ಹಗರಿಬೊಮ್ಮನಹಳ್ಳಿ

ಆದರ್ಶಗಳು ಜಯಂತಿಗಳಿಗೆ ಸೀಮಿತವಾಗದಿರಲಿ : ಮಾಜಿ ಶಾಸಕ ನೇಮರಾಜ್‌ನಾಯ್ಕ್‌

ಆದರ್ಶಗಳು ಜಯಂತಿಗಳಿಗೆ ಸೀಮಿತವಾಗದಿರಲಿ : ಮಾಜಿ ಶಾಸಕ ನೇಮರಾಜ್‌ನಾಯ್ಕ್‌

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ಏ.15 : ಸಮಾಜದಲ್ಲಿ ಸಮಾನತೆಯ ಏಳಿಗೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟು ದಲಿತ ಶೋಷಿತರ ಪರವಾಗಿ ನ್ಯಾಯ ದೊಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಕೇವಲ ಜಯಂತಿಗೆ ಸೀಮಿತವಾಗಿಸದೇ ಪ್ರತಿ ದಿನ ಅನುಕರಣೆ ಮಾಡುವಂತೆ ಮಾಜಿ ಶಾಸಕ ನೇಮರಾಜ್‌ನಯ್ಕ್‌ ಕರೆ ನೀಡಿದರು. 

ತಾಲೂಕಿ ತಂಬ್ರಹಳ್ಳಿ ಗ್ರಾಮದ ಡಾಕ್ಟರ್ ಬಿ ಆರ್‌.ಅಂಬೇಡ್ಕರ್ ಸಭಾ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್‌ರವರ 131 ನೇ ಹಾಗೂ ಬಾಬು ಜಗಜೀವನರಾಮ್‌ಅವರ 115 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಸಮಾನತೆ ಪ್ರತಿಪಾದಿಸಿ ಶೋಷಿತ ಸಮುದಾಯಗಳ ಪರವಾಗಿ ನಿರಂತರ ಹೋರಾಟದಲ್ಲಿ ಡಾ. ಬಿ. ಆರ್‌ಅಂಬೇಡ್ಕರ್ ಸಾಧನೆ ಹಾಗೂ ದೇಶ ನಿರ್ಮಾಣದಲ್ಲಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿದೆ ಜಾತ್ಯತೀತ ಬೇಧವಿಲ್ಲದೆ ಎಲ್ಲರೂ ಸಮಾನರೆಂದು ಜಗತ್ತಿಗೆ ಸಾರಿದರು, ಯುವ ಸಮೂಹಕ್ಕೆ ಶಿಕ್ಷಣ, ಸಂಘಟನೆ, ಹೋರಾಟದ ಮಂತ್ರ ಪಠಿಸುವಂತೆ ತಿಲಿಸಿದರು, ಪ್ರತಿಯೊಬ್ಬರಿಗೂ ನ್ಯಾಯ ದೊರಕಬೇಕೆಂದು ಸಂವಿಧಾನ ರೂಪಿಸಿದ್ದಾರೆ. ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಅವರ ಜಯಂತೋತ್ಸವವನ್ನು ಆಚರಿಸೋಣ ಎಂದು ತಿಳಿಸಿದರು  

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಡೂರು ಮೆಹಬೂಬ್ ಬಾಷ , ಎಂ ಎನ್ ಮಂಜುನಾಥ್ ( ಹನಿ) , ಹಗರಿಬೊಮ್ಮನಹಳ್ಳಿ ಪುರಸಭೆ ಸದಸ್ಯ ಜೋಗಿ ಹನುಮಂತ , ಎ ಪಿ ಎಂ ಸಿ ಸದಸ್ಯ ಎ ಕೆ ರಾಮಣ್ಣ , ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೊಬಟಿ ಹರೀಶ್ , ರೋಹಿತ್‌ಕುಮಾರ್ , ಜಿ ಬೀ ಶರಣಪ್ಪ , ಬಲ್ಲಾ ಹುಣಸಿ ರಾಮಣ್ಣ , ರಾಜಲಿಂಗಪ್ಪ , ರಾಜುಪಾಟಿಲ್ , ಹಾಗೂ ಮುಖಂಡರಾದ ಕಡ್ಡಿ ಕೊಟ್ರೇಶ್ , ಸುಣಗಾರ್ ಪರಶುರಾಮ್ , ಸಿ ಗೀರೀಶ್ , ಹನುಮೇಶ್ , ಮ್ಯಾಗಳಮನಿ ಬಸಪ್ಪ,  ಕಡ್ಡಿ ಶ್ರೀಕಾಂತ್ , ಮರಿಯಜ್ಜ , ಚಾರ್ಯಪ್ಪ , ಯಮನೂರು , ಮಹೇಶ , ಕೋಟೇಶ್ , ಮಲ್ಲಪ್ಪ ಜಯಂತಿಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ