ಕಲಿಕಾ ಕೇಂದ್ರ ಶಾಂತಿ ಸಹನೆಯ ತಾಣಗಳಾಗಲಿ: ಕುಂದಗೋಳ
ಮಹಾಲಿಂಗಪುರ: ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಕಲಿಕಾ ಕೇಂದ್ರಗಳು ಶಾಂತಿ ಸಹನೆಯ ತಾಣಗಳಗಬೇಕು ಎಂದು ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ. ಕುಂದಗೋಳ ಹೇಳಿದರು.
ಸ್ಥಳೀಯ ಕೆಎಲ್ಇ ಅಂಗಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ಆಕಾಶ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಟಿ ಹಾಗೂ ಬೇಸಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ತಿಗೆ ನಿಯಮಿತ ತರಗತಿಗಳ ಜೊತೆ ಕೋಚಿಂಗ್ ಕ್ಲಾಸ್ಗಳ ಪೂರಕ ಜ್ಞಾನವೂ ಅಗತ್ಯ ಎಂದರು.
ಆಕಾಶ ಸಂಸ್ಥೆಯ ಸಂಸ್ಥಾಪಕ ಎಸ್.ಎಸಚ್.ಮೆಳವಂಕಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ಸುಲಭದಲ್ಲಿ ಸೂಕ್ತ ವೇದಿಕೆ ಒದಗಿಸುವ ಉದ್ದೇಶಕ್ಕೆ ನನ್ನ ಸ್ಪರ್ಧಾತ್ಮಕ ಅನುಭವ ಹಾಗೂ ಸಂಪನ್ಮೂಲ ಕ್ರೋಢೀಕರಿಸಿ ಈ ಸಂಸ್ಥೆ ಹುಟ್ಟು ಹಾಕಿದ್ದೇನೆ ಎಂದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಪ್ರಾಚಾರ್ಯ ಡಿ.ಬಿ.ಕೋಳಿ, ಎಸ್.ಬಿ.ತುಪ್ಪದ, ಆರ್.ಎನ್.ಪಟ್ಟಣಶೆಟ್ಟಿ, ಜಿ.ಬಿ.ಜತ್ತಿ, ಬಿ.ಬಿ.ಯಲ್ಲಟ್ಟಿ, ಬಿ.ಎನ್.ಹಂದಿಗುಂದ, ವೈ.ಐ.ಕಾಪಸಿ ಸೇರಿದಂತೆ ಹಲವರು ಇದ್ದರು.