ಹಗರಿಬೊಮ್ಮನಹಳ್ಳಿ

ಗಂಗಾವತಿ ವೆಂಕೋಬಣ್ಣ ಸರ್ಕಾರಿ ಸಾರ್ವಜನಿಕ ಅಸ್ಪತ್ರೆ ಎಂದು ನಾಮಫಲಕವಿರಲಿ

ಗಂಗಾವತಿ ವೆಂಕೋಬಣ್ಣ ಸರ್ಕಾರಿ ಸಾರ್ವಜನಿಕ ಅಸ್ಪತ್ರೆ ಎಂದು ನಾಮಫಲಕವಿರಲಿ

ಹಗರಿಬೊಮ್ಮನಹಳ್ಳಿ 29: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ನಾಮಫಲಕವು ಕೇವಲ ಸಾರ್ವಜನಿಕ ಆಸ್ಪತ್ರೆ ಎಂದು ಬರಹದಲ್ಲಿದೆ, ಇದನ್ನು ಮೊದಲಿನಂತೆ ಗಂಗಾವತಿ ವೆಂಕೋಬಣ್ಣ ಸರ್ಕಾರಿ ಸಾರ್ವಜನಿಕ ಅಸ್ಪತ್ರೆ ಎಂದು ನಾಮ ಬದಲಿಸುವಂತೆ ಭಾರತೀಯ ಮಾನವ ಹಕ್ಕುಗಳ ಹಿತ ರಕ್ಷಣಾ ಸಮಿತಿಯ ತಾಲೂಕು ಘಟಕವು ಬುಧವಾರ ತಾಲೂಕು ಮುಖ್ಯವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಸತ್ಸಂಗ ಸಮಿತಿ ಅಧ್ಯಕ್ಷ ಲಕ್ಷೀಪತಿ ಮಾತನಾಡಿ ಸರ್ಕಾರಿ ಆಸ್ಪತ್ರೆಗೆ ಗಂಗಾವತಿ ವೆಂಕೋಬಣ್ಣವರು ಸ್ಥಳದ ದಾನಿಗಳಾಗಿದ್ದಾರೆ ಮೊದಲಿನಿಂದಲೂ ಆಸ್ಪತ್ರೆಯನ್ನು ಗಂಗಾವತಿ ವೆಂಕೋಬಣ್ಣ ಸರ್ಕಾರಿ ಸಾರ್ವಜನಿಕ ಅಸ್ಪತ್ರೆ ಎಂದು ಕರೆಯಲಾಗುತ್ತಿತ್ತು ಆದರೆ ಇಂದು ನೂತನವಾಗಿ ಹಾಕಲಾದ ನಾಮಫಲಕದಲ್ಲಿ ಕೇವಲ ಸಾರ್ವಜನಿಕ ಆಸ್ಪತ್ರೆ ಎಂದು ನಮೂದಿಸಲಾಗಿದೆ ಕೂಡಲೆ ಇದನ್ನು ಮೊದಲಿನಂತೆ ನಾಮಕರಣ ಮಾಡಬೇಕೆಂದು ತಿಳಿಸಿದರು. 

ಭಾರತೀಯ ಮಾನವ ಹಕ್ಕುಗಳ ಹಿತ ರಕ್ಷಣಾ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಶ್ಯಾಬುದ್ದಿನ್ ಮಾತನಾಡಿ ಆಸ್ಪತ್ರೆ ಸೇರಿದಂತೆ ಶಾಲಾ ಕಾಲೇಜುಗಳಿಗೆ ನಗರದ ಹೆಸರಾಂತ ವ್ಯೆಕ್ತಿಯಾದ ವೆಂಕೋಬಣ್ಣವರು ಸ್ಥಳವನ್ನು ದಾನದಲ್ಲಿ ನೀಡಿದ್ದು ಇಂದು ಆಸ್ಪತ್ರೆಯು ಹಳೆಯ ಹೆಸರು ಮರೆಮಾಚುತ್ತಿದ್ದು ಕೇವಲ ಸಾರ್ವಜನಿಕ ಆಸ್ಪತ್ರೆ ಎಮದು ನಾಮಫಲಕ ಹಾಕಿಸಿರುವುದು ಸೂಕ್ತವಲ್ಲ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ವೈದ್ಯಾಧಿಕಾರಿಗಳು ಇತ್ತ ಗಮನ ಹರಿಸಿ  ಈ ಮೊದಲಿನಂತೆ ಗಂಗಾವತಿ ವೆಂಕೋಬಣ್ಣ ಸರ್ಕಾರಿ ಸಾರ್ವಜನಿಕ ಅಸ್ಪತ್ರೆ ಎಂದು ನಮಕರಣ ಮಾಡುವಂತೆ ತಿಳಿಸಿದರು. 

ಈ ಸಂಧರ್ಭದಲ್ಲಿ ಟೈಲರ್ ಸಂಘದ ಅಧ್ಯಕ್ಷ ವೆಂಕಟೇಶ್, ಅಜಯ್, ಸೋಮಣ್ಣ, ಎಣ್ಣಿ ಬಾಷಾ ಸಾಬ್, ಹುಚ್ಚಪ್ಪ, ಕೃಷ್ಣಮೂರ್ತಿ ಸೇರಿದಂತೆ ರಾಮನಗರ ಮತ್ತು ಕುರದಗಡ್ಡೆ ಮುಖಂಡರು ಇದ್ದರು. 


ಸುದ್ದಿ ಓದಿ