ಮೂಡಲಗಿ

ಯುವ ಮತದಾರರ ನೋಂದಣಿಗೆ ಪ್ರಾಂಶುಪಾಲರು ಸಹಕರಿಸಲಿ: ಡಿ.ಜಿ.ಮಹಾಂತ

ಯುವ ಮತದಾರರ ನೋಂದಣಿಗೆ ಪ್ರಾಂಶುಪಾಲರು ಸಹಕರಿಸಲಿ: ಡಿ.ಜಿ.ಮಹಾಂತ

ಮೂಡಲಗಿ 04: ತಾಲೂಕಿನ ಎಲ್ಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಮತದಾರರ ನೋಂದಣಿ ಮಾಡಲು ಪ್ರಾಂಶುಪಾಲರು ಸಹಕರಿಸಬೇಕು ಎಂದು ತಹಶೀಲ್ದಾರ ಡಿ.ಜಿ.ಮಹಾಂತ ಮನವಿ ಮಾಡಿದರು. ಗುರುವಾರದಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕಿನ ಯುವ ಮತದಾರರ ನೊಂದಣಿ  ಕುರಿತಾಗಿ ತಾಲೂಕಿನ ಎಲ್ಲಾ ಪ್ರಾಂಶುಪಾಲರುಗಳ ಸಭೆಯನ್ನು  ಕುರಿತು ಮಾತನಾಡಿದ ಅವರು ಈಗಾಗಲೇ ತಾಲ್ಲೂಕಿನಾದ್ಯಂತ ಎಲ್ಲ ಬಿಎಲ್ ಓ ಗಳು ಮನೆ ಮನೆಗೆ ತೆರಳಿ ನೊಂದಣಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ, ಅದರ ಜೊತೆಗೆ ತಾಲ್ಲೂಕಿನಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ, ಬರುವ 2023 ಜನೆವರಿ 1ಕ್ಕೆ 18 ವರ್ಷ ಪೂರೈಸುವ ವಿದ್ಯಾರ್ಥಿಗಳನ್ನು ಯುವ ಮತದಾರರನ್ನಾಗಿ ಪರಿಗಣಿಸಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲು ಪ್ರಾಂಶುಪಾಲರು ತಮ್ಮ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು. 

ನಂತರ ತಾಲೂಕಿನಲ್ಲಿ ಬರುವ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯನ್ನು ನಡೆಸಿದ ತಹಶೀಲ್ದಾರರು, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ, ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ಕೈ ಬಿಡುವುದು, ವಿಐಪಿ, ವಿವಿಐಪಿ ವ್ಯಕ್ತಿಗಳನ್ನು , 80 ಹಾಗೂ 100 ವಯಸ್ಸು ದಾಟಿದ ಹಿರಿಯರನ್ನು ಗುರಿತಿಸಿ ಮತದಾರರ ಪಟ್ಟಿಯಲ್ಲಿ ಸೇರಿಸುವುದರ ಜೊತೆಗೆ ಇನ್ನು ಅನೇಕ ಸೂಚನೆಗಳನ್ನು ನೀಡುತ್ತಾ ಮಾರ್ಗದರ್ಶನ ಮಾಡಿದರು. 

ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಎಫ್‌.ಜಿ. ಚಿಣ್ಣನವರ್, ಗ್ರೇಡ್ 2 ತಹಶೀಲ್ದಾರ ಪರಸಪ್ಪ ನಾಯಕ್, ಅನೇಕ ಕಾಲೇಜುಗಳ ಪ್ರಾಂಶುಪಾಲರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಹಾಜರಿದ್ದರು. 


ಸುದ್ದಿ ಓದಿ