತ್ಸಂಗ ದಿಂದ ಜೀವನ ಮುಕ್ತಿ: ಪ್ರಣವಾನಂದ ಶ್ರೀ

ಸತ್ಸಂಗ ದಿಂದ ಜೀವನ ಮುಕ್ತಿ: ಪ್ರಣವಾನಂದ ಶ್ರೀ

ಮಹಾಲಿಂಗಪುರ: ಸಮೀಪದ ಮುಗಳಖೋಡ ಗ್ರಾಮದಲ್ಲಿ 38ನೆಯ ವೇದಾಂತ ಪರಿಷತ್ ಕಾರ್ಯಕ್ರಮವು ಸದ್ಗುರು ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ಯವಾಗಿ ಮಠದ ಪೀಠಾಧಿಕಾರಿಗಳಾದ ಪರಮ ಪೂಜ್ಯ ರಾಮಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಿತು.  

ಈ ವೇದಿಕೆ ದಿವ್ಯ ಸಾನಿಧ್ಯ ಅಲಂಕರಿಸಿದ ಶ್ರೋ.ಬ್ರ.ಶ್ರೀ ಪ್ರಣವಾನಂದ ಮಹಾಸ್ವಾಮೀಜಿಯವರು ನಾಗಭೂಷಣ ಶಿವಯೋಗಿ ಮಠ ಮುಚಳಂಬಾ. ಶ್ರೀಗಳು ಸತ್ಸಂಗ ದಿಂದ ಜೀವನ ಮುಕ್ತಿ ಸಾಧ್ಯವಾಗುವುದು ಎಂದು ತಿಳಿಸುವುದರ ಜೊತೆಗೆ ಶ್ರೀಮನ್ ನಿಜಗುಣಿ ಶಿವಯೋಗಿಗಳವರ ವಿರಚಿತ ಕೈವಲ್ಯ ಪದ್ಧತಿಯ "ಮರುಗದಾಪತ್ತಿನೊಳುರೆ ತರಹರಿಪುದೆ ಚಂದಮಮ"ಎಂಬ ವಿಷಯದ ತಾತ್ಪರ್ಯವಾದ ಕಷ್ಟಗಳು, ನೋವುಗಳು ಬೆನ್ನತ್ತಿ ಕಾಡುತ್ತಿದ್ದಾಗಲು ಸಂತಸಮಯವಾಗಿ ಜೀವನ ಸಾಗಿಸುವು ಬಲ ಬರುವುದೇ ಸತ್ಸಂಗ ದಿಂದ. ಕೈವಲ್ಯ ಪದ್ಧತಿ ಮಹಾಗ್ರಂಥವು ಮಾನವ ಜೀವನ ಮುಕ್ತಿಗೆ ದಾರೀದೀಪವಾಗಿದೆ.  

ಸುಖ ದುಃಖಗಳು ಮನೋವೇದನೆಗಳು, ಮನವೆಂಬ ಮರಕಟನಿಗೆ ಭಗವಂತನ ನಾಮ ಸ್ಮರಣೆ ಮಾಡುತ್ತಾ ಸ್ಥಿರಗೊಳಿಸಿದರೆ ಸುಖ ದುಃಖಕ್ಕೆ ಮನಸ್ಸು ಸ್ಥಿರವಾಗಿ ನಿಲ್ಲುವುದು ಎಂದು ಸರಳ ಉದಾಹರಣೆಗಳನ್ನು ನೀಡುತ್ತಾ ಪ್ರವಚನ ಸಾರವನ್ನು ತಿಳಿಸಿದರು.ಪೂಜ್ಯರಾದ ಬಸಯ್ಯ ಮಹಾಸ್ವಾಮಿಗಳು ಮದರಖಂಡಿ, ಪರಮಾನಂದ ಶ್ರೀಗಳು ಸಿದ್ದಾರೂಢ ಮಠ ಯಳಸಂಗಿ, ಮಾಂತಯ್ಯ ಸ್ವಾಮಿಗಳು ಶಿರೋಳ, ಡಾ. ಟಿ. ವಿ ಅರಳಿಕಟ್ಟಿ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಸ್ಥಳೀಯ ಶ್ರೀ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸಂಘದವರು ಒಂದು ವಾರದವರೆಗೆ ಯೋಗಿರಾಜೇಂದ್ರ ಸದಾಶಿವ ಗುರೂಜಿ ಋಷಿ ಯೋಗಾಶ್ರಮ ರನ್ನ ಬೆಳಗಲಿ ಶ್ರೀಗಳಿಂದ ಉಚಿತ ಯೋಗ ತರಬೇತಿ ಕಾರ್ಯಗಾರ ನಡೆಸಿದರು, ಡಾ. ಹಣಮಂತ ಮಳಲಿ ಪಾರಂಪರಿಕ ನಾಟಿ ವೈದ್ಯರಿಂದ ವಿಶೇಷ ಉಪನ್ಯಾಸ ಜರುಗಿತು. ಕಾರ್ಯಕ್ರಮವನ್ನು ಶಿವಯ್ಯ ಹಿರೇಮಠ, ಪರಮಾನಂದ ಕುಂಬಾರ ನಿರೂಪಿಸಿದರು. ಶಂಕರಾನಂದ ಮಹಾಸ್ವಾಮಿಗಳು, ಚೆನ್ನಪ್ಪ ಕೆಸರುಗೊಪ, ಪರ​‍್ಪ ಮಂಗಸುಳಿ, ಪರಮಾನಂದ ಜೋಗಿ,ಸುರೇಶ ನಾವಿ,ಮುತ್ತವ್ವ ನಾವಿ,ಅನ್ನದಾಸೋಹಿ ಯಮನವ್ವ ಜೀರಗಾಳ, ಸದಾಶಿವ ಅಂಬೋಗೋಳ, ಪರಮಾನಂದ ರಂಗಾಪುರ, ಮತ್ತು ಸಮಸ್ತ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 


ಸುದ್ದಿ ಓದಿ