ಮೂಡಲಗಿ

ಪಜಾ,ಪಂ ವಿದ್ಯಾರ್ಥಿಗಳು ಯೋಜನೆಗಳನ್ನು ಸದುಪಯೋಗಿಸಿಕೊಳ್ಳಲಿ: ಭಜಂತ್ರಿ

ಪಜಾ,ಪಂ ವಿದ್ಯಾರ್ಥಿಗಳು ಯೋಜನೆಗಳನ್ನು ಸದುಪಯೋಗಿಸಿಕೊಳ್ಳಲಿ: ಭಜಂತ್ರಿ

ಮೂಡಲಗಿ 19: ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಾದ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಶಿಷ್ಯವೇತನ, ಪ್ರೈಜ್‌ಮನಿ, ಸ್ಟೈಪಂಡ್, ವಿವಿಧ ವೃತ್ತಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಉಚಿತ ಕೋಚಿಂಗ್, ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ, ಹೀಗೆ ಅನೇಕ ಶೈಕ್ಷಣಿಕ ಯೋಜನೆಗಳನ್ನು ಇಲಾಖೆ ಜಾರಿಗೆ ತಂದಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇಲಾಖೆಯ ಯೋಜನೆಗಳನ್ನು ಸರಿಯಾದ ಮಾರ್ಗದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೂಡಲಗಿಯ ಎಸ್‌.ಸಿ. ಮತ್ತು ಎಸ್‌.ಟಿ. ವರ್ಗಗಳ ವಸತಿ ನಿಲಯದ ಮೇಲ್ವಿಚಾರಕರಾದ ವಾಯ್‌.ಬಿ. ಭಜಂತ್ರಿ ಹೇಳಿದರು. 

ಪಟ್ಟಣದ ಆರ್‌.ಡಿ.ಎಸ್‌.ಕಲಾ, ವಾಣಿಜ್ಯ, ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಎನ್‌.ಎಸ್‌.ಎಸ್‌. ಮತ್ತು ಆಯ್‌ಕ್ಯೂಎಸಿ ಘಟಕಗಳಡಿಯಲ್ಲಿ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅತಿಥಿಯಾಗಿ ಮಾತನಾಡಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಅಭಿವೃದ್ಧಿಗಾಗಿ ಸರಕಾರದ ಸಹಾಯಧನ ಪಡೆಯುಲು ಅನುಸರಿಸುವ ಕ್ರಮಗಳು ಹಾಗೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮೇಲೆ ದೌರ್ಜನ್ಯಗಳು ನಡೆದರೆ ಸರಕಾರದಿಂದ ಸಮುದಾಯವನ್ನು ರಕ್ಷಿಸಲು ಇರುವ ಕಾನೂನು ನಿಯಮಗಳನ್ನು ಮಾರ್ಮಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. 

 ಉಪನ್ಯಾಸಕಿ ಸವಿತಾ ಪಡದಲ್ಲಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಲ್ಲ ವಿದ್ಯಾರ್ಥಿಗಳು ಯೋಜನೆಗಳ ಸದುಪಯೋಗ ಪಡಿಸಿಕೊಂಡು ತಮ್ಮ ಬದುಕನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕೆಂದರು. 

ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಸತ್ಯೇಪ್ಪ ಗೋಟೂರೆ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಸರಕಾರದ ವಿವಿಧ ಯೋಜನೆಗಳ ಸಹಾಯ ಪಡೆದು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಸಪಲತೆಯನ್ನು ಹೊಂದಬೇಕು ಎಂದರು. 

ಕಾರ್ಯಕ್ರಮದಲ್ಲಿ ಎಸ್‌ಸಿ ಮತ್ತು ಎಸ್‌ಟಿ ವಸತಿ ನಿಲಯದ ಸಹಾಯಕರಾದ ಎನ್‌.ಎಂ.ಬಾಲಪ್ಪಗೋಳ, ಉಪನ್ಯಾಸಕರಾದ ಗೀತಾ ಹಿರೇಮಠ, ಪ್ರಕಾಶ ಚೌಡಕಿ, ಮಲ್ಲಪ್ಪ ಪಾಟೀಲ, ಸಂಜೀವ ಮಂಟೂರ, ಶಂಕರ ಪಾಟೀಲ, ಸುನೀಲ ಸತ್ತಿ, ರಾಜು ಪತ್ತಾರ, ಬಾಳು ಪುರವಂತ, ಪಂಚು ಬೆಣ್ಣಿ ಹಾಜರಿದ್ದರು. 

ಉಪನ್ಯಾಸಕಿ ರೋಹಿಣಿ ಕಾಂಬಳೆ ಸ್ವಾಗತಿಸಿದರು, ವಿದ್ಯಾರ್ಥಿ ಸೀಮಾ ಪೂಜೇರಿ ನಿರೂಪಿಸಿದರು. ವಿದ್ಯಾರ್ಥಿ ರವಿ ಕರಿಹೊಳಿ ವಂದಿಸಿದರು. 


ಸುದ್ದಿ ಓದಿ