ಮುದ್ದೆಬಿಹಾಲ್

ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡೋಣ: ಬೆಳಗಲ್ಲ

ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡೋಣ: ಬೆಳಗಲ್ಲ

ಮುದ್ದೇಬಿಹಾಳ 06: ಇಂದು ನಾವೆಲ್ಲರೂ ಪ್ರಶಸ್ತಿಗಳನ್ನು ಪಡೆಯಲು, ಹೆಸರು, ಕೀರ್ತಿ ಪಡೆಯಲು ಹರ ಸಾಹಸ ಮಾಡುತ್ತೇವೆ, ವಶೀಲಿ, ಪ್ರಭಾವ ಬೀರುವ ಕೆಲಸ  ಇದು ಸರಿಯಲ್ಲ. ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದರೆ ಸಿಗುವ ತೃಪ್ತಿ ದೊಡ್ಡದು ಎಂದು ತಾಲ್ಲೂಕು ಅಕ್ಷರ ದಾಸೋಹ ( ಬಿಸಿಯೂಟ ಯೋಜನೆ) ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು. 

ಅವರು ಶುಕ್ರವಾರ  ಪಟ್ಟಣದ ಹುಡ್ಕೋ ಬಡಾವಣೆಯ ಹಸಿರು ತೋರಣ ಉದ್ಯಾನವನದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ  ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಅಶೋಕ ರೇವಡಿ ಹಾಗೂ ಬಿದರಕುಂದಿ ಎನ್‌.ಎಲ್‌.ನಾಯ್ಕೋಡಿ  ಪ್ರತಿಷ್ಠಾನ ಕೊಡಮಾಡಿದ "ಗುರುಶ್ರೇಷ್ಠ" ಪ್ರಶಸ್ತಿ ಪಡೆದ ಬಿ.ಎಚ್‌.ಬಳಬಟ್ಟಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದರು.  

ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯತ್ವ ಪಡೆಯುವುದು ಗೌರವದ ಸಂಗತಿಯಾಗಿದೆ. ಅದರಲ್ಲೂ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಳ್ಳುವುದು ಇನ್ನೂ ಹೆಚ್ಚಿನ ಗೌರವದ ಸಂಗತಿ. ವ್ಯಾಪಾರ, ವಾಣಿಜ್ಯ, ಸಮಾಜ ಸೇವೆಯನ್ನು ಗುರುತಿಸಿ ಈ ನೇಮಕ ಮಾಡಲಾಗುತ್ತದೆ. ಇದೇ ರೀತಿ ಬಿದರಕುಂದಿ ನಾಯ್ಕೋಡಿ ಪ್ರತಿಷ್ಠಾನ ಸಹ ಅತ್ಯಂತ ಯೋಗ್ಯರಾದ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತದೆ. ಪ್ರಶಸ್ತಿಗಳ ಹಿಂದೆ ನಾವು ಹೋಗದೇ, ನಮ್ಮ ಕೆಲಸ ನೋಡಿ ಪ್ರಶಸ್ತಿಗಳು ಬರಬೇಕು. ಹಸಿರು ತೋರಣ ಬಳಗವು ಯಾವುದೇ ಪ್ರತಿಫಲ, ಲಾಭದ ಆಶೆ ಪಡದೇ  ಪರಿಸರ ಪ್ರೀತಿಯ ಕೆಲಸ  ಮಾಡುತ್ತಿರುವುದು ಮಾದರಿಯಾಗಿದೆ ಎಂದು ಅವರು ಹೇಳಿದರು.  

ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷ ರವಿ ಗೂಳಿ ಹಾಗೂ ಬಿ.ಎಸ್‌.ಮೇಟಿ ಮಾತನಾಡಿ, ಅಶೋಕ ರೇವಡಿ ಹಾಗೂ ಬಿ.ಎಚ್‌.ಬಳಬಟ್ಟಿ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಈ ಸನ್ಮಾನ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಅಶೋಕ ರೇವಡಿ ಹಾಗೂ ಬಿ.ಎಚ್‌.ಬಳಬಟ್ಟಿ ಮಾತನಾಡಿದರು.  

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ  ಡಾ.ವೀರೇಶ ಇಟಗಿ ಮಾತನಾಡಿ,  ಹಸಿರು ತೋರಣ ಗೆಳೆಯರ ಬಳಗದ ಸದಸ್ಯರನ್ನು ವಿವಿಧ ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು  ನಮಗೆಲ್ಲ ಸಂತಸದ ಸಂಗತಿಯಾಗಿದೆ. ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ. ನಾವು ಸಮಾಜಕ್ಕೆ ಒಳ್ಳೆಯದನ್ನು ಸನ್ಮಾನ ಸ್ವೀಕರಿಸಿ ಅಶೋಕ ರೇವಡಿ ಮತ್ತು ಬಿ.ಎಚ್‌.ಬಳಬಟ್ಟಿ ಮಾತನಾಡಿದರು.   

ತಾಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್‌.ಕಾಮಟೆ, ನಾಗಭೂಷಣ ನಾವದಗಿ, ಬಿ.ಎಸ್‌.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ,  ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ,  ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಕಿರಣ ಕಡಿ, ಬಸವರಾಜ ಸಿದರಡ್ಡಿ, ರವಿ ತಡಸದ,  ಬಿ.ಎಂ.ಪಲ್ಲೇದ, ವೀರೇಶ ಹಂಪನಗೌಡ್ರ, ವಿಲಾಸರಾವ್ ದೇಶಪಾಂಡೆ, ಶರಣು ಹಿರೇಕುರುಬರ,  ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಅಮರೇಶ ಐಹೊಳೆ,  ಸೋಮಶೇಖರ ಚೀರಲದಿನ್ನಿ,  ಜಿ.ಎಂ.ಹುಲಗಣ್ಣಿ, ಪಿ.ಆರ್‌.ಕೂಡಗಿ,  ಶಿವನಗೌಡ ಪಾಟೀಲ,  ಪುಟ್ಟು ಕಡಕೋಳ, ವೀರೇಶ ಢವಳಗಿ, ವಿನಯಕುಮಾರ ಹಿರೇಮಠ, ಚಿದಾನಂದ ಗುಬಚಿ, ವಿನಯ ಗಡೇದ ಇದ್ದರು.  

ಶಿಕ್ಷಕರಾದ ಎಲ್‌.ಎಂ.ಚಲವಾದಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ವಂದಿಸಿದರು. 


ಸುದ್ದಿ ಓದಿ