ಸಿಂಧಗಿ

ಹೆಣ್ಣು ಮಕ್ಕಳು ಬದುಕಿನಲ್ಲಿ ಸಂಸ್ಕಾರದ ಮೌಲ್ಯ ಅಳವಡಿಸಿಕೊಳ್ಳಿಲಿ:ನಂದಿಮಠ

ಹೆಣ್ಣು ಮಕ್ಕಳು ಬದುಕಿನಲ್ಲಿ ಸಂಸ್ಕಾರದ ಮೌಲ್ಯ ಅಳವಡಿಸಿಕೊಳ್ಳಿಲಿ:ನಂದಿಮಠ


ಸಿಂದಗಿ: ಹೆಣ್ಣುಮಕ್ಕಳಿಗೆ ಬದುಕಿನಲ್ಲಿ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸದ್ಗುಣಿಗಳಾಗಿ ಎಂದು ಸರ್ಕಾರಿ ಆದರ್ಶ ಪ್ರೌಢಶಾಲೆಯ ಮುಖ್ಯ ಗುರುಮಾತೆ ಜ್ಯೋತಿ  ಹೇಳಿದರು.  

ಪಟ್ಟಣದ ಪಿ.ಇ.ಎಸ್‌. ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಪದವಿ ಮಹಾವಿದ್ಯಾಲಯ ಮತ್ತು  ತಾಲೂಕಾ ಲಯನ್ಸ್‌ ಕ್ಲಬ್ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.  

ಹಿಕ್ಕಣಗುತ್ತಿಯ ಸುಬೋಧಿ ಪ್ರೌಢಶಾಲೆಯ ಮುಖ್ಯ ಗುರುಮಾತೆ ಎಸ್‌.ಎಸ್‌. ಪಾಟೀಲ ಮಾತನಾಡಿದರು. ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್‌.ಬಿ. ಗೋಡಕರ, ಎಸ್‌.ಪಿ.ಬಿ.ಕೆ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್‌. ಕಡಣಿ, ಅಧ್ಯಕ್ಷತೆ ವಹಿಸಿದ ಪ್ರೇಮಾ ಕರ್ಜಗಿ, ವಿಮಲಾ ಬಿರಾದಾರ, ಚನ್ನಮ್ಮ ಸೋಮಾಪೂರ, ಶಕುಂತಲಾ ಹಿರೇಮಠ, ಎಂ.ಎಸ್‌. ಶ್ರೀಗಿರಿ, ಸವಿತಾ ರಾಠೋಡ ಅವರು ವೇದಿಕೆ ಮೇಲೆ ಇದ್ದರು. 

ಸುಜಾತಾ ಕೊಂಗವಾಡ ಸ್ವಾಗತಿಸಿದರು. ಎನ್‌.ಬಿ. ಬಾಬಳಗಾಂವ ನಿರೂಪಿಸಿದರು. ಲಕ್ಷ್ಮೀ ವಾಲಿ ವಂದಿಸಿದರು.  


ಸುದ್ದಿ ಓದಿ