ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿ: ಶಾಸಕ ಎಸ್.ಭೀಮಾನಾಯ್ಕ್
ಹಗರಿಬೊಮ್ಮನಹಳ್ಳಿ 10: ಪಟ್ಟಣದ ಹೊವಲಯದಲ್ಲಿ ಜರುಗುತ್ತಿರವ ಮಿನಿ ವಿಧಾನ ಸೌಧದ ಕಾಮಗಾರಿಯನ್ನು ಶಾಸಕ ಎಸ್.ಭೀಮಾನಾಯ್ಕ್ ಭೇಟಿ ನೀಡಿ ವೀಕ್ಷಿಸಿದರು.ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿ, ಕೂಡ್ಲಗಿ ವೃತ್ತದಲ್ಲಿ ನೆಡೆಯುತ್ತಿರುವ ಕಾರಿಡಾರ್ ಕಾಮಗಾರಿಯನ್ನು ವೀಕ್ಷಿಸಿ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕಾಮರ್ಿಕರು ದೊರೆಯದ ನೆಪವೊಡ್ಡಿ ಕಾಮಗಾರಿಯನ್ನು ವಿಳಂಬಿಸದಂತೆ ಶೀಘ್ರವೇ ಸೂಕ್ತ ಕ್ರಮ ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದರು.ಕಾಮಗಾರಿಯನ್ನು ವೀಕ್ಷಿಸಿ ಪತ್ರಿಕೆಯೊಂದಿಗೆ ಮಾತನಾಡಿ ಮಿನಿ ವಿಧಾನ ಸೌಧದ ಕಾಮಗಾರಿ ನಡೆಯುತ್ತಿದ್ದು,ಸಾರ್ವಜನಿಕರ ದ್ವಿಚಕ್ರ ಸೇರಿದಂತೆ ಕಾರ್ಗಳ ನಿಲುಗಡೆಯ ವ್ಯೆವಸ್ಥೆಯನ್ನು ಮಾಡಲಾಗುವುದು,ಅಧಿಕಾರಿಗಳ ನಿವೇಶನಗಳ ಬಗ್ಗೆಯು ಚಿಂತನೆ ನಡೆಯುತ್ತಿದೆ ಅವಶ್ಯಕತೆಗನುಗುಣವಗಿ ಅಧಿಕಾರಿಗಳ ನಿವೇಶನಗಳನ್ನು ರೂಪಿಸಲಾಗುವುದು ನಿಗದಿತ ಸಮಯಕ್ಕೆ ಸೌಧದ ಕಾರ್ಯ ಪೂರ್ಣಗೋಳಿಸುವಂತೆ ತಿಳಿಸಿದ್ದೇನೆ ಎಂದರು.ಈ ಸಂಧರ್ಭದಲ್ಲಿ ತಹಶೀಲ್ದಾರ್ ಶರಣಮ್ಮ, ಲೋಕೋಪಯೋಗಿ ಇಲಾಖೆಯ ಎಇಇ ಫ್ರಭಾಕರ ಶೆಟ್ಟಿ, ಪ್ರಥಮ ದಜರ್ೆ ಗುತ್ತಿಗೆದಾರ ವಿ.ದೊಡ್ಡಬಸಪ್ಪ, ಪುರಸಭೆ ಅದ್ಯಕ್ಷೆ ಹಾಲ್ದಾಳ್ ಕವಿತಾ ವಿಜಯಕುಮಾರ, ಪುರಸಭೆ ಸದಸ್ಯ ಅಲ್ಲಾಬಕ್ಷ್, ಮುಖಂಡರಾದ ಹಾಲ್ದಾಳ್ ವಿಜಯಕುಮಾರ, ಡಿಶ್ ಮಂಜುನಾಥ್, ಪವಾಡಿ ಹನುಮಂತಪ್ಪ, ಬಾಲಕೃಷ್ಣ ಬಾಬು ಇದ್ದರು