ಶಿಗ್ಗಾವ್

ಶ್ರೀಕಾಂತಗೆ ರಾಜಕೀಯವಾಗಿ ಒಳ್ಳೆಯ ಅವಕಾಶ ದೊರೆಯಲಿ: ಕಲ್ಲಿನಾಥ ಶ್ರೀಗಳು

ಶ್ರೀಕಾಂತಗೆ ರಾಜಕೀಯವಾಗಿ ಒಳ್ಳೆಯ ಅವಕಾಶ ದೊರೆಯಲಿ: ಕಲ್ಲಿನಾಥ ಶ್ರೀಗಳು

ಶಿಗ್ಗಾವಿ 29: ಭಾರತ ಸೇವಾ ಸಂಸ್ಥೆಯ ಶ್ಲಾಘನೀಯ ಕಾರ್ಯಗಳ ಬಗ್ಗೆ ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇನೆ ನಿಮ್ಮ ಜಾತ್ಯಾತೀತ ನಿಲುವಿನ ಸಮಾಜಮುಖಿ ಕಾರ್ಯಗಳು ಮನೆ ಮನೆಗೆ ತಲುಪಲಿ ಎಂದು ವಿಜಯಪುರ ದೀಗಂಬರೇಶ್ವರ ಮಹಾಸಂಸ್ಥಾನ ಮಠದ ಕಲ್ಲಿನಾಥ ಮಹಾಸ್ವಾಮೀಜಿ ಹೇಳಿದರು. 

ಪಟ್ಟಣಕ್ಕೆ ಬೇಟಿ ನೀಡಿದ್ದ ವಿಜಯಪುರದ ದೀಗಂಬರೇಶ್ವರ ಮಹಾಸಂಸ್ಥಾನ ಮಠ ಕೊಲ್ಹಾರ ಲಿಂಗಾಯತ ಗಾಣಿಗ ಸಮಾಜದ ಶ್ರೀ ಕಲ್ಲಿನಾಥ ಮಹಾಸ್ವಾಮೀಜಿ ಅವರು ಬೇಟಿ ನೀಡಿ ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರನ್ನು ಆಶೀರ್ವದಿಸಿ ನಂತರ ಮುಂದಿನ ದಿನಮಾನಗಳಲ್ಲಿ ರಾಜಕೀಯವಾಗಿ ಒಳ್ಳೆಯ ಅವಕಾಶ ದೊರೆಯಲಿ ನಮ್ಮ ಆಶೀರ್ವಾದ ಸದಾ ನಿಮ್ಮೆ ಮೇಲಿದೆ ಎಂದು ಹಾರೈಸಿದರು. 

ಈ ಸಂದರ್ಭದಲ್ಲಿ ಧಾರವಾಡ ಕೆಸಿಸಿ ಬ್ಯಾಂಕಿನ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಮುಖಂಡರಾದ  ಸಂತೋಷ ಕುಲಕರ್ಣಿ , ಮಂಜುನಾಥ ಮತ್ತಿಗಟ್ಟಿ , ಅಶೋಕ ಅಮಾತ್ಯಣ್ಣವರ ಗಾಣಿಗ ಸಮಾಜದ ಮುಖಂಡರಾದ ಬಸವರಾಜ ಕುರಗೋಡಿ, ರಾಜು ಹಿಂಡಿ, ದುಂಡಪ್ಪ ಮಾಸನಕಟ್ಟಿ, ರಾಜಣ್ಣ ಗಾಣಗೇರ,  ವಿಶ್ವನಾಥ ಗಾಣಗೇರ, ನಾಗರಾಜ ನಾಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ