ಹಗರಿಬೊಮ್ಮನಹಳ್ಳಿ

ವಿದ್ಯಾರ್ಥಿಗಳ ಶೈಕ್ಷಣಿಕ ಸಬಲತೆಗೆ ಪೋಷಕರು ಒತ್ತು ನೀಡಿ

ವಿದ್ಯಾರ್ಥಿಗಳ ಶೈಕ್ಷಣಿಕ ಸಬಲತೆಗೆ ಪೋಷಕರು ಒತ್ತು ನೀಡಿ

ಹಗರಿಬೊಮ್ಮನಹಳ್ಳಿ 18: ವಿದ್ಯಾರ್ಥಿಗಳ ಶೈಕ್ಷಣಿಕ ಸಬಲತೆಗೆ ಪೋಷಕರು ಪ್ರಮುಖ ಪಾತ್ರ ವಹಿಸುವುದರ ಜೊತೆ ಒತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಕರೆ ನಿಡಿದರು. 

ಪಟ್ಟಣದ ಗಂಗಾವತಿ ಭೀಮಪ್ಪನವರ ಸರಕಾರಿ ಫೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನ ಘಟಕದ ವತಿಯಿಂದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ತಾಯಂದಿರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಎಸ್‌ಎಸ್‌ಎಲ್‌ಸಿಯು ಮಕ್ಕಳ ಭವಿಷ್ಯ ರೂಪಿಸುವ ಘಟ್ಟವಾಗಿದೆ, ಮನೋರಂಜನೆಯಾಗಿ ಬಳಸುವ ದೂರದರ್ಶನವನ್ನು ಆದಷ್ಟು ಸದ್‌ವಿನಿಯೋಗಕ್ಕೆ ಬಳಸಿಕೊಂಡು ಉಳಿದ ಸಮಯ ವಿದ್ಯಾಭ್ಯಾಸಕ್ಕೆ ಮೀಸಲಿಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು, ಇನ್ನು ಮಕ್ಕಳನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರವಲ್ಲಿ ಶಿಕ್ಷಕರು ಸೇರಿದಂತೆ ಪೋಷಕರು ಅದರಲ್ಲೂ ಹೆಚ್ಚಾಗಿ ತಾಯಂದಿರು ಪ್ರಮುಖ ಪಾತ್ರ ವಹಿಸುತ್ತಾರೆ, ಮಕ್ಕಳ ಮೇಲೆ ನಿಗಾ ಇಡುವುದರ ಜೊತೆ ಶಾಲೆಯಲ್ಲಿ ಕಳೆದ ಸಮಯದ ಬಗ್ಗೆ ಮಾಡಿದ ಪಾಠಗಳ ಬಗ್ಗೆ ಮನೆಯಲ್ಲಿ ಮನನ ಮಾಡುವಂತೆ ತಿಳಿಸಬೇಕು,ಸಾಂಸ್ಕೃತಿಕವಾಗಿ ಶಿಕ್ಷಣ ನೀಡಬೇಕಿದೆ, ವಿವಿಧ ರಂಗಗಳಲ್ಲಿ ಸಾಧನೆ ಮಾಡುವ ಮನೋಭಾವನೆ ಮಕ್ಕಳಲ್ಲಿ ಬೆಳಸಬೇಕಿದೆ ಹಾಗೂ ಮನೆಯಲ್ಲಿ ಕಲಿಕಾ ವಾತಾವರಣ ಸೃಷ್ಟಿಮಾಡುವಂತೆ ಪೋಷಕರಿಗೆ ತಿಳಿಸಿದರು.ಪರೀಕ್ಷೆಗೆ ಉಳಿದ 80ದಿನಗಳನ್ನು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಾ , ಮನನ ಮಾಡಿಕೊಂಡು ಪರೀಕ್ಷೆಗೆ ಹೆದರದೇ ಹಬ್ಬಕ್ಕೆ ಸಜ್ಜಾಗುವಂತೆ ಮಕ್ಕಳಿಗೆ ಧೈರ್ಯ ತುಂಬಿದರು, ಯಾವುದೇ ಪಠ್ಯಕ್ಕೆ ಸಂಭಂಧಿಸಿದಂತೆ ಅನುಮಾನಗಳಿದ್ದರೆ ವಿಷಯಕ್ಕೆ ಸಂಭಂಧಿಸಿದ ಶಿಕ್ಷಕರ ಬಳಿ ನಿಸ್ಸಂಕೋಚದಿಂದ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು. 

ಸಮನ್ವಯ ಅಧಿಕಾರಿ ಬೋರಯ್ಯ ಮಾತನಾಡಿ ಪೋಷಕರು ಮಕ್ಕಳ ಶಿಕ್ಷಣದ ಪ್ರತಿಯೊಂದು ಹಂತವನ್ನು ವಿಚಾರಿಸಬೇಕು, ಶಾಲೆಯಲ್ಲಿ ಅಭ್ಯಾಸಿಸಿದರೆ ಮಕ್ಕಳ ಕಲಿಕೆ ಪೂರ್ಣವಾಯಿತು ಎಂಬ ಭ್ರಮೆಯಿಂದ ಮೊದಲು ಪೋಷಕರು ಹೊರಬರಬೇಕು ಮಕ್ಕಳಿಗೆ ಮನೆಯಲ್ಲಿ ಕಲಿಕ ವಾತವರಣ ನಿರ್ಮಿಸಬೇಕು, ಹೊಗಳುವಿಕೆ, ತೆಗಳುವಿಕೆಯಿಂದ ಶಿಕ್ಷಣ ನೀಡಿದಂತಾಗುವುದಿಲ್ಲ, ಮಕ್ಕಳ ಮನಸ್ಸನ್ನು ಅರಿತು ಶಿಕ್ಷಣ ನಿಡಬೇಕು ಎಂದರು, ವಿಶೇಷವಾಗಿ ಮಕ್ಕಳಿಗೆ ತಾಯಂದಿರು ಮೊದಲ ಗುರುವಾಗಿದ್ದು ವಿಶೇಷ ಕಾಳಜಿ ವಹಿಸುವಂತೆ ತಿಳಿಸಿದರು. 

ಶಾಲೆಯ ಉಪ ಪ್ರಾಂಶುಪಾಲ ಮಲ್ಲಪ್ಪ ಅಧ್ಯಕ್ಷೀಯ ನುಡಿಯಾಡಿದರು. ದೈಹಿಕ ಶಿಕ್ಷಕ ಎಂ.ಪಿ.ಎಂ.ಮಂಜುನಾಥ್  ನಿರೂಪಿಸಿದರು. 

ಈ ಸಂಧರ್ಭದಲ್ಲಿ ದೈಹಿಕ ಪರೀವೀಕ್ಷಕ ಕೊಟ್ರೇಶ್, ಶಿಕ್ಷಕ ಲೋಕಪ್ಪ, ಹಿರಿಯ ಶಿಕ್ಷಕ ವೆಂಕಟೇಶ್, ಅಂಜಿನಪ್ಪ, ಎಸ್‌ಡಿಎಂಸಿ ಸದಸ್ಯ ಜಮದಗ್ನಿ, ಮೌನೇಶ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ