ದೇಶದ ಮಿನುಗುತಾರೆಯಾಗಿ ವಿದ್ಯಾರ್ಥಿಗಳು ಬೆಳಗಲಿ; ಶಾಸಕ ಸಿ.ಎಸ್ ನಾಡಗೌಡ
ಮುದ್ದೇಬಿಹಾಳ 15: ಶಿಕ್ಷಣಕ್ಕಾಗಿ ಈ ಹಿಂದೆ ಕಲಿಯಲು ಮೈಲಿಗಟ್ಟಲೇ ನಡೆದುಕೊಂಡು ಹೋಗಿ ಶಾಲೆಗೆ ಹೋಗುವ ಸಂದರ್ಭವಿತ್ತು. ಆಗ ಬೇರೆ ಭಾಷೆಯಲ್ಲಿ ಪುಸ್ತಕ ಲಭ್ಯವಾದರೂ ಅರ್ಥ ಮಾಡಿಕೊಳ್ಳಲು ಉಪನ್ಯಾಸಕರ ಮೇಲೆ ಅವಲಂಬನೆ ಆಗಬೇಕಿತ್ತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೆರಳ ತುದಿಯಲ್ಲೇ ಬೇಗನೆ ಮಾಹಿತಿ ಲಭ್ಯವಾಗುತ್ತದೆ. ಇದನ್ನ ಸದುಪಯೋಗ ಪಡೆದುಕೊಂಡು ದೇಶದ ಮಿನುಗುತಾರೆಯಾಗಿ ವಿದ್ಯಾರ್ಥಿಗಳು ಬೆಳಗಲಿ ಎಂದು ಶಾಸಕ, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಇಣಚಗಲ್ ಹಾಗೂ ಬಿದರಕುಂದಿ ಗ್ರಾಮದಲ್ಲಿರುವ ಮೂರಾರ್ಜಿ ದೇಸಾಯಿ ಶಾಲೆಯಲ್ಲಿ 20 ಕೋಟಿಗೂ ಅಧಿಕ ವೆಚ್ಚದ ವಿದ್ಯಾರ್ಥಿಗಳ ವಸತಿ ಶಾಲೆ ಕಟ್ಟಡ, ಶಿಕ್ಷಕರು-ಸಿಬ್ಬಂದಿಗಳ ನೂತನ ಗೃಹ ಕಟ್ಟಡಗಳ ಭೂಮಿ ಉದ್ಘಾಟನೆ ಪೂಜೆ ಹಾಗೂ ಲೋಕಾರೆ್ಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಷ್ಯ ಹಾಗೂ ಗುರುಗಳ ನಡುವೆ ಬಾಂಧವ್ಯ ಪರಸ್ಪರ ಅನೋನ್ಯವಾಗಿರಬೇಕು. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿನ್ನಡೆ ಅನುಭವಿಸುತ್ತಾರೆ ಅಂತವರ ಪಟ್ಟಿಯನ್ನು ಶಿಕ್ಷಕರು ಸಿದ್ದಪಡಿಸಿ ಶಿಕ್ಷಕರು ಅಂತಹ ವಿದ್ಯಾರ್ಥಿಗಳಿಗೆ ಪುನಃ ಆ ವಿಷಯವನ್ನು ಮನಣೆ ಮಾಡಿದರೆ ವಿದ್ಯಾರ್ಥಿಗಳು ಆಸಕ್ತಿವಹಿಸಿ ಓದುವ ಹವ್ಯಾಸವನ್ನು ರೂಪಿಸಿಕೊಳ್ಳುತ್ತಾರೆ. ಆಗ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸಲು ಸಾಧ್ಯವಿಲ್ಲವೆಂದರು.
ಈ ಭಾಗದ ಭೂಮಿಯನ್ನು ವಿದ್ಯೆಗೆ ಸಿಮೀತವಾಗುವಂತೆ ಈಗಾಗಲೇ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಡಿ ಈ ಭಾಗವನ್ನು ವಿದ್ಯಾಗಿರಿ ಎಂಬ ಹೆಸರು ಬರೆಯಲು ನಾವೆಲ್ಲರೂ ಮುನ್ನುಡಿಯನ್ನು ನಾವು ಬರೆಯೋಣ. ಮಕ್ಕಳಿಗೆ ಪಾಲಕರು ಆಸ್ತಿ-ಅಂತಸ್ತು ಮಾಡುತ್ತಾರೆ ಅದು ಶಾಶ್ವತವಲ್ಲ. ಮಕ್ಕಳಿಗೆ ಉನ್ನತವಾದ ವಿದ್ಯೆಯೊಂದು ಕಲಿಸಿದರೆ ಇಡೀ ದೇಶವನ್ನು ಹಾಳುವ ಶಕ್ತಿ ವಿದ್ಯಾರ್ಥಿಗಳಿಗಿದೆ. ವಿದ್ಯಾರ್ಥಿಗಳು ಶಿಕ್ಷಣ ಒಲಿಸಿಕೊಂಡಿರೆ ದೇಶ ನಾಡಿನ ಆಸ್ತಿವಂತರಾಗುತ್ತಿರಿ ಎಂದು ಶಾಸಕ ಸಿ.ಎಸ್ ನಾಡಗೌಡ ಹೇಳಿದರು.
ಈಗ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಿದೆ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಜ್ಞಾನ ಸಂಪಾದನೆ ಮುಖ್ಯ. ಶಿಸ್ತುಬದ್ಧ ಜೀವನದಿಂದ ಯಶಸ್ಸು ಸಾಧಿಸಬಹುದು. ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡರೆ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ.
ಆಗಿನ ಕಾಲದಲ್ಲಿ ಶಿಕ್ಷಣಕ್ಕಾಗಿ ಮೂರು ನಾಲ್ಕು ಕಿ.ಲೋ ಮೀಟರ್ ಗಟ್ಟಲೇ ನಡೆದುಕೊಂಡು ಹೋಗಿ ಶಾಲೆಗೆ ಹೋಗುತ್ತಿದ್ದರು. ಪ್ರಸ್ತುತವಾಗಿ ಆಗಿಲ್ಲ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡುತ್ತಿದೆ. ಇದನ್ನು ಸದುಪಯೋಗ ಪಡೆದುಕೊಂಡು ಗುಣವಂತರಾಗಿ ಬೆಳೆಯಲು ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಿದರಕುಂದಿ ಗ್ರಾಮದ ಮೂರಾರ್ಜಿ ದೇಸಾಯಿ ಶಾಲೆಯಲ್ಲಿ ಮುಂದಿನ ವರ್ಷದಿಂದ 861 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲಿದ್ದಾರೆ.
ಈಗಾಗಲೇ ಪಟ್ಟಣದ ಕ್ರಿಡಾಂಗಣಕ್ಕೆ ಕನಿಷ್ಠ 10 ಕೋಟಿ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಚರ್ಚೆ ಮಾಡಿದ್ದೇನೆ. ಇದಕ್ಕೆ ಸಹಮತ ನೀಡಿದ ಸಿಎಂ 5 ಕೋಟಿ ರೂ ನೀಡುವ ಭರವಸೆ ನೀಡಿದ್ದಾರೆ. ಉನ್ನತ ಮಟ್ಟದ ಕ್ರೀಡಾಂಗಣ ಮಾಡಲು ಎಲ್ಲಾ ಮಟ್ಟದಲ್ಲೂ ಪ್ರಯತ್ನ ಮಾಡುತ್ತೇನೆ ಎಂದು ಸಿ.ಎಸ್ ನಾಡಗೌಡ ತಿಳಿಸಿದರು.
ನಿವೃತ್ತ ಡಿವಾಯ್ಎಸ್ಪಿ ಎಸ್.ಎಸ್ ಹುಲ್ಲೂರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ನ್ಯಾಯವಾದಿಗಳಾದ ಎಂ.ಎ. ಮುದ್ದೇಬಿಹಾಳ, ಎನ್.ಆರ್. ಗುರಿಕಾರ, ಈರನಗೌಡ ಪಾಟೀಲ, ಎಂ. ಎಂ. ಅವಟಿ ಚವ್ಹಾಣ, ಗುತ್ತಿಗೆದಾರ ಸುರೇಶಗೌಡ ಪಾಟೀಲ, ವಾಯ್.ಎಚ್. ವಿಜಯಕರ, ಶಾಲಾ ಮುಖ್ಯೋಪಾಧ್ಯಯರಾದ ಖೇಮು ರಾಠೋಡ, ಶಾಲೆಯ ಸಿಬ್ಬಂದಿಗಳಾದ ಸದಾಶೀವ ಕನಸೆ, ಎಂ.ಐ ಕುಂಬಾರ, ಸಲೀಂ ಬೋಜರ ಇನ್ನೀತರರು ಇದ್ದರು. ಶಾಲೆಯ ಹಾಗೂ ಗುತ್ತಿಗೆದಾರರ ಪರವಾಗಿ ಸಿ.ಎಸ್. ನಾಡಗೌಡರನ್ನು ಸನ್ಮಾನಿಸಲಾಯಿತು.