ಚಿಕ್ಕೋಡಿ

ಮುಖ್ಯೋಪಾಧ್ಯಾಯರು ಕಲಿಕಾ ಚಟುವಟಿಕೆ ಹೆಚ್ಚಿಸಲಿ

ಮುಖ್ಯೋಪಾಧ್ಯಾಯರು ಕಲಿಕಾ ಚಟುವಟಿಕೆ ಹೆಚ್ಚಿಸಲಿ
ಇಲ್ಲಿನ ಸಿಬಿ ಕೋರೆ ಪಾಲಿಟೇಕ್ನಿಕ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆಯ ಜಿಲ್ಲಾ ಮಟ್ಟದ ಮುಖ್ಯೋಪಾ

ಡಿಡಿಪಿಐ ಗಜಾನನ ಮನ್ನಿಕೇರಿ ಸಲಹೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ

ಚಿಕ್ಕೋಡಿ 03: ಪ್ರಸಕ್ತ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮತ್ತೆ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಲು ಶೈಕ್ಷಣಿಕ ಜಿಲ್ಲೆಯ ಎಲ್ಲ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಕಲಿಕಾ ಚಟುವಟಿಕೆ ಹೆಚ್ಚಿಸಬೇಕು. ಎಲ್ಲ ಮಕ್ಕಳು ಕಡ್ಡಾಯವಾಗಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.

ಇಲ್ಲಿನ ಸಿ.ಬಿ.ಕೋರೆ ಪಾಲಿಟೇಕ್ನಿಕ ಕಾಲೇಜಿನ ಸಭಾಭವನದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕತ ಕಾರ್ಯಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ಜೂನ 2021ರ ಪರೀಕ್ಷೆಯ ಪೂರ್ವ ಸಿದ್ಧತೆಯ ಜಿಲ್ಲಾ ಮಟ್ಟದ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಅವರು ಮಾತನಾಡಿದರು.  ಹತ್ತನೆ ತರಗತಿ ಫಲಿತಾಂಶ ಸುಧಾರಣೆ ಜೊತೆಗೆ ಮಕ್ಕಳು  ದೇಶದ ಒಳ್ಳೆಯ ನಾಗರೀಕರಾಗಲು ಉತ್ತೇಜನ ನೀಡಲು ಮುಖ್ಯೋಪಾಧ್ಯಾಯರು ಸೂಕ್ತ ಗಮನ ಹರಿಸಬೇಕು ಎಂದರು.

ಸಮಯಕ್ಕೆ ಸರಿಯಾಗಿ ಮುಖ್ಯೋಪಾಧ್ಯಾಯರು ಶಾಲೆಗೆ ಹೋಗಬೇಕು. ಸಹ ಶಿಕ್ಷಕರ ಕಡೆಯಿಂದ ಫಲಿತಾಂಶ ಸುಧಾರಣೆ ಕುರಿತು ಸೂಚನೆ ನೀಡಬೇಕು. ಮಾತೃ ವಿಷಯದಲ್ಲಿ ಎಲ್ಲ ಮಕ್ಕಳು ಕಡ್ಡಾಯವಾಗಿ ತೇರ್ಗಡೆಯಾಗಲೇಬೇಕು. ಮುಖ್ಯೋಪಾಧ್ಯಾಯರು ಸಮರ್ಥವಾಗಿ ನಿಭಾಯಿಸಲು ವಿಫಲರಾದರೇ ಬೇರೆಯವರಿಗೆ  ಅವಕಾಶ ಕೊಡಬೇಕು. 

ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲೆಯಲ್ಲಿ ಮರಾಠಿ, ಇಂಗ್ಲೀಷ ಮತ್ತು ಉರ್ದು ಮಾಧ್ಯಮದ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಮಕ್ಕಳು ಅನುತಿರ್ಣವಾಗುತ್ತಿರುವುದು ಬೇಸರ ಮೂಡಿಸಿದೆ. ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಕನ್ನಡದ ವಿಷಯದಲ್ಲಿ ಮಕ್ಕಳು ಪೇಲಾದರೇ ಮುಖ್ಯೋಪಾಧ್ಯಾಯ ಮತ್ತು ಸಹ ಶಿಕ್ಷಕರ ಜವಾಬ್ದಾರಿಯಾಗುತ್ತಾರೆ. ಎಲ್ಲ ಶಿಕ್ಷಕರು ಮಾತೃಭಾಷೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.

ಶೈಕ್ಷಣಿಕ ಜಿಲ್ಲೆಯ ಎಲ್ಲ ಶಿಕ್ಷಕರು ಅಧ್ಯಾಯ ಮುಗಿದ ಮೇಲೆ ಘಟಕ ಪರೀಕ್ಷೆ ಮಾಡಿ ಮಕ್ಕಳ ಫಲಿತಾಂಶ ಸುಧಾರಣೆಗೆ ಅನುಕೂಲವಾಗುತ್ತದೆ. ಪರೀಕ್ಷೆ ಕುರಿತು ಮಕ್ಕಳಲ್ಲಿಯ ಭಯ ಹೋಗಲಾಡಿಸಬೇಕು.  ಸಹ ಶಿಕ್ಷಕರ ಪಾಠವನ್ನು ಮುಖ್ಯೋಪಾಧ್ಯಾಯರು ವೀಕ್ಷಣೆ ಮಾಡಿ ಟಿಪ್ಪಣಿ ಮಾಡಬೇಕೆಂದು ಸೂಚಿಸಿದರು.

ಸಭೆಗೆ ತಡವಾಗಿ ಆಗಮಿಸಿದ ಮುಖ್ಯೋಪಾಧ್ಯಾಯರನ್ನು ಡಿಡಿಪಿಐ ತರಾಟೆಗೆ ತೆಗೆದುಕೊಂಡರು. ಶಾಲೆಗೂ ಇದೇ ರೀತಿ ಹೋಗುತ್ತಿರಾ? ಎಂದು ಹರಿಹಾಯ್ದುರು. ಮುಖ್ಯೋಪಾಧ್ಯಯರು ಸಹ ಶಿಕ್ಷಕರಿಗೆ ಮಾದರಿ ಆಗಬೇಕೆಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪ್ರಾಚಾರ್ಯ ದರ್ಶನ ಬಿಳ್ಳೂರ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಮಾಡುವ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಸರಕಾರ ವಿಧಿಸುವ ರೂಪುರೇಷೆ ಅನುಷ್ಠಾನ ಮಾಡುವುದು ಅಧಿಕಾರಿಗಳು ಮತ್ತು ಶಿಕ್ಷಕರ ಮೇಲಿದೆ. ಇಂದಿನ ದಿನಮಾನಗಳಲ್ಲಿ ಟೆಕ್ನಾಲಜಿ ಬಳಕೆ ಮಾಡಿಕೊಳ್ಳುವುದು ಅನಿವಾರ್ಯ ಆದರೆ ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಜ್ಞಾನ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಅವಶ್ಯಕ. ವಿದ್ಯಾರ್ಥಿ ಭವಿಷ್ಯ ರೂಪಿಸಿಕೊಳ್ಳಲು ಮಕ್ಕಳಿಗೆ ಜಾಗೃತಿ ಮಾಡುವುದು ಅವಶ್ಯಕವಾಗಿದೆ.

ಡಯಟ್ ಪ್ರಾಚಾರ್ಯ ಮೋಹನ ಜಿರಗಿಹಾಳ. ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರಪ್ಪ. ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಮೋಹನ ದಂಡಿನ, ಪರೀಕ್ಷೆಯ ನೋಡಲ್ ಅಧಿಕಾರಿ ಬಿರಾದಾರ ಮುಂತಾದವರು ಇದ್ದರು.

ಚಿಕ್ಕೋಡಿ ಬಿಇಒ ಬಿ.ಎ.ಮೇಕನಮರಡಿ ಸ್ವಾಗತಿಸಿದರು.

ಸುದ್ದಿ ಓದಿ